ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಅವರು ಎಲಿಮಿನೇಟ್ ಆಗಿದ್ದಾರೆ. ಕಣ್ಣೀರಿನಿಂದಲೇ ಉಳಿದ ಸ್ಪರ್ಧಿಗಳು ಐಶ್ವರ್ಯಾ ಅವರಿಗೆ ವಿದಾಯ ಹೇಳಿದ್ದಾರೆ. ಕಣ್ಣಂಚಿನಲ್ಲಿ ನೀರು ತುಂಬಿಸಿಕೊಂಡು ಇದು ತಮ್ಮದೇ ಮನೆಯೆಂದು ಹೇಳಿ ಐಶ್ವರ್ಯಾ ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಇನ್ನೊಂದು ಕಡೆ ದೊಡ್ಮನೆಯ ಆಟ ಸಾಮಾನ್ಯ ದಿನದಂತೆ ಮುಂದುವರೆದಿದೆ. ದಿನಸಿ ಸಾಮ್ರಾಗಿಗಳನ್ನು ಗಳಿಸಿಕೊಡುವ ಸಾಮಾರ್ಥ್ಯವಿರುವ 6 ಸದಸ್ಯರು ಯಾರು ಎಂದು ಘೋಷಿಸಬೇಕೆಂದು ಬಿಗ್ ಬಾಸ್ ಹೇಳಿದ್ದಾರೆ.
ಈ ವಿಚಾರದಲ್ಲಿ ಸ್ಪರ್ಧಿಗಳ ನಡುವೆಯೇ ಮಾತಿನ ಚಕಮಕಿ ಉಂಟಾಗಿ ಗೊಂದಲ ಸೃಷ್ಟಿಯಾಗಿದೆ.
ಮಂಜು ಅವರು ಯಾವುದೇ ಟಾಸ್ಕ್ ಬಂದ್ರು ನಾವು ಆಡೋದಕ್ಕೆ ಸಿದ್ದವಾಗಿದ್ದೇವೆ ಎಂದಿದ್ದಾರೆ. ಚೈತ್ರಾ, ಧನರಾಜ್, ಮೋಕ್ಷಿತಾ ಅವರು ನಾವು ಆಡುತ್ತೇವೆ ಎಂದು ಹೇಳಿದ್ದಾರೆ.
ಚೈತ್ರಾ ಅವರು ಟಾಸ್ಕ್ ಗಳನ್ನು ಆಡೋಕೆ ಆಗಲ್ಲ. ಧನರಾಜ್ ನಿನಗೆ ಆಡೋಕೆ ಆಡಲ್ಲ ಅಂದ್ರೆ ಸ್ಟಪ್ ಬ್ಯಾಕ್ ಆಗು ಎಂದು ಮಂಜು ಹೇಳಿದ್ದು, ಇದಕ್ಕೆ ತ್ರಿವಿಕ್ರಮ್ ಅವರು ನಿಮ್ಮ ಪ್ರಾಬ್ಲಂ ಏನಣ್ಣ ಎಂದು ಪ್ರಶ್ನೆ ಮಾಡಿದ್ದಾರೆ.
ದಿನಸಿ ಗಳಿಕೆ ನಿಮ್ಮ ಕಡೆಯಿಂದ ಏನಾದ್ರು ಡ್ಯಾಮೇಜ್ ಆಯಿತು ಅಂದ್ರೆ ಏನು ಮಾಡೋದು ಎಂದಾಗ ನಾನು ಆಡ್ತೀನಿ ಆಡಬೇಕೆಂದು ಮಂಜು ಹೇಳಿದ್ದಾರೆ.
ಯಾವ ಸ್ಪರ್ಧಿ ಯಾವ ನಕಾರಾತ್ಮಕ ಗುಣಗಳನ್ನು ಹೊಂದಿರುತ್ತಾರೋ ಅವರಿಗೆ ಕಷಾಯ ಕುಡಿಯುವ ಟಾಸ್ಕ್ ನೀಡಲಾಗಿದೆ. ಇದಕ್ಕೆ ರಜತ್ ಅವರು ಕುತಂತ್ರಿ ಬುದ್ದಿಯ ರೋಗ ಚೈತ್ರಾ ಅವರು ಎಂದು ಅವರಿಗೆ ಕಷಾಯ ಕುಡಿಸಿದ್ದಾರೆ. ದುರಹಂಕಾರ ನಿರ್ವಹಣೆಯ ಕಷಾಯವನ್ನು ಮಂಜು ಅವರಿಗೆ ಭವ್ಯ ಅವರು ಕುಡಿಸಿದ್ದಾರೆ. ನಿಮಗೆ ನಾನು ಅಂಥ ತುಂಬಾ ಇದೆ ಎಂದಿದ್ದಾರೆ. ಇದಕ್ಕೆ ನಾನು ಎನ್ನುವುದರಲ್ಲಿ ತಪ್ಪೇನಿದೆ. ಇದನ್ನು ನೀನು ದುರಂಹಕಾರ ಅಂಥ ಹೆಂಗೆ ಹೇಳ್ತೀಯಾ. ನೀನು ಹೇಳುವುದನ್ನು ನಾನು ಕಲಿಯಬೇಕಿಲ್ಲ ಇಲ್ಲಿ ಎಂದು ಹೇಳಿದ್ದು, ನನ್ನಿಷ್ಟ ನಾನು ಹೇಳ್ತೀನಿ. ಕಿರುಚಬೇಡಿ ಮೆಲ್ಲ ಮಾತನಾಡಿ. ಫಸ್ಟ್ ನೀವು ದೊಡ್ಡವರಾಗಿ ಕಲಿಯಿರಿ, ಚಿಕ್ಕವರಾಗಿ ನಾನು ಹೇಳ್ತೀನಿ ಎಂದು ಭವ್ಯ ಹೇಳಿದ್ದಾರೆ. ಇದಕ್ಕೆ ಮಂಜು ದೊಡ್ಡವರು ಕಪ್ ತಕ್ಕೊಂಡು ಹೋಗ್ತಾ ಇರುತ್ತೀವಿ. ಚಿಕ್ಕವರು ಮನೆಗೆ ಹೊರಟು ಬಿಡು ಎಂದಿದ್ದಾರೆ. ಚಿಕ್ಕವರಾಗಿ ಎಲ್ಲರಿಗೂ ಕಾಂಪೀಟ್ ಕೊಡ್ತಾ ಇದ್ದೀವಿ ಎಂದು ಭವ್ಯ ತಿರುಗೇಟು ನೀಡಿದ್ದಾರೆ. ಮನೆಯಲ್ಲಿ ನಾವು ಇದ್ದೀವಿ ಎಂದು ಮಂಜು ಗರಂ ಆಗಿದ್ದಾರೆ.