ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ “ಕೆಜಿಎಫ್-2′ ಚಿತ್ರ ಒಂದು ಸಾವಿರ ಕೋಟಿ ರೂ.ಕಲೆಕ್ಷನ್ ಸಾಧನೆ ಮಾಡಿ ಮುನ್ನುಗ್ಗುತ್ತಿದ್ದು, ಕನ್ನಡ ಮೊದಲ ದಾಖಲೆ ಬರೆದ ಚಿತ್ರ ಇದಾಗಿದ್ದು, ಹಿಂದಿ ಆವೃತ್ತಿ ಶನಿವಾರದ ವರೆಗೆ 300% ಲಾಭವನ್ನು ಗಳಿಸಿದೆ.
ಕೆಜಿಎಫ್-2 ಬಾಕ್ಸ್ ಆಫೀಸ್ ಸಾಧನೆಗಳ ದೈತ್ಯನಂತೆ ಕಂಡು ಬಂದಿದ್ದು, ಜಾಗತಿಕವಾಗಿ 1000 ಕೋಟಿ ದಾಟಿದ ನಂತರ ಮತ್ತು ಎಲ್ಲಾ ಭಾಷೆಗಳ ಕೊಡುಗೆಯೊಂದಿಗೆ ಭಾರತದಲ್ಲಿ 700 ಕೋಟಿ ದಾಟಿದೆ.
ಮೊದಲ ದಿನದಿಂದಲೂ ಹಿಂದಿ ಆವೃತ್ತಿಯು ನಾಗಲೋಟದೊಂದಿಗೆ ಮುನ್ನುಗ್ಗಿ ಬಾಲಿವುಡ್ ಮಂದಿಯ ಹುಬ್ಬೇರಿಸುವಂತೆ ಮಾಡಿದೆ. ಚಲನಚಿತ್ರ ನಿಜವಾದ ಬ್ಲಾಕ್‌ಬಸ್ಟರ್ ಏನೆಂಬುದನ್ನು ಮರುವ್ಯಾಖ್ಯಾನಿಸಿದೆ ಎಂದು ಹಲವರು ವಿಮರ್ಶಿಸಿದ್ದಾರೆ. ಈಗಾಗಲೇ ಮೂರನೇ ವಾರದಲ್ಲಿ, ದೈತ್ಯಾಕಾರದ ಸಾಹಸಗಾಥೆಯು ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಸಾಕಷ್ಟು ಸಾಮರ್ಥ್ಯವನ್ನು ತೋರಲಿದ್ದು, ಭಾನುವಾರದ ರಜೆ, ಈದ್ ರಜೆ ಚಿತ್ರಕ್ಕೆ ಇನ್ನಷ್ಟು ಕಲೆಕ್ಷನ್ ನೀಡುವುದು ಖಚಿತ.
ಚಿತ್ರದ ಹಿಂದಿ ಆವೃತ್ತಿಯನ್ನು 90 ಕೋಟಿಗೆ ಖರೀದಿಸಲಾಗಿತ್ತು.ಈಗಾಗಲೇ 360.31 ಕೋಟಿಗೂ ಹೆಚ್ಚು ಹಣ ಬಾಚಿದ್ದು, ಸಂಗ್ರಹದಿಂದ ಆ ಮೊತ್ತವನ್ನು ಕಳೆಯುವುದರಿಂದ, ಆದಾಯವು 270.31 ಕೋಟಿಗಳಷ್ಟಿದೆ. ಅದನ್ನು ಶೇಕಡಾವಾರು ಪ್ರಮಾಣದಲ್ಲಿ ಪರಿವರ್ತಿಸಿದರೆ, ಇದು 300.34% ನಷ್ಟು ದೊಡ್ಡ ಲಾಭವಾಗಿದೆ. ಎಕ್ಸೆಲ್ ಎಂಟರ್ಟೈನ್ಮೆಂಟ್ ಮತ್ತು ಎಎ ಫಿಲ್ಮ್ಸ್ ಚಿತ್ರದ ವಿತರಣೆಯ ಹಕ್ಕನ್ನು ಪಡೆದಿದ್ದರು.
ಕೆಜಿಎಫ್-2 ಹೊರತಾಗಿ, ಕಾಶ್ಮೀರ ಫೈಲ್ಸ್ ಮಾತ್ರ 2022 ರ ಲಾಭದಾಯಕ ಹಿಂದಿ ಚಲನಚಿತ್ರಗಳ ಭಾಗವಾಗಿದೆ. ಕೆಜಿಎಫ್-2 (ಹಿಂದಿ) ಲಾಭ ಗಳಿಸುವಲ್ಲಿ ಎಷ್ಟು ದೂರ ಸಾಗುತ್ತದೆ, ಇನ್ನೆಷ್ಟು ದಾಖಲೆಗಳನ್ನು ಬರೆಯುತ್ತದೆ ಎಂದು ಕಾಡು ನೋಡೋಣ.