Advertisement

Udupi; ಬೃಹತ್ ಗೀತೋತ್ಸವ: ಭಗವದ್ಗೀತಾ ಯಜ್ಞ ಸಂಪನ್ನ

08:31 PM Dec 28, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವ ದ ಅಂಗವಾಗಿ ಶನಿವಾರ(ಡಿ28) ಭಗವದ್ಗೀತಾ ಯಜ್ಞ ಸಂಪನ್ನಗೊಂಡಿತು.ದೇಶ ವಿದೇಶಗಳಿಂದ ಆಗಮಿಸಿದ್ದ ಶ್ರೀ ಮಠದ ಭಕ್ತರು ಸಮಗ್ರ ಭಗವದ್ಗೀತಾ ಪಾರಾಯಣ ಮಾಡಿದರು.

Advertisement

ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.”ಭಗವದ್ಗೀತೆಯಲ್ಲಿ ಎಲ್ಲ ಕಾರ್ಯಗಳನ್ನು ಯಜ್ಞವಾಗಿ ಪರಿವರ್ತಿಸಿಕೊಂಡು ತನ್ಮೂಲಕ ಭಗವದನುಗ್ರಹವನ್ನು ಸಂಪಾದಿಸಿಕೊಳ್ಳುವ ಉಪಾಯವನ್ನು ಶ್ರೀ ಕೃಷ್ಣ ಪರಮಾತ್ಮ ಲೋಕಕ್ಕೆ ತಿಳಿಸಿದ್ದಾನೆ. ಅಂತಹ ಪವಿತ್ರ ಗ್ರಂಥ ದ ಶ್ಲೋಕಗಳ ಮೂಲಕವೇ ಯಜ್ಞವನ್ನು ಆಚರಿಸುವುದು ಬಹಳ ಔಚಿತ್ಯ ಪೂರ್ಣ , ಭಾಗವಹಿಸಿದವರೆಲ್ಲರಿಗೂ ಶ್ರೀಕೃಷ್ಣನ ಪರಮಾನುಗ್ರಹ ವಾಗಲಿ ಎಂದು ಹಾರೈಸಿದರು.

ಪರ್ಯಾಯ ಕಿರಿಯ ಶ್ರೀಪಾದರಾದ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.ಯೋಗೇಂದ್ರ ಭಟ್ ಹೋಮವನ್ನು ನೆರವೇರಿಸಿದರು.

ನಾಳೆ ಬೃಹತ್ ಗೀತೋತ್ಸವದ ಮಂಗಳೋತ್ಸವ

Advertisement

ರವಿವಾರ(ಡಿ29) ರಂದು ರಾಜಾಂಗಣದಲ್ಲಿ ಸಂಜೆ 5 ಗಂಟೆಗೆ ಬೃಹತ್ ಗೀತೋತ್ಸವದ ಮಂಗಳೋತ್ಸವ ನಡೆಯಲಿದೆ.ಪಾರ್ಥ ಸಾರಥಿ ಮಾದರಿಯ ಗೀತಾ ರಥವನ್ನು ರಾಜಾಂಗಣ ಪರಿಸರದಲ್ಲಿ ಎಳೆಯುವ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.

ಸಮಾರಂಭದಲ್ಲಿ ಖ್ಯಾತ ಚಿತ್ರ ನಟ ಉಪೇಂದ್ರ, ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿನೇಶ್, ಉಡುಪಿ ಜಿಲ್ಲಾ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಸೇರಿ ಗಣ್ಯರು ಭಾಗಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next