Advertisement

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

09:57 AM May 10, 2024 | Team Udayavani |

ಉಡುಪಿ: ಉಡುಪಿ ಎಂದಾಕ್ಷಣ ನೆನಪಿಗೆ ಬರುವುದು ಶುಚಿ-ರುಚಿಯಾದ ತಿಂಡಿ-ತಿನಿಸುಗಳು, ಬಗೆಬಗೆಯ ಖಾದ್ಯಗಳು ಹಾಗೂ ಊಟೋಪಚಾರ. ಉಡುಪಿಯ ಜನರು ಆಹಾರದ ರಸಿಕರು ಎಂಬ ಮಾತೂ ಇದೆ. ಈ ನೆಲೆಯಲ್ಲಿ ಅಡುಗೆಗೆ ವಿಶ್ವದಲ್ಲಿಯೇ ಹೆಸರು ಗಳಿಸಿದ ಉಡುಪಿಯಲ್ಲಿ ಇದೀಗ ಹೊಸತನದೊಂದಿಗೆ ತಾಜಾ ಮತ್ತು ಪರಿಶುದ್ಧತೆಯ ಸಾಂಪ್ರದಾಯಿಕ ಆಹಾರೋತ್ಪನ್ನಗಳನ್ನು ಒದಗಿಸುವ ಉದ್ದೇಶದಿಂದ ಉಡುಪಿ ಮೂಲದವರಿಂದ ಇತ್ತೀಚೆಗೆ ಕಿನ್ನಿಮೂಲ್ಕಿ ಮುಖ್ಯರಸ್ತೆಯ ಸಿಲ್ವರ್‌ ಬೆಲ್‌ ಕಟ್ಟಡದಲ್ಲಿ ನೂತನವಾಗಿ ಸ್ಥಾಪನೆಗೊಂಡ “ಲಾ ಸೇವ್ಯು ಬೇಕರಿ’ ಸಂಸ್ಥೆ ವತಿಯಿಂದ ಚಿಟಾ³ಡಿಯ ಬೀಡಿನಗುಡ್ಡೆ ಮೈದಾನದಲ್ಲಿ ಮೇ 24ರಿಂದ 26ರ ತನಕ “ಆಹಾರ ಮತ್ತು ವ್ಯಾಪಾರ ಮೇಳ-2024′ ಆಯೋಜಿಸಲಾಗಿದೆ. ಆಹಾರ ಮೇಳದಲ್ಲಿ ವಿವಿಧ ಆಕರ್ಷಕ ಆಹಾರ ಮಳಿಗೆಗಳು, ಪೀಠೊಪಕರಣಗಳ ಎಕ್ಸ್‌ಪೋ, ಲೈವ್‌ ಸ್ಟೇಷನ್‌ಗಳು, ವಿದ್ಯಾರ್ಥಿಗಳ ವಿಭಾಗ, ಎಜುಕೇಟರ್ ಲಾಂಜ್‌, ಗೃಹೋಪಯೋಗಿ ವಸ್ತುಗಳ ವಿಭಾಗ, ಗೇಮ್‌ ಕಾರ್ನರ್‌, ಮಾಧ್ಯಮ ಮತ್ತು ಪತ್ರಿಕಾ ವಿಭಾಗ ಸೇರಿದಂತೆ ವಿವಿಧ ಮಳಿಗೆಗಳು ಇರಲಿವೆ.

Advertisement

ಎಐಸಿಟಿಇ ಮತ್ತು ಎನ್‌ಎಸ್‌ಡಿಸಿ ಸಂಸ್ಥೆಗಳ ಮಾನ್ಯತೆ ಪಡೆದ ಲಾ ಸೇವ್ಯು ಬೇಕರಿ ಮತ್ತು ಸಂಸ್ಥೆ ಕುರಿತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: //www.lessaveurs.org ವೀಕ್ಷಿಸಲು ಸಂಸ್ಥೆಯ ಸಿಇಒ, ಚೆಫ್ ಮತ್ತು ಸಹಸಂಸ್ಥಾಪಕ ಶ್ರೀಹರ್ಷ ಜಿ.ಎಲ್‌. ಉಪಾಧ್ಯ ತಿಳಿಸಿದ್ದಾರೆ.

ಮಳಿಗೆ ತೆರೆಯಲು ಸಂಪರ್ಕಿಸಿ
ಉಡುಪಿಯ ವೈವಿಧ್ಯಮಯ ಆಹಾರೋತ್ಪನ್ನಗಳ ಪರಿಚಯದೊಂದಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಈ ಆಹಾರ ಮೇಳದಲ್ಲಿ ಭಾಗವಹಿಸಲಿಚ್ಛಿಸುವ ಆಹಾರೋತ್ಪನ್ನ ಸಂಸ್ಥೆ ಮತ್ತು ಮಳಿಗೆಗಳು ಮೇಳದಲ್ಲಿ ಮಳಿಗೆ ತೆರೆಯಲು ಮೊ.ಸಂ: 8431916746 ಯನ್ನು ಸಂಪರ್ಕಿಸಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next