ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್(ಐಸಿಸ್)ಗೆ ಕೇರಳದಿಂದ ಯುವಕ-ಯುವತಿಯರನ್ನು ಆಕರ್ಷಿಸಲು ಶಾರ್ಜಾ, ದುಬಾೖ ಮೊದಲಾದ ಕೊಲ್ಲಿ ರಾಷ್ಟ್ರಗಳಿಂದ ಕೇರಳಕ್ಕೆ ಹೇರಳ ಹಣ ಹರಿದು ಬರುತ್ತಿದೆ ಎಂಬ ಆತಂಕಕಾರಿ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕೇರಳದಲ್ಲಿ ಐಸಿಸ್ ಬಗ್ಗೆ ತನಿಖೆ ನಡೆಸುತ್ತಿರುವ ಕಣ್ಣೂರು ಡಿವೈಎಸ್‌ಪಿ ಪಿ.ಪಿ. ಸದಾನಂದನ್ ಈ ಮಾಹಿತಿ ಹೊರಗೆಡಹಿದ್ದಾರೆ.
ಐಸಿಸ್‌ಗೆ ಸೇರಲೆಂದು ಕೊಲ್ಲಿಗೆ ಹೋಗಿ ಅಲ್ಲಿಂದ ತುರ್ಕಿ ಮೂಲಕ ಸಿರಿಯಾ ದಲ್ಲಿರುವ ಐಸಿಸ್ ಶಿಬಿರಕ್ಕೆ ಹೋಗಲೆತ್ನಿಸಿದ್ದ ಕಣ್ಣೂರಿನ ನಾಲ್ವರನ್ನು ತುರ್ಕಿ ಪಡೆ ಸೆರೆ ಹಿಡಿದು ಭಾರತಕ್ಕೆ ಗಡೀಪಾರು ಮಾಡಿತ್ತು. ಅವರನ್ನು ಬಳಿಕ ವಳಪಟ್ಟಣಂ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದ ತನಿಖೆ ಈಗ ಡಿವೈಎಸ್‌ಪಿ ಪಿ.ಪಿ. ಸದಾನಂದನ್ ನೇತೃತ್ವದಲ್ಲಿ ನಡೆಯುತ್ತಿದೆ.
ತಸ್ಲಿಂ ಮೂಲಕ ಹಣ: ದುಬಾೖಯಲ್ಲಿರುವ ಕಣ್ಣೂರು ನಿವಾಸಿ ತಸ್ಲಿಂ ಮೂಲಕ ಕೇರಳದಿಂದ ಐಸಿಸ್‌ಗೆ ಸೇರುವವರಿಗೆ ಹಣ ಪೂರೈಕೆಯಾಗುತ್ತಿದೆ. ಕಣ್ಣೂರು ಅಂಜರಕಂಡಿಯ ಮಿಥಿಲಾಜ್‌ನ ಬ್ಯಾಂಕ್ ಖಾತೆ ಮೂಲಕ ಹಣ ಪೂರೈಕೆಯಾಗುತ್ತಿದೆ. ತುರ್ಕಿಯಿಂದ ಗಡೀಪಾರಾದ ಕಣ್ಣೂರಿನ ಐವರಲ್ಲಿ ಮಿಥಿಲಾಜ್ ಕೂಡ ಇದ್ದಾನೆ. ಆತನನ್ನು ವಿಚಾರಿಸಿದಾಗ ಸತ್ಯ ಬಯಲಾಗಿದೆ.
ಕೊಲ್ಲಿ ಉದ್ಯೋಗಿಯಾಗಿರುವ ಕಣ್ಣೂರಿನ ತಸ್ಲಿಂ ಬಡ ಕುಟುಂಬಕ್ಕೆ ಸೇರಿದವ ನಾಗಿದ್ದು ಆತನಿಗೆ ಎಲ್ಲಿಂದ ಹಣ ಲಭಿಸುತ್ತಿದೆ ಎಂಬ ಬಗ್ಗೆಯೂ ಎನ್‌ಐಎ ತನಿಖೆ ನಡೆಸು ತ್ತಿದೆ. ಐಸಿಸ್‌ಗಾಗಿ ತಸ್ಲಿಂ ದೇಣಿಗೆ ವಸೂಲು ಮಾಡುತ್ತಿರುವ ಬಗ್ಗೆಯೂ ತನಿಖಾ ತಂಡಕ್ಕೆ ಸ್ಪಷ್ಟ ಪುರಾವೆಗಳು ಲಭಿಸಿವೆ. ಕಣ್ಣೂರು ನಗರದ ಜವುಳಿ ಅಂಗಡಿ ಯೊಂದರ ಮಾಲಕ ಹಣ ವ್ಯವಹಾರದಲ್ಲಿ ಒಳಗೊಂಡಿದ್ದಾನೆ. ಆತನ ಮೂಲಕ ಹಣ ವ್ಯವಹಾರ ನಡೆಯುತ್ತಿದೆ. ಆತನನ್ನೂ ಪೊಲೀಸರು ಪ್ರಶ್ನಿಸುತ್ತಿದ್ದಾರೆ.
ನಾಪತ್ತೆಯಾದ 21 ಮಂದಿ ಐಸಿಸ್ ಶಿಬಿರದಲ್ಲಿ : ಕಾಸರಗೋಡು ಜಿಲ್ಲೆಯ ತೃಕ್ಕರಿಪುರ ಮತ್ತು ಚಂದೇರಾ ಪರಿಸರದ 21 ಮಂದಿ ನಾಪತ್ತೆಯಾಗಿ ಈಗ ಅವರು ಅಪಾ^ನಿಸ್ಥಾನದಲ್ಲಿ ಐಸಿಸ್ ಶಿಬಿರದಲ್ಲಿದ್ದಾರೆಂಬ ಮಾಹಿತಿ ಎನ್‌ಐಎಗೆ ಈ ಹಿಂದೆಯೇ ಲಭಿಸಿದೆ. ಇಂತಹ ತಂಡದ ಸದಸ್ಯರು ಕಾಸರಗೋಡಿನಲ್ಲಿ ರಹಸ್ಯವಾಗಿ ಕಾರ್ಯವೆಸಗುತ್ತಿದ್ದಾರೆ.