Advertisement

ಕೆಸಿಸಿ ಟಿ-10 ಕ್ರಿಕೆಟ್‌ ಲೀಗ್‌ ಪ್ರಾರಂಭ

11:24 AM Apr 08, 2018 | Team Udayavani |

ಸುದೀಪ್‌ ನೇತೃತ್ವದಲ್ಲಿ ಶುರುವಾಗಿರುವ “ಕೆಸಿಸಿ ಟಿ-10′ (ಕರ್ನಾಟಕ ಚಲನಚಿತ್ರ ಕ್ರಿಕೆಟ್‌ ಕಪ್‌) ಕ್ರಿಕೆಟ್‌ ಲೀಗ್‌ಗೆ ಕೊನೆಗೂ ಶನಿವಾರ ಚಾಲನೆ ಸಿಕ್ಕಿದೆ. ಶನಿವಾರ ಬೆಳಿಗ್ಗೆ ನೆಲಮಂಗಲ ಬಳಿಯ ಕ್ರೀಡಾಂಗಣದಲ್ಲಿ ಈ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು, ಜಗ್ಗೇಶ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement

ಈ ಕ್ರಿಕೆಟ್‌ ಲೀಗ್‌ನಲ್ಲಿ ಆರು ತಂಡಗಳಿದ್ದು, ಆ ತಂಡಗಳಲ್ಲಿ ಶಿವರಾಜಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ರಕ್ಷಿತ್‌ ಶೆಟ್ಟಿ, ಯಶ್‌ ಮತ್ತು ದಿಗಂತ್‌ ಆಡಲಿದ್ದಾರೆ. ಆರು ತಂಡಗಳಿಗೂ ಕೆಪಿಎಲ್‌ ಮತ್ತು ಸಿಸಿಎಲ್‌ ಆಟಗಾರರನ್ನೂ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗಿದ್ದು, ಗೌತಮ್‌, ನಿಹಾಲ್‌ ಉಲ್ಲಾಳ್‌, ರೋಹಿತ್‌ ಗೌಡ, ಸ್ಟಾಲಿನ್‌, ಶರತ್‌, ರಕ್ಷಿತ್‌, ಕೆ.ಸಿ.ಕರಿಯಪ್ಪ, ರಿತೇಶ್‌ ಭಟ್ಕಳ್‌, ಶಬನ್‌ ಹೆಗ್ಡೆ, ಕಿಶೋರ್‌ ಕಾಮತ್‌, ರಜತ್‌ ಹೆಗಡೆ ಮತ್ತು ಪ್ರಶಾಂತ್‌ ಇವರು “ಕೆಸಿಸಿ ಟಿ-10′ ಲೀಗ್‌ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.

ಈ ಆರು ತಂಡಗಳಿಗೆ ಇಂದ್ರಜಿತ್‌ ಲಂಕೇಶ್‌, ಜಾಕ್‌ ಮಂಜು, ನಂದಕಿಶೋರ್‌, ಸದಾಶಿವ ಶೆಣೈ, ಕೆ.ಪಿ. ಶ್ರೀಕಾಂತ್‌ ಮತ್ತು ಕೃಷ್ಣ  ನಾಯಕರಾಗಿದ್ದಾರೆ. ಈ ಸಂದರ್ಭದಲ್ಲಿ ಗೀತಾ ಶಿವರಾಜಕುಮಾರ್‌, ಪ್ರಿಯಾ ಸುದೀಪ್‌, ಸಾಧು ಕೋಕಿಲ, ನಿರ್ಮಾಪಕ ಜಯಣ್ಣ ಸೇರಿದಂತೆ ಹಲವು ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next