Advertisement

Test; ಪಾಕಿಸ್ಥಾನಕ್ಕೆ 10 ವಿಕೆಟ್‌ ಸೋಲು :ದಕ್ಷಿಣ ಆಫ್ರಿಕಾ 2-0 ಕ್ಲೀನ್‌ಸ್ವೀಪ್‌

11:42 PM Jan 06, 2025 | Team Udayavani |

ಕೇಪ್‌ಟೌನ್‌: ಪಾಕಿಸ್ಥಾನ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯವನ್ನು 10 ವಿಕೆಟ್‌ಗಳಿಂದ ಜಯಿಸಿದ ದಕ್ಷಿಣ ಆಫ್ರಿಕಾ ಸರಣಿಯನ್ನು 2-0 ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ.

Advertisement

421 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಪಾಕಿಸ್ಥಾನ ಫಾಲೋಆನ್‌ಗೆ ಸಿಲುಕಿತ್ತು. ನಾಯಕ ಶಾನ್‌ ಮಸೂದ್‌ (145)-ಬಾಬರ್‌ ಆಜಂ (81) ಮೊದಲ ವಿಕೆಟಿಗೆ 205 ರನ್‌ ಒಟ್ಟುಗೂಡಿಸಿ ತಂಡವನ್ನು ಇನ್ನಿಂಗ್ಸ್‌ ಸೋಲಿನಿಂದ ಪಾರುಮಾಡಿದರು. ದ್ವಿತೀಯ ಸರದಿಯಲ್ಲಿ ಪಾಕ್‌ 478 ರನ್‌ ಪೇರಿಸಿತು.

ಗೆಲುವಿಗೆ 58 ರನ್ನುಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ 7.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ಸಾಧಿಸಿತು.
ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶ ಪಾಕಿಸ್ಥಾನದ ಮುಂದಿತ್ತು. ಆದರೆ ಇದನ್ನು 2 ವಿಕೆಟ್‌ಗಳಿಂದ ಕಳೆದುಕೊಂಡಿತು. ಈ ಫ‌ಲಿತಾಂಶದಿಂದ ದಕ್ಷಿಣ ಆಫ್ರಿಕಾ ಮೊದಲ ಸಲ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-615 ಮತ್ತು ವಿಕೆಟ್‌ ನಷ್ಟವಿಲ್ಲದೆ 58. ಪಾಕಿಸ್ಥಾನ-194 ಮತ್ತು 478.

Advertisement

Udayavani is now on Telegram. Click here to join our channel and stay updated with the latest news.

Next