ಬೆಂಗಳೂರು: ಬಿಗ್ ಬಾಸ್ ಮನೆಯ ಆಟ ಫಿನಾಲೆ ದಿನಕ್ಕೆ ಸಮೀಪಿಸುತ್ತಿದ್ದಂತೆ ಆಟದ ವೈಖರಿಯೂ ಬದಲಾಗುತ್ತಿದೆ. ಫಿನಾಲೆಗೆ ಹೊಂದಿಕೊಳ್ಳುವಂತಹ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ.
ಈ ವಾರ ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಆಗಿರುವ ರಜತ್ ಅವರು ಖಳನಾಯಕ್ ಆಗಿ ಟಾಸ್ಕ್ ಮಾಸ್ಟರ್ ಆಗಿದ್ದಾರೆ. ಅವರು ಯಾರು ಫಿನಾಲೆಗೆ ಅರ್ಹತೆ ಇಲ್ಲದವರಿಗೆ ಫಲಕವನ್ನು ಹಾಕಿದ್ದಾರೆ.
ಐದು ಮಂದಿ ಫಿನಾಲೆಯಲ್ಲಿ ಇರಲು ಅರ್ಹರಲ್ಲ. ಅವರು ಮನೆಗೆ ಹೋಗಲು ಅರ್ಹರೆಂದು ʼಟಿಕೆಟ್ ಟು ಹೋಮ್ʼ ಫಲಕವನ್ನು ಹಾಕಿದ್ದಾರೆ.
ʼಗೌತಮಿ, ಭವ್ಯ, ಮೋಕ್ಷಿತಾ, ಹನುಮಂತು ಹಾಗೂ ಚೈತ್ರಾ ಅವರಿಗೆ ʼಟಿಕೆಟ್ ಟು ಹೋಮ್ʼ ಫಲಕವನ್ನು ಹಾಕಿದ್ದಾರೆ.
ಟಾಸ್ಕ್ ಅಲ್ಲಿ ಜೀರೋ. ನೀವು ಮಾತನಾಡಿಕೊಂಡೇ ಮನೆಗೆ ಹೋಗಿ. ಇಲ್ಲಿ ಇರುವವರು ಆದ್ರೂ ಆಡ್ಕೊಂಡು ಗೆಲ್ಲಲಿ ಎಂದು ರಜತ್ ಚೈತ್ರಾಗೆ ಹೇಳಿದ್ದಾರೆ.
ಇದಕ್ಕೆ ಚೈತ್ರಾ ಅವರು ಮೊದಲೇ ದಿನ ಬಂದಿದ್ರೆ 5 ದಿನಕ್ಕೆ ಲಗೇಜ್ ಇಟ್ಕೊಂಡು ಹೋಗ್ತಾ ಇದ್ರು. 50 ದಿನ ಕಳೆದ ಮೇಲೆ ಬಂದಿದ್ರಿ ಅದಕ್ಕೆ ಅದೃಷ್ಟ ಮಾಡಿದ್ದೀರಿ ಎಂದು ಉತ್ತರಿಸಿದ್ದಾರೆ. ಚೈತ್ರಾ ಮಾತಿಗೆ 50 ಆದ್ಮೇಲೆ ಬಂದಿರೋದು ನಿಮ್ಮ ಅದೃಷ್ಟ ಆರಂಭದಲ್ಲೇ ಬಂದಿದ್ದರೆ ನಿಮ್ಮನ್ನು ನಾಲ್ಕೇ ವಾರದಲ್ಲಿ ಕಳಿಸುತ್ತಿದ್ದೆ ಎಂದು ರಜತ್ ಹೇಳಿದ್ದಾರೆ.
ನೀವು ಹೇಳಿದಾಗೆ ಟಾಸ್ಕ್ ಆಡೋರು ಮಾತ್ರ ಬರಬೇಕು ಎಂದು ಚೈತ್ರಾ ಹೇಳಿದಾಗ ನಾನ್ಯಾಗ ಈ ರೀತಿ ಹೇಳಿದೆ ಎಂದು ರಜತ್ ಚೈತ್ರಾಗೆ ಸುಳ್ಳಿ ಸುಳ್ಳಿ.. ನಿಜ ಮಾತನಾಡು ಸುಳ್ಳಿ ಎಂದು ಹೇಳಿದ್ದಾರೆ.
ಇನ್ನೊಂದು ಕಡೆ ಬಿಗ್ ಬಾಸ್ ಮನೆಯಲ್ಲಿ ʼಟಿಕೆಟ್ ಟು ಫಿನಾಲೆʼ ಟಾಸ್ಕ್ ಗಳು ಶುರುವಾಗಿದೆ. ಇಂದಿನಿಂದ ಹಬ್ಬ, ಮಾರಿಹಬ್ಬ ಶುರುವಾಗಲಿದೆ. ಈ ಮನೆ ಪ್ರತಿ ಕ್ಷಣ ಒಂದೊಂದು ಯುದ್ಧ ನಡೆಯುವ ರಣಾರಂಗವಾಗಲಿದೆ ಎಂದು ಬಿಗ್ ಬಾಸ್ ಹೇಳಿದ್ದು, ಸ್ಪರ್ಧಿಗಳು ಆಟದಲ್ಲಿ ತೀವ್ರ ಪೈಪೋಟಿ ನೀಡುವುದನ್ನು ತೋರಿಸಲಾಗಿದೆ.
ವ್ಯಕ್ತಿತ್ವದಲ್ಲಿ ಹನುಮಂತು ನಿನಗಿಂತ ಮೇಲೆ ಇದ್ದಾನೆ ಎಂದು ಮಂಜು ತ್ರಿವಿಕ್ರಮ್ ಗೆ ಹೇಳಿದ್ದಾರೆ. ವ್ಯಕ್ತಿತ್ವದ ವಿಚಾರ ಮಾತನಾಡೋದು ನೀನು ನನ್ನ ಹತ್ರ ಎಂದು ತ್ರಿವಿಕ್ರಮ್ ವ್ಯಂಗ್ಯವಾಗಿ ನಕ್ಕಿ ಥೂ.. ಎಂದು ಹೇಳಿದ್ದಾರೆ. ಇದಕ್ಕೆ ಮಂಜು ಥೂ ಅಂಥ ಉಗಿದ್ದೀಯಾ ಎಂದಿದ್ದಾರೆ. ನನ್ನಷ್ಟ ನಾನು ಉಗಿತ್ತೀನಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಇಬ್ಬರ ನಡುವೆ ನಡಿಯೋ, ಹೋಗಲೋ ಎನ್ನುವ ಮಾತಿನ ಚಕಮಕಿ ನಡೆದಿರುವುದು ತೋರಿಸಲಾಗಿದೆ.