ರಬಕವಿ-ಬನಹಟ್ಟಿ: ರಬಕವಿ ನಗರದಲ್ಲಿ ನಡೆಯುತ್ತಿರುವ ಬ್ರಹ್ಮಾನಂದ ಉತ್ಸವದ ಅಂಗವಾಗಿ ವಿವಿಧ ಸಮಾಜದ ಮಹಿಳೆಯರು ಡಿ.31ರ ಮಂಗಳವಾರ ನಡೆಸಿದ ರೊಟ್ಟಿ ಜಾತ್ರೆ ಗಮನ ಸೆಳೆಯಿತು.
17 ದಿನಗಳ ಕಾಲ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಈ ಸಂದರ್ಭದಲ್ಲಿ ಪ್ರಸಾದ ವ್ಯವಸ್ಥೆಗಾಗಿ ರಬಕವಿ ಹಾಗೂ ಸುತ್ತ ಮುತ್ತಲಿನ ಗ್ರಾಮದ ಭಾಗದ ವಿವಿಧ ಸಮಾಜದ ನೂರಾರು ಮಹಿಳೆಯರು ಮಠಕ್ಕೆ ರೊಟ್ಟಿ ನೀಡಿದರು.
ನಗರದ ಶಂಕರಲಿಂಗ ದೇವಸ್ಥಾನದಲ್ಲಿ ಗುರುಸಿದ್ಧೇಶ್ವರ ಸ್ವಾಮೀಜಿ ರೊಟ್ಟಿ ಜಾತ್ರೆಗೆ ಚಾಲನೆ ನೀಡಿದರು.
ಮಹಿಳೆಯರು ಓಂ ನಮಃ ಶಿವಾಯ ಮಂತ್ರ ಹಾಡುತ್ತ ರೊಟ್ಟಿಯ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ರಾಮಣ್ಣ ಹುಲಕುಂದ, ಮುರಿಗೆಪ್ಪ ಮಿರ್ಜಿ, ಮಾರುತಿ ಗಂಥಡೆ, ಧರೆಪ್ಪ ಉಳ್ಳಾಗಡ್ಡಿ, ಸವಿತಾ ಹೊಸೂರ, ದಾನಮ್ಮ ಬಾಗಲಮನಿ, ಗಿರಿಜಾ ತುಂಗಳ, ಮಹಾದೇವಿ ಪಚಡಿ, ಮಹಾನಂದ ಹೊರಟ್ಟಿ, ಕಾವೇರಿ ಬಾಗಲಮನಿ, ಸುನಂದಾ ಕುಲಗೋಡ, ಗೌರವ್ವ ನಿಲಜಗಿ, ಲಕ್ಷ್ಮಿ ಕುಂಬಾರ,ಅನ್ನಪೂರ್ಣಾ ಉರಭಿನವರ ಸೇರಿದಂತೆ ನೂರಾರು ಮಹಿಳೆಯರು ರೊಟ್ಟಿಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿದ್ದರು.