Advertisement

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

06:39 PM Dec 21, 2024 | ಸುಹಾನ್ ಶೇಕ್ |

2024 ಮುಗಿಯಲು ಇನ್ನೇನು ಕೆಲವೇ ದಿನಗಳಷ್ಟೇ ಬಾಕಿಯಿದೆ. ಬಣ್ಣದ ಲೋಕದಲ್ಲಿ ಸಿನಿಮಾಗಳ ವಿಚಾರಕ್ಕೆ ಬಂದರೆ ಸಮಾಧಾನ ತರುವ ಕಲೆಕ್ಷನ್‌ ಬಾಕ್ಸ್‌ ಆಫೀಸ್‌ನಲ್ಲಿ (Box Office) ತಂದುಕೊಟ್ಟಿದೆ.

Advertisement

ಈ ವರ್ಷ ಭಾರತೀಯ ಚಿತ್ರರಂಗದಲ್ಲಿ (Indian Movies) ಅತಿ ಹೆಚ್ಚು ಗಳಿಕೆ ತಂದುಕೊಟ್ಟ ಸಿನಿಮಾಗಳು ಯಾವುದು. ಹಾಕಿದ ಬಜೆಟ್‌ ಎಷ್ಟು, ತಂದು ಕೊಟ್ಟ ಲಾಭವೆಷ್ಟು ಮತ್ತು ಸಿನಿಮಾ ಹಿಟ್‌ ಆಯಿತೋ ಅಥವಾ ಫ್ಲಾಪ್‌ ಆಯಿತೋ ಎನ್ನುವುದರ ಕುರಿತ  ವರದಿ ಇಲ್ಲಿದೆ..

ʼಪುಷ್ಪ-2ʼ:

ಈ ವರ್ಷದ ಅತೀ ದೊಡ್ಡ ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವ ʼಪುಷ್ಪ-2ʼ (Pushpa 2: The Rule) ವರ್ಷದ ಕೊನೆಯ ತಿಂಗಳಿನಲ್ಲಿ ರಿಲೀಸ್‌ ಆಗಿದೆ. ಅಲ್ಲು ಅರ್ಜುನ್‌ – ಸುಕುಮಾರ್‌ ಜೋಡಿ ರಕ್ತ ಚಂದನ ಕಥೆಯನ್ನು ಹೀರೋಯಿಸಂ ಹಾಗೂ ಮಾಸ್‌ ಅಂಶಗಳನ್ನಿಟ್ಟುಕೊಂಡು ಹೇಳಿದ್ದು ಸದ್ಯ ಥಿಯೇಟರ್‌ನಲ್ಲಿ ಚಿತ್ರ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿದೆ.

ನಿರ್ದೇಶಕ: ಸುಕುಮಾರ್

Advertisement

ತಾರಾಗಣ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್

ಭಾಷೆ: ತೆಲುಗು

ಬಜೆಟ್: 550 ಕೋಟಿ ರೂ.

ವಿಶ್ವಾದ್ಯಂತ ಇದುವರೆಗಿನ ಗಳಿಕೆ: ರೂ 1,306.4 ಕೋಟಿ ರೂಪಾಯಿ

ಹಿಟ್/‌ ಫ್ಲಾಪ್/‌ ಸಾಧಾರಣ: ಇನ್ನು ಥಿಯೇಟರ್‌ನಲ್ಲಿದೆ.

ಕಲ್ಕಿ 2898 ಎ.ಡಿ :

ಪ್ರಭಾಸ್‌ ವೃತ್ತಿ ಬದುಕಿನ ದುಬಾರಿ ಸಿನಿಮಾಗಳಲ್ಲಿ ಒಂದಾಗಿರುವ ʼಕಲ್ಕಿʼ (Kalki 2898 AD) ಈ ವರ್ಷದ ದೊಡ್ಡ ಹಿಟ್‌. ಸೈನ್ಸ್‌ ಫಿಕ್ಷನ್‌ ಹಾಗೂ ಪೌರಾಣಿಕ ಕಥೆಯನ್ನು ಒಳಗೊಂಡಿರುವ ʼಕಲ್ಕಿʼ ತಾಂತ್ರಿಕವಾಗಿಯೂ ಸದ್ದು ಮಾಡಿತ್ತು. ಜನ ಮೆಚ್ಚುಗೆ ಪಡೆದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸಖತ್‌ ಗಳಿಕೆ ಕಂಡಿದೆ.

ನಿರ್ದೇಶಕ: ನಾಗ್ ಅಶ್ವಿನ್

ತಾರಾಗಣ: ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್

ಭಾಷೆ: ತಮಿಳು

ಬಜೆಟ್: 550 ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: ರೂ 1052.5 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಬ್ಲಾಕ್‌ ಬಸ್ಟರ್

 ʼಸ್ತ್ರೀ-2ʼ:

ಬಾಲಿವುಡ್‌ನಲ್ಲಿ ಈ ವರ್ಷ ಹಾರರ್‌ ಕಾಮಿಡಿ ಚಿತ್ರಗಳು ಹಿಟ್‌ ತಂದುಕೊಟ್ಟಿದೆ. ಅದರಲ್ಲಿ ಪ್ರಮುಖವಾದದ್ದು ʼಸ್ತ್ರೀ-2ʼ (Stree 2). ಸಿನಿಮಾದ ಮೊದಲ ಭಾಗಕ್ಕೆ ಸಿಕ್ಕ ರೆಸ್ಪಾನ್ಸ್‌ಗಿಂತ ಹೆಚ್ಚಿನ ಪ್ರತಿಕ್ರಿಯೆ ಸೀಕ್ವೆಲ್‌ಗೆ ಕೇಳಿ ಬಂತು. ಪರಿಣಾಮ ಚಿತ್ರ ಕೋಟಿ ಕೋಟಿ ಗಳಿಕೆ ಕಂಡು ಹಿಟ್‌ ಸಾಲಿಗೆ ಸೇರಿತು.

ನಿರ್ದೇಶಕ: ಅಮರ್ ಕೌಶಿಕ್

ತಾರಾಗಣ: ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ

ಭಾಷೆ: ಹಿಂದಿ

ಬಜೆಟ್: 100 ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 858.4 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಸಾರ್ವಕಾಲಿಕ ಬ್ಲಾಕ್ಬಸ್ಟರ್ (ಹಿಂದಿ ಉದ್ಯಮದಲ್ಲಿ ಇಂಡಸ್ಟ್ರಿ ಹಿಟ್)

ದಿ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್:‌  

ಬಹು ನಿರೀಕ್ಷೆ ಹುಟ್ಟಿಸಿದ್ದ ʼದಿ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ʼ (The Greatest of All Time)  ಅಂದುಕೊಂಡ ಹಾಗೆ ಕಾಲಿವುಡ್‌ನಲ್ಲಿ ಹಿಟ್‌ ಸಾಲಿಗೆ ಸೇರಿತು. ದಳಪತಿ ವಿಜಯ್‌ – ವೆಂಕಟ್‌ ಪ್ರಭು ಬಾಕ್ಸ್‌ ಆಫೀಸ್‌ನಲ್ಲಿ ಮೋಡಿ ಮಾಡಿದ್ದರು.

ನಿರ್ದೇಶಕ: ವೆಂಕಟ್‌ ಪ್ರಭು

ತಾರಾಗಣ: ದಳಪತಿ ವಿಜಯ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ

ಭಾಷೆ: ತಮಿಳು

ಬಜೆಟ್: 350ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 460.3 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಹಿಟ್

ದೇವರ ಪಾರ್ಟ್‌ -1:

ಭಾರೀ ನಿರೀಕ್ಷೆಗಳೊಂದಿಗೆ ಬಂದಿದ್ದ ಜೂ.ಎನ್‌ ಟಿಆರ್‌ ಅವರ ʼದೇವರ ಪಾರ್ಟ್-1‌ʼ (Devara: Part 1) ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂದುಕೊಂಡ ಮಟ್ಟಿಗೆ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡದೆ ಇದ್ದರೂ, ಲಾಸ್‌ ಆಗದೆ ಕಮಾಯಿ ಮಾಡಿ ಕೊಟ್ಟಿತು.

ನಿರ್ದೇಶಕ: ಕೊರಟಾಲ ಶಿವ

ತಾರಾಗಣ: ಜೂ. ಎನ್‌ ಟಿಆರ್, ಜಾಹ್ನವಿ ಕಪೂರ್, ಸೈಫ್‌ ಅಲಿಖಾನ್‌,

ಭಾಷೆ: ತೆಲುಗು

ಬಜೆಟ್: 250 ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 443.8 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಹಿಟ್

ಭೂಲ್ ಭುಲೈಯಾ 3:

ಹಾರರ್‌ ಕಾಮಿಡಿ ಜಾನರ್‌ಗೆ ಸೇರಿದ ʼಭೂಲ್ ಭುಲೈಯಾ 3ʼ (Bhool Bhulaiyaa 3) ಪಾರ್ಟ್‌ -2ನಂತೆ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ತಂದುಕೊಟ್ಟಿತು. ಕಾರ್ತಿಕ್‌ ಆರ್ಯನ್‌ ಅವರ ಅಭಿನಯ ಹಾಗೂ ಹಾಸ್ಯಭರಿತ ಸಂಭಾಷಣೆಗಳು ಚಿತ್ರದ ಯಶಸ್ಸಿಗೆ ಒಂದು ಪ್ರಮುಖ ಕಾರಣವೆಂದರೆ ತಪ್ಪಾಗದು.

ನಿರ್ದೇಶಕ: ಅನೀಸ್ ಬಾಜ್ಮೀ

ತಾರಾಗಣ: ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್

ಭಾಷೆ: ಹಿಂದಿ

ಬಜೆಟ್: 150 ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 396.7 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಸೂಪರ್‌ ಹಿಟ್

 ಸಿಂಗಂ ಅಗೇನ್:

ಬ್ಯಾಕ್‌ ಟು ಬ್ಯಾಕ್‌ ಸೋಲು ಕಂಡಿದ್ದ ರೋಹಿತ್‌ ಶೆಟ್ಟಿಗೆ ಬಿಗ್‌ ಕಂಬ್ಯಾಕ್‌ ತಂದುಕೊಟ್ಟಿದ್ದು ʼಸಿಂಗಂ ಅಗೇನ್‌ʼ (Singham Again) . ಅಜಯ್‌ ದೇವಗನ್‌, ಟೈಗರ್‌ ಶ್ರಾಫ್‌, ಅಕ್ಷಯ್‌ ಕುಮಾರ್‌, ರಣ್ವೀರ್‌ ಹೀಗೆ ಮಲ್ಟಿಸ್ಟಾರ್ಸ್‌ಗಳೊಂದಿಗೆ ಪೊಲೀಸ್‌ ಕಥೆಗೆ ರಾಮಾಯಾಣ ಟಚ್‌ ಕೊಟ್ಟ ʼಸಿಂಗಂ ಅಗೇನ್‌ʼ ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಬಾಲಿವುಡ್‌ ಸಿನಿಮಾಗಳಲ್ಲೊಂದು.

ನಿರ್ದೇಶಕ: ರೋಹಿತ್‌ ಶೆಟ್ಟಿ

ತಾರಾಗಣ: ಅಜಯ್ ದೇವಗನ್ , ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ಕರೀನಾ ಕಪೂರ್ ಖಾನ್, ದೀಪಿಕಾ ಪಡುಕೋಣೆ ಮತ್ತು ಅರ್ಜುನ್ ಕಪೂರ್.

ಭಾಷೆ: ಹಿಂದಿ

ಬಜೆಟ್: 300 ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 378.4 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಸಾಧಾರಣ

ಫೈಟರ್:‌

2024 ಆರಂಭದಲ್ಲಿ ಬಾಲಿವುಡ್‌ಗೆ ಬೂಸ್ಟ್‌ ತಂದುಕೊಟ್ಟ ʼಫೈಟರ್‌ʼ ಬಾಕ್ಸ್‌ ಆಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ವರ್ಷದ ಸಿನಿಮಾಗಳಲ್ಲೊಂದಾಗಿದೆ. ʼಪಠಾಣ್‌ʼ ಬಳಿಕ ಸಿದ್ದಾರ್ಥ್‌ ಆನಂದ್‌ ʼಫೈಟರ್‌ʼ ಮೂಲಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ತಂದುಕೊಟ್ಟರು.‌

ನಿರ್ದೇಶಕ: ಸಿದ್ದಾರ್ಥ್‌ ಆನಂದ್

ತಾರಾಗಣ: ಹೃತಿಕ್‌ ರೋಷನ್ , ದೀಪಿಕಾ ಪಡುಕೋಣೆ, ಅನಿಲ್‌ ಕಪೂರ್

ಭಾಷೆ: ಹಿಂದಿ

ಬಜೆಟ್: 225 ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 355 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಸಾಧಾರಣ

ಅಮರನ್:‌

ಮೇಜರ್ ಮುಕುಂದ್ ವರದರಾಜನ್ ಅವರ ಸಾಹಸಗಾಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಕಾಲಿವುಡ್‌ನಲ್ಲಿ ಮಾತ್ರವಲ್ಲದೆ ಭಾರತೀಯ ಸಿನಿಮಾರಂಗದಲ್ಲಿ ʼಅಮರನ್‌ʼ (Amaran) ಒಂದು ಹೊಸ ದಾಖಲೆ ಬರೆಯಿತು.

ನಿರ್ದೇಶಕ: ರಾಜಕುಮಾರ್ ಪೆರಿಯಸಾಮಿ

ತಾರಾಗಣ: ಶಿವಕಾರ್ತಿಕೇಯನ್, ಸಾಯಿ ಪಲ್ಲವಿ, ಭುವನ್ ಅರೋರಾ

ಭಾಷೆ: ತಮಿಳು

ಬಜೆಟ್: 100ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 330.2 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಬ್ಲಾಕ್‌ ಬಸ್ಟರ್

ಹನುಮಾನ್:‌

 ಕಂಟೆಂಟ್‌ ಚೆನ್ನಾಗಿದ್ದರೆ ಲೋ ಬಜೆಟ್‌ ಸಿನಿಮಾ ಕೂಡ ದೊಡ್ಡ ಗಳಿಕೆ ಕಾಣುತ್ತದೆ ಎನ್ನುವುದಕ್ಕೆ ಉದಾಹರಣೆಯಾದ ಸಿನಿಮಾ ʼಹನುಮಾನ್ʼ. ಸೂಪರ್‌ ಹೀರೋ ಜಾನರ್‌ನಲ್ಲಿ ಬಂದ ʼಹನುಮಾನ್‌ʼ (Hanuman) ಹಿಟ್‌ ಆಗುವುದರ ಜತೆಗೆ ಸೀಕ್ವೆಲ್‌ಗೂ ಸಿದ್ದವಾಗಿದೆ.

ನಿರ್ದೇಶಕ: ಪ್ರಶಾಂತ್‌ ವರ್ಮಾ

ತಾರಾಗಣ: ತೇಜ ಸಜ್ಜ, ಅಮೃತ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್

ಭಾಷೆ: ತಮಿಳು

ಬಜೆಟ್: 40 ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 296.5 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಬ್ಲಾಕ್‌ ಬಸ್ಟರ್

ಮಂಜುಮ್ಮೆಲ್ ಬಾಯ್:

ಈ ವರ್ಷ ಮಾಲಿವುಡ್‌ ನಲ್ಲಿ ಬಂದ ಚಿದಂಬರಂ ಎಸ್. ಪೊದುವಾಳ್ ನಿರ್ದೇಶನದ ʼಮಂಜಮ್ಮೆಲ್‌ ಬಾಯ್ಸ್‌ʼ (Manjummel Boys) ಈ ವರ್ಷದ ಬಿಗ್ ಹಿಟ್‌ ಸಿನಿಮಾಗಳಲ್ಲೊಂದು. ಒಂದು ಫ್ರೆಂಡ್ಸ್‌ ಗ್ರೂಪ್‌ ಪ್ರವಾಸವೊಂದಕ್ಕೆ ಹೋಗುವಾಗ ನಡೆದ ದುರಂತದ ಕಥೆಯನ್ನು ಕಾಮಿಡಿ, ಗಂಭೀರ ಹಾಗೂ ಥ್ರಿಲ್‌ ನೀಡುವ ಹಾಗೆ ತೋರಿಸಲಾಗಿದೆ. ನೈಜ ಘಟನೆ ಆಧಾರಿತ ಈ ಕಥೆಯನ್ನು ದೊಡ್ಡ ಸ್ಕ್ರೀನ್‌ ನಲ್ಲಿ ನೈಜವಾದ ರೀತಿಯಲ್ಲೇ ತೋರಿಸಲಾಗಿದೆ. 20 ಕೋಟಿ ಬಜೆಟ್‌ ನಲ್ಲಿ ಬಂದ ʼಮಂಜಮ್ಮೆಲ್ ಬಾಯ್ಸ್‌ʼ ಕೋಟಿ ಕೋಟಿ ಗಳಿಕೆ ಕಂಡಿದೆ.

ನಿರ್ದೇಶಕ: ಚಿದಂಬರಂ

ತಾರಾಗಣ: ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್

ಭಾಷೆ: ಮಲಯಾಳಂ

ಬಜೆಟ್: 20 ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 241.2 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಬ್ಲಾಕ್‌ ಬಸ್ಟರ್

ಸೈತಾನ್:‌  

ಸಣ್ಣ ಬಜೆಟ್‌ನಲ್ಲಿ ಹಿಟ್‌ ಆದ ಹಿಂದಿಯ ʼಸೈತಾನ್‌ʼ ಅಜಯ್‌ ದೇವಗನ್‌ ಅವರಿಗೆ ಕಂಬ್ಯಾಕ್‌ ತಂದುಕೊಟ್ಟಿತು. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯನ್ನು ಹೇಳಿದ ʼಸೈತಾನ್‌ʼ ಈ ವರ್ಷ ಬಾಲಿವುಡ್‌ಗೆ ಬೂಸ್ಟ್‌ ತಂದುಕೊಟ್ಟ ಸಿನಿಮಾಗಳಲ್ಲಿ ಒಂದಾಗಿದೆ.

ನಿರ್ದೇಶಕ: ವಿಕಾಸ್ ಬಹ್ಲ್

ತಾರಾಗಣ: ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್

ಭಾಷೆ: ಮಲಯಾಳಂ

ಬಜೆಟ್: 80 ಕೋಟಿ ರೂ.

ವಿಶ್ವಾದ್ಯಂತ ಗಳಿಕೆ: 212.2 ಕೋಟಿ ರೂ.

ಹಿಟ್/‌ ಫ್ಲಾಪ್/‌ ಸಾಧಾರಣ: ಹಿಟ್

ಇತರೆ ಸಿನಿಮಾಗಳು:

ಇವಿಷ್ಟು ಮಾತ್ರವಲ್ಲದೆ, ಕಾಲಿವುಡ್‌ನ ಮಹಾರಾಜ ಬರೀ 30 ಕೋಟಿ ಬಜೆಟ್‌ನಲ್ಲಿ ತಯಾರಾಗಿ 170 ಕೋಟಿ ರೂ. ಗಳಿಕೆ ಕಂದು ದೊಡ್ಡ ಹಿಟ್‌ ಆಗಿದೆ. ಮಹೇಶ್‌ ಬಾಬು ಅವರ ʼಗುಂಟೂರು ಕಾರಂʼ 130 ಕೋಟಿ ರೂ.ನಲ್ಲಿ ನಿರ್ಮಾಣವಾಗಿ 184.2 ಕೋಟಿ ಗಳಿಕೆ ಕಂಡಿತು. ಆ ಮೂಲಕ ಸಾಧಾರಣ ಹಿಟ್‌ ಆಯಿತು. ರಜಿನಿಕಾಂತ್‌ ಅವರ ʼವೆಟ್ಟೈಯಾನ್ʼ ಅಷ್ಟಾಗಿ ಕಮಾಲ್‌ ಮಾಡದಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ಬಜೆಟ್‌ನಲ್ಲಿ 255.8 ಕೋಟಿ ರೂಪಾಯಿಯನ್ನು ಮಾತ್ರ ಗಳಿಸಿತು.

ಪೃಥ್ವಿರಾಜ್‌ ಅವರ ʼದಿ ಗೋಟ್‌ ಲೈಫ್‌ʼ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. 60 ಬಜೆಟ್‌ನಲ್ಲಿ ಬಂದಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 159.1 ಕೋಟಿ ರೂ. ಗಳಿಸಿತು. ಆ ಮೂಲಕ ಬ್ಲಾಕ್‌ ಬಸ್ಟರ್‌ ಹಿಟ್‌ ಆಯಿತು. ʼಕ್ರ್ಯೂʼ ಹಿಂದಿ ಸಿನಿಮಾರಂಗದಲ್ಲಿ ಸಣ್ಣ ಬಜೆಟ್‌ನಲ್ಲಿ ಹಿಟ್‌ ಆದ ಮತ್ತೊಂದು ಸಿನಿಮಾ. ತಬು, ಕರೀನಾ ಕಪೂರ್, ಕೃತಿ ಸನನ್ ಪ್ರಧಾನ ಭೂಮಿಕೆ ʼಕ್ರ್ಯೂʼ 60 ಕೋಟಿ ನಿರ್ಮಾಣದಲ್ಲಿ ತಯರಾಗಿದ್ದು, 156.8 ಕೋಟಿ ರೂ. ಗಳಿಸಿತು. ಕಾಲಿವುಡ್‌ ನಟ ಧನುಷ್‌ ಅವರು ಬಹು ಸಮಯದ ಬಳಿಕ ಡೈರೆಕ್ಷನ್‌ ಕ್ಯಾಪ್‌ ತೊಟ್ಟ ʼರಾಯನ್‌ʼ ಕಾಲಿವುಡ್‌ನಲ್ಲಿ ದೊಡ್ಡ ಹಿಟ್‌ ಆಯಿತು. 70 ಕೋಟಿ ರೂ. ಬಜೆಟ್‌ನಲ್ಲಿ 156.1 ಕೋಟಿ ರೂ. ಗಳಿಕೆ ಕಂಡು ಬ್ಲಾಕ್‌ ಬಸ್ಟರ್‌ ಹಿಟ್‌ ಆಯಿತು. ಫಾಹದ್‌ ಫಾಸಿಲ್‌ ಅವರ ಅಭಿನಯದಿಂದಲೇ ದೊಡ್ಡ ಹಿಟ್‌ ಪಡೆದ ʼಆವೇಶಮ್‌ʼ ಮಾಲಿವುಡ್‌ನಲ್ಲಿ ಈ ವರ್ಷ ಬ್ಲಾಕ್‌ ಬಸ್ಟರ್‌ ಲಿಸ್ಟ್‌ಗೆ ಸೇರಿದೆ. ಬರೀ 30 ಕೋಟಿಯಲ್ಲಿ ತಯರಾಗಿ 154.3 ಕೋಟಿ ಗಳಿಕೆ ಕಂಡಿತು.

*ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next