ಮಸ್ಕತ್:ಮಸ್ಕತ್‌ನ ಒಮನ್ ಬಿಲ್ಲವಾಸ್ ಆಯೋಜಿಸಿದ ಧಾರ್ಮಿಕ ಸಮಾರಂಭದಲ್ಲಿ ಅತಿಥಿ ಗಣ್ಯರ ಅಭಿನಂದನೆ ಕಾರ್ಯಕ್ರಮವು ಒಮಾನ್ ದೇಶದಲ್ಲಿ ನೆಲೆಸಿರುವ ತುಳುನಾಡಿನ ಅನೇಕ ಸಮುದಾಯದ ನಾಯಕರ ಗೌರವ ಉಪಸ್ಥಿತಿಯಲ್ಲಿ ಹಫಾ ಹೌಸ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಯುವ ನಾಯಕ ಪದ್ಮರಾಜ್, ಪುರೋಹಿತರಾದ ಚರಣ್ ಶಾಂತಿ ಅವರನ್ನು ವಿವಿಧ ಸಮಾಜದ ಮುಖಂಡರು ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಲಾಯಿತು. ಒಮಾನ್ ಬಿಲ್ಲವಾಸ್ ಸಾರಥ್ಯದ ಈ ಸಾಮರಸ್ಯ ಸಭೆಯು ಮಾದರಿ ಕಾರ್ಯಕ್ರಮವಾಗಿ ಮಾರ್ಪಟ್ಟಿದ್ದು ಎಲ್ಲ ಮುಖಂಡರ ಒಕ್ಕೊರಲ ಮೆಚ್ಚುಗೆಗೆ ಪಾತ್ರವಾಯಿತು.
ಒಮನ್ ಬಿಲ್ಲವಾಸ್ ಅಧ್ಯಕ್ಷ ಸುಜಿತ್ ಅಂಚನ್ ಪಾಂಗಾಳ, ಮಾಜಿ ಅಧ್ಯಕ್ಷ ಮತ್ತು ಸ್ಥಾಪಕ ಸದಸ್ಯ ಎಸ್. ಕೆ. ಪೂಜಾರಿ ಹಾಗೂ ಡಾ|ಅಂಚನ್ ಸಿ. ಕೆ., ಕಟಪಾಡಿ ವಿಶ್ವನಾಥ ಕ್ಷೇತ್ರ ಆಡಳಿತ ಮಂಡಳಿಯ ಸದಸ್ಯ ಕಾಮರಾಜ್ ಸುವರ್ಣ, ಒಮನ್ ತುಳುವೆರ್ ಸಂಘಟನೆಯ ಮುಖ್ಯಸ್ಥ ರಮಾನಂದ ಶೆಟ್ಟಿ, ಕೆ.ಸಿ.ಎಫ್. ಓಮನ್ ಅಧ್ಯಕ್ಷ ಅಯೂಬ್ ಅಹ್ಮದ್ ಕೊಡಿ, ಬ್ರಾಹ್ಮಣ ಸಮಾಜದ ಮುಖ್ಯಸ್ಥ ಗುರುರಾಜ್ ಪೇಜತ್ತಾಯ, ಬಿಲ್ಲವಾಸ್ ದುಬೈ ಅಧ್ಯಕ್ಷ ದೀಪಕ್ ಪೂಜಾರಿ, ಬಿಲ್ಲವಾಸ್ ಕತಾರ್ ಅಧ್ಯಕ್ಷ ಸಂದೀಪ್ ಸಾಲಿಯಾನ್ ಮಲ್ಲಾರ್, ಮೊಗವೀರ್ಸ್ ಕೂಟದ ಅಧ್ಯಕ್ಷ ಪದ್ಮಾಕರ್ ಮೆಂಡನ್ ಮತ್ತು ಹಿರಿಯರಾದ ದೇವಾನಂದ್ ಅಮೀನ್, ಜಿಎಸ್‌ಬಿ ಸಮಾಜದ ಮುಖ್ಯಸ್ಥ ರಾಮಕೃಷ್ಣ ಪ್ರಭು, ವಿಶ್ವ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ರವೀಂದ್ರ ಆಚಾರ್ಯ, ಮಂಗಳೂರು ಕೊಂಕಣಿ ವಿಂಗ್‌ನ ಅಜಿತ್ ವಾಲ್ದೆರ್, ರಜಕ ಸಮಾಜದ ಅಧ್ಯಕ್ಷ ಜಯ ಕುಮಾರ್, ಕನ್ನಡ ಸಂಘದ ಹಿತೇಶ್, ಸಿಎಸ್‌ಐ ಪ್ರೊಟೆಸ್ಟೆಂಟ್ ಚರ್ಚ್‌ನ ಜೈಸನ್ ಟಿ.ಜೆ, ಸಫಲಿಗ ಸಮಾಜದ ಸೀತಾರಾಮ್ ಸಭೆಯಲ್ಲಿ ಉಪಸ್ಥಿತರಿದ್ದರು.