ಕೋವಿಡ್ ಬಳಿಕ ಬಾಲಿವುಡ್ (Bollywood) ಚಿತ್ರರಂಗ ಚೇತರಿಸಿಕೊಳ್ಳದೆ ಪರದಾಡಿತ್ತು. ಆದರೆ ದಿನೇ ದಿನೇ ಹೋಗುತ್ತಿದ್ದಂತೆ ನಿಧಾನವಾಗಿ ಬಾಲಿವುಡ್ನ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗಳಿಕೆಯಲ್ಲಿ ಚಿಗುರಲು ಶುರುವಾಗಿದೆ.
ಬಾಲಿವುಡ್ಗೆ ಕಂಬ್ಯಾಕ್ ತಂದುಕೊಟ್ಟ ವರ್ಷವೆಂದರೆ ಅದು 2023 ಎಂದರೆ ತಪ್ಪಾಗದು. ಶಾರುಖ್ ಖಾನ್ (Shah Rukh Khan) ʼಪಠಾಣ್ʼ, ʼಜವಾನ್ʼ, ʼಡಂಕಿʼ ಯಂತಹ ಸಿನಿಮಾಗಳ ಜತೆ ಸನ್ನಿ ಡಿಯೋಲ್ (Sunny Deol) ಅವರ ʼಗದರ್ -2ʼ , ರಣ್ಬೀರ್ ಕಪೂರ್ (Ranbir Kapoor) ʼಅನಿಮಲ್ʼ ಸಿನಿಮಾಗಳು ಬಿಟೌನ್ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಗಳಿಕೆ ತಂದುಕೊಟ್ಟಿತು.
2024ರ ಆರಂಭ ಕೂಡ ಬಾಲಿವುಡ್ಗೆ ಗೋಲ್ಡನ್ ಸ್ಟಾರ್ಟ್ ತಂದುಕೊಟ್ಟಿತು. ʼಫೈಟರ್ʼ ನಂತಹ ಮಲ್ಟಿಸ್ಟಾರ್ಸ್ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ಬೂಸ್ಟ್ಗೆ ಉತ್ತಮ ಆರಂಭವನ್ನು ತಂದುಕೊಟ್ಟಿತು.
ʼಸ್ತ್ರೀ-2ʼ , ʼ ಭೂಲ್ ಭುಲೈಯಾ 3ʼ, ʼಸಿಂಗಂ ಎಗೇನ್ʼ , ಸೈತಾನ್ʼ ನಂತಹ ಸಿನಿಮಾಗಳು ನಿರೀಕ್ಷೆಗೂ ಮೀರಿ ಯಶಸ್ಸಿನ ಜತೆ ಭರ್ಜರಿ ಕಲೆಕ್ಷನ್ ಮಾಡಿಕೊಟ್ಟಿತು. ಇನ್ನುʼ ಬಡೇ ಮಿಯಾನ್ ಚೋಟೆ ಮಿಯಾನ್ʼ, ʼಮೈದಾನ್ʼ, ʼಸರ್ಫಿರಾʼ, ʼಜಿಗ್ರಾʼ ಅಂತಹ ಬಹು ನಿರೀಕ್ಷಿತ ಸಿನಿಮಾಗಳು ಮಕಾಡೆ ಮಲಗಿತು.
ಪ್ಯಾನ್ ಇಂಡಿಯಾ (Pan India) ಭಾಷೆಯ ಚಿತ್ರಗಳು ಬಾಲಿವುಡ್ನಲ್ಲಿ ಅಂದರೆ ಹಿಂದಿ ವರ್ಷನ್ನಲ್ಲಿ ಸಖತ್ ಕಲೆಕ್ಷನ್ ಮಾಡಿ ಈ ವರ್ಷ ಸದ್ದು ಮಾಡಿದೆ. 2024ರಲ್ಲಿ ಸೋಲು – ಗೆಲುವು ಕಂಡ ಬಾಲಿವುಡ್ ಸಿನಿಮಾಗಳ ಸುತ್ತ ಒಂದು ನೋಟ ಇಲ್ಲಿದೆ.
2024ರ ಟಾಪ್ 10 ಬಾಲಿವುಡ್ ಹಿಟ್ಸ್:
ಚಿತ್ರ: ʼಸ್ತ್ರೀ -2ʼ
ರಿಲೀಸ್ ಡೇಟ್ : ಆಗಸ್ಟ್ 15
ಬಾಕ್ಸ್ ಆಫೀಸ್ ಗಳಿಕೆ: 627.02 ಕೋಟಿ ರೂ.
ಚಿತ್ರ: ಭೂಲ್ ಭುಲೈಯಾ 3
ರಿಲೀಸ್ ಡೇಟ್ : ನವೆಂಬರ್ 1
ಬಾಕ್ಸ್ ಆಫೀಸ್ ಗಳಿಕೆ: 278.42 ಕೋಟಿ ರೂ.
ಚಿತ್ರ: ಸಿಂಗಂ ಎಗೇನ್
ರಿಲೀಸ್ ಡೇಟ್ : ನವೆಂಬರ್ 1
ಬಾಕ್ಸ್ ಆಫೀಸ್ ಗಳಿಕೆ: 268.35 ಕೋಟಿ ರೂ.
—————————————————————————————————————————————-
ಚಿತ್ರ: ಫೈಟರ್
ರಿಲೀಸ್ ಡೇಟ್: ಜನವರಿ 25
ಬಾಕ್ಸ್ ಆಫೀಸ್ ಗಳಿಕೆ: 205.55 ಕೋಟಿ ರೂ.
—————————————————————————————————————————————-
ಚಿತ್ರ: ಸೈತಾನ್
ರಿಲೀಸ್ ಡೇಟ್: ಮಾರ್ಚ್ 8
ಬಾಕ್ಸ್ ಆಫೀಸ್ ಗಳಿಕೆ: 149.49 ಕೋಟಿ ರೂ.
ಚಿತ್ರ: ಮುಂಜ್ಯಾ
ರಿಲೀಸ್ ಡೇಟ್: ಜೂನ್ 7
ಬಾಕ್ಸ್ ಆಫೀಸ್ ಗಳಿಕೆ: 107.48 ಕೋಟಿ ರೂ.
—————————————————————————————————————————————-
ಚಿತ್ರ: ಕ್ರ್ಯೂ
ರಿಲೀಸ್ ಡೇಟ್: ಮಾರ್ಚ್ 29
ಬಾಕ್ಸ್ ಆಫೀಸ್ ಗಳಿಕೆ: 89.92 ಕೋಟಿ ರೂ.
—————————————————————————————————————————————-
ಚಿತ್ರ: ಅರ್ಟಿಕಲ್ 370
ರಿಲೀಸ್ ಡೇಟ್ : ಫೆ.23
ಬಾಕ್ಸ್ ಆಫೀಸ್ ಗಳಿಕೆ: 82.37 ರೂ.
ಚಿತ್ರ: ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ
ರಿಲೀಸ್ ಡೇಟ್: ಫೆಬ್ರವರಿ 9
ಬಾಕ್ಸ್ ಆಫೀಸ್ ಗಳಿಕೆ: 80.88 ಕೋಟಿ ರೂ.
—————————————————————————————————————————————-
ಚಿತ್ರ: ಬ್ಯಾಡ್ ನ್ಯೂಸ್
ರಿಲೀಸ್ ಡೇಟ್: ಜುಲೈ 19
ಬಾಕ್ಸ್ ಆಫೀಸ್ ಗಳಿಕೆ: 66.28 ಕೋಟಿ ರೂ.
2024ರ ಬಾಲಿವುಡ್ ಫ್ಲಾಪ್ ಸಿನಿಮಾಗಳು:
ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಸ್ಟಾರ್ ಸಿನಿಮಾಗಳಲ್ಲಿ ಕಥೆ ಇಲ್ಲದಿದ್ರೂ, ತನ್ನ ಮೆಚ್ಚಿನ ನಾಯಕನಿದ್ದಾನೆ ಎನ್ನುವ ಕಾರಣಕ್ಕೆ ಸಿನಿಮಾ ಹೇಗಾದರೂ ಮಾಡಿ 100 ಕೋಟಿ ಗಳಿಕೆ ಮಾಡುತ್ತಿತ್ತು. ಈಗ ಕಾಲ ಬದಲಾಗುವುದರ ಜತೆಗೆ ಪ್ರೇಕ್ಷಕರು ಕಂಟೆಂಟ್ ಕಿಂಗ್ ಎನ್ನುವ ಕಾನ್ಸೆಪ್ಟ್ನೊಂದಿಗೆ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದಾರೆ.
ಈ ವರ್ಷ ತೆರೆಕಂಡ ಬಾಲಿವುಡ್ ಕೆಲ ಬಹು ನಿರೀಕ್ಷಿತ ಸಿನಿಮಾಗಳಿಗೆ ದೊಡ್ಡ ಸೋಲಾಗಿದೆ. ಇದರಲ್ಲಿ ಅಕ್ಷಯ್ ಕುಮಾರ್(Akshay Kumar), ಆಲಿಯಾ ಭಟ್ (Alia Bhatt), ಟೈಗರ್ ಶ್ರಾಫ್ (Tiger Shroff) ಅವರಂತಹ ಸ್ಟಾರ್ ಗಳ ಸಿನಿಮಾಗಳು ಸೇರಿವೆ. ಹಾಗಾದ್ರೆ ಯಾವೆಲ್ಲ ಸಿನಿಮಾಗಳು ಗಳಿಕೆ ಹಾಗೂ ಮೆಚ್ಚುಗೆ ವಿಚಾರದಲ್ಲಿ ಹಿಂದೆ ಉಳಿಯಿತು ಎನ್ನುವುದನ್ನು ನೋಡಿಕೊಂಡು ಬರೋಣ..
ಚಿತ್ರ: ದೋ ಔರ್ ದೋ ಪ್ಯಾರ್
ರಿಲೀಸ್ ಡೇಟ್: ಏ.19
ಬಾಕ್ಸ್ ಆಫೀಸ್ ಗಳಿಕೆ: 4.63 ಕೋಟಿ ರೂ.
—————————————————————————————————————————————-
ಚಿತ್ರ: ಸವಿ
ರಿಲೀಸ್ ಡೇಟ್: ಮೇ. 31
ಬಾಕ್ಸ್ ಆಫೀಸ್ ಗಳಿಕೆ: 7.97 ಕೋಟಿ ರೂ.
—————————————————————————————————————————————-
ಚಿತ್ರ: ಉಲಾಜ್
ರಿಲೀಸ್ ಡೇಟ್: ಆ.2
ಬಾಕ್ಸ್ ಆಫೀಸ್ ಗಳಿಕೆ: 8.30 ಕೋಟಿ ರೂ.
—————————————————————————————————————————————-
ಚಿತ್ರ: ಔರಾನ್ ಮೇ ಕಹಾನ್ ದಮ್ ಥಾ
ರಿಲೀಸ್ ಡೇಟ್ : ಆ.2
ಬಾಕ್ಸ್ ಆಫೀಸ್ ಗಳಿಕೆ: 8.59 ಕೋಟಿ ರೂ.
—————————————————————————————————————————————-
ಚಿತ್ರ: ಮೇನ್ ಅಟಲ್ ಹೂನ್
ರಿಲೀಸ್ ಡೇಟ್ : ಜನವರಿ 19
ಬಾಕ್ಸ್ ಆಫೀಸ್ ಗಳಿಕೆ: 8.65 ಕೋಟಿ ರೂ
ಚಿತ್ರ: ಬಕಿಂಗ್ಹ್ಯಾಮ್ ಮರ್ಡರ್ಸ್
ರಿಲೀಸ್ ಡೇಟ್ : ಸೆ. 13
ಬಾಕ್ಸ್ ಆಫೀಸ್ ಗಳಿಕೆ: 9.72 ಕೋಟಿ ರೂ
—————————————————————————————————————————————-
ಚಿತ್ರ: ಭಯ್ಯಾ ಜಿ
ರಿಲೀಸ್ ಡೇಟ್: ಮೇ 24
ಬಾಕ್ಸ್ ಆಫೀಸ್ ಗಳಿಕೆ: 9.60 ಕೋಟಿ ರೂ
—————————————————————————————————————————————-
ಚಿತ್ರ: ಯುದ್ರಾ
ರಿಲೀಸ್ ಡೇಟ್ : ಸೆ. 20
ಬಾಕ್ಸ್ ಆಫೀಸ್ ಗಳಿಕೆ: 11.31 ಕೋಟಿ ರೂ.
—————————————————————————————————————————————-
ಚಿತ್ರ: ಸರ್ಫಿರಾ
ರಿಲೀಸ್ ಡೇಟ್ : ಆ. 15
ಬಾಕ್ಸ್ ಆಫೀಸ್ ಗಳಿಕೆ: 22.13 ಕೋಟಿ ಕೋಟಿ ರೂ.
ಚಿತ್ರ: ಜಿಗ್ರಾ
ರಿಲೀಸ್ ಡೇಟ್ : ಅ.11
ಬಾಕ್ಸ್ ಆಫೀಸ್ ಗಳಿಕೆ: 30.69 ಕೋಟಿ ರೂ.
—————————————————————————————————————————————-
ಚಿತ್ರ: ಯೋಧ
ರಿಲೀಸ್ ಡೇಟ್: ಮಾ. 15
ಬಾಕ್ಸ್ ಆಫೀಸ್ ಗಳಿಕೆ: 32.45 ಕೋಟಿ ರೂ.
—————————————————————————————————————————————-
ಚಿತ್ರ: ಮಿಸ್ಟರ್ & ಮಿಸೆಸ್. ಮಾಹಿ
ರಿಲೀಸ್ ಡೇಟ್: ಮೇ 31
ಬಾಕ್ಸ್ ಆಫೀಸ್ ಗಳಿಕೆ: 36.28 32.45 ಕೋಟಿ ರೂ.
ಬಾಲಿವುಡ್ನಲ್ಲಿ ಪ್ಯಾನ್ ಇಂಡಿಯಾ ರಾಜ್..: ಪ್ಯಾನ್ ಇಂಡಿಯಾ ಎನ್ನುವ ಕಾನ್ಸೆಪ್ಟ್ ಬಂದ ಬಳಿಕ ಮೂಲ ಭಾಷೆಯಲ್ಲಿ ತೆರೆಕಂಡ ಸಿನಿಮಾಗಳು ಇತರೆ ಭಾಷೆಯಲ್ಲೂ ಕಮಾಲ್ ಮಾಡುತ್ತವೆ. ಇದು ಚಿತ್ರದ ಗಳಿಕೆಗೆ ಪಾಸಿಟಿವ್ ಅಂಶವಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಪ್ಯಾನ್ ಇಂಡಿಯಾ ಭಾಷೆಯಲ್ಲಿ ಬಹು ನಿರೀಕ್ಚಿತ ಸಿನಿಮಾಗಳು ತೆರೆ ಕಾಣುತ್ತಿದೆ. ಸೌತ್ ಸಿನಿಮಾಗಳು ಈ ವರ್ಷ ಬಾಲಿವುಡ್ನಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.
ಪ್ರಭಾಸ್ ಅವರ ʼಕಲ್ಕಿ 2898 ಎಡಿʼ ಭಾರತದಲ್ಲಿ 639.70 ಕೋಟಿ ರೂ. ಗಳಿಸಿದೆ. ಇದರಲ್ಲಿ ಹಿಂದಿ ವರ್ಷನ್ವೊಂದರಲ್ಲೇ ಸಿನಿಮಾ 294.25 ಕೋಟಿ ರೂ. ಗಳಿಕೆ ಕಂಡಿದೆ.
ಇನ್ನು ಇತ್ತೀಚೆಗೆ ರಿಲೀಸ್ ಆಗಿರುವ ಅಲ್ಲು ಅರ್ಜುನ್ ಅವರ ʼಪುಷ್ಪ-2ʼ (Pushpa 2) ಇದುವರೆಗೆ 800 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಹಿಂದಿ ವರ್ಷನ್ ನಲ್ಲೂ ಸಿನಿಮಾ ಸದ್ದು ಮಾಡುತ್ತಿದ್ದು, ಇದುವರೆಗೆ 203.7 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ.
ಮ್ಯಾಜಿಕ್ ಮಾಡಿದ ರೀ – ರಿಲೀಸ್.. ಸೌತ್ ಇಂಡಿಯಾದಲ್ಲಿದ್ದ ರೀ ರಿಲೀಸ್ ಟ್ರೆಂಡ್ ಬಾಲಿವುಡ್ನಲ್ಲೂ ಶುರುವಾಗಿದೆ. ಈ ವರ್ಷ ಬಾಲಿವುಡ್ನಲ್ಲಿ ಕೆಲ ಹಿಟ್ ಹಾಗೂ ಮೆಚ್ಚುಗೆ ಪಡೆದಿದ್ದ ಸಿನಿಮಾಗಳು ಮರು ಬಿಡುಗಡೆ ಆಗಿದೆ. ʼರಾಕ್ಸ್ಟಾರ್ʼ, ʼಲೈಲಾ ಮಜ್ನುʼ ಮತ್ತು ‘ತುಂಬಾಡ್’ , ʼಕರಣ್ ಅರ್ಜುನ್ʼ ನಂತಹ ಸಿನಿಮಾಗಳು ರೀ – ರಿಲೀಸ್ನಲ್ಲೂ ಭರ್ಜರಿ ಗಳಿಕೆ ಕಂಡಿದೆ.
ಮುಂದಿನ ವರ್ಷದ ನಿರೀಕ್ಷೆಗಳು.. ಮುಂದಿನ ವರ್ಷ ಬಾಲಿವುಡ್ನಲ್ಲಿ ಹೈಬಜೆಟ್ ಸಿನಿಮಾಗಳು ರಿಲೀಸ್ ಆಗಲಿದೆ. ಇದರಲ್ಲಿ ಅಕ್ಷಯ್ ಕುಮಾರ್ ಅವರ ʼಸ್ಕೈ ಫೋರ್ಸ್ʼ, ಸನ್ನಿ ಡಿಯೋಲ್ ಅವರ ʼಲಾಹೋರ್ 1947ʼ, ಶಾಹಿದ್ ಕಪೂರ್ ಅವರ ʼದೇವಾʼ, ವಿಕ್ಕಿ ಕೌಶಲ್ ʼಛಾವಾʼ, ಅಕ್ಷಯ್ ಮತ್ತು ಅರ್ಷದ್ ವಾರ್ಸಿ ಅವರ ʼಜಾಲಿ LLB 3ʼ, ಅಜಯ್ ದೇವಗನ್ ಅವರ ʼರೈಡ್ 2ʼ, ಬಹು-ತಾರಾಗಣದ ʼಹೌಸ್ಫುಲ್ 5ʼ, ಟೈಗರ್ ಶ್ರಾಫ್ ಅವರ ʼಭಾಘಿ-4ʼ, ಹೃತಿಕ್ ರೋಷನ್-ಜೂನಿಯರ್ ಎನ್ಟಿಆರ್ನ ವಾರ್ -2 ಆಲಿಯಾ ಭಟ್ ಅವರ ʼಆಲ್ಫಾʼ ಚಿತ್ರಗಳು ಪ್ರಮುಖವಾಗಿದೆ.