Advertisement

VHP ನಾಯಕನ ಹ*ತ್ಯೆ ಕೇಸ್:ಪಾಕ್ ಉಗ್ರ ವಾಧ್ವಾ ಸಿಂಗ್ ಸೇರಿ 6 ಮಂದಿ ವಿರುದ್ಧ ಚಾರ್ಜ್ ಶೀಟ್

08:05 PM Oct 12, 2024 | Team Udayavani |

ಹೊಸದಿಲ್ಲಿ: ಈ ವರ್ಷ ಏಪ್ರಿಲ್‌ನಲ್ಲಿ ಪಂಜಾಬ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ (VHP) ನಾಯಕ ವಿಕಾಸ್ ಪ್ರಭಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ಥಾನ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನ (BKI) ಮುಖ್ಯಸ್ಥ ವಾಧ್ವಾ ಸಿಂಗ್ ಮತ್ತು ಇತರ ಐವರು ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ.

Advertisement

ವಿಕಾಸ್ ಬಗ್ಗ ಎಂದೂ ಕರೆಯಲ್ಪಡುತ್ತಿದ್ದ ಪ್ರಭಾಕರ್ ಅವರನ್ನು 2024 ಏಪ್ರಿಲ್ 13 ರಂದು ಪಂಜಾಬ್‌ನ ರೂಪನಗರ ಜಿಲ್ಲೆಯ ನಂಗಲ್‌ನಲ್ಲಿರುವ  ಸಿಹಿ ತಿನಿಸುಗಳ ಅಂಗಡಿಯಲ್ಲಿ ಬಿಕೆಐ ಮಾಡ್ಯೂಲ್‌ಗೆ ಸೇರಿದ ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದರು.

ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಬಿಕೆಐ ಮುಖ್ಯಸ್ಥ ವಾಧ್ವಾ ಸಿಂಗ್ ಅಲಿಯಾಸ್ ಬಬ್ಬರ್, ಇಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳು ಮತ್ತು ಮೂವರು ಬಂಧಿತ ಆರೋಪಿಗಳನ್ನು ಹತ್ಯೆಯ ಪ್ರಮುಖ ಅಪರಾಧಿಗಳು ಎಂದು ಹೆಸರಿಸಲಾಗಿದೆ ಎಂದು ಎನ್‌ಐಎ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next