Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚುನಾವಣಾ ಪ್ರಚಾರ ಸಮಯ ಮುಗಿಯುವವರೆಗೆ ಶಿರಾದಲ್ಲಿದ್ದು ಪ್ರಚಾರ ನಡೆಸುವುದಾಗಿ ತಿಳಿಸಿ, 4 ವಿಧಾನಪರಿಷತ್ ರಾಜ ರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶತಾಯಗತಾಯ ಶ್ರಮಿಸುತ್ತೇವೆ ಎಂದರು.
Related Articles
Advertisement
ಈ ಸಂದರ್ಭದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್, ಬೆಮೆಲ್ ಕಾಂತರಾಜು, ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಶಾಸಕ ವೈ.ಎಸ್.ಪಿ.ದತ ¤, ಕ್ಷೇತ್ರದ ಉಸ್ತುವಾರಿ ತಿಪ್ಪೇಸ್ವಾಮಿ, ತಿಮ್ಮರಾಯಪ್ಪ, ಆರ್. ರಾಘವೇಂದ್ರ ಇದ್ದರು.
ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯವಿಲ :
ಮಧುಗಿರಿ: ಜಿಲ್ಲೆಯಲ್ಲಿ ಶಿರಾ ಉಪ ಚುನಾವಣೆ ಕದನ ರಂಗೇರಿದ್ದು, ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರೇ ಖುದ್ದು ಮೂರು ದಿನದಿಂದ ಅಖಾಡದಲ್ಲಿದ್ದಾರೆ. ಇಂಥ ವೇಳೆ ಜಿಲ್ಲೆಯ ಜೆಡಿಎಸ್
ಮುಖಂಡರಾದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ಚಿಕ್ಕನಾಯ್ಕನಹಳ್ಳಿಯ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಹಾಗೂ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಚುನಾವಣೆ ಘೋಷಣೆಯಾಗಿದ್ದರೂಅಸಮಾಧಾನದ ಹೊಗೆಯಿಂದಾಗಿಇಲ್ಲಿಯವರೆಗೂ ಶಿರಾ ಕಡೆ ತಲೆ ಹಾಕಿರಲಿಲ್ಲ.ಆದರೆ ಯಾವಾಗ ಶಿರಾ ಚುನಾವಣೆಯನ್ನು ಗೌಡರು ಗಂಭೀರವಾಗಿ ಪರಿಗಣಿಸಿದರೋ ಮೂವರು ಮುಖಂಡರು ಗೌಡರ ಮುಂದೆ ಹಾಜರಾಗಿದ್ದಾರೆ. ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯನವರ ಮನೆಯು ಕ್ಷೇತ್ರದ ಡಿ.ಕೈಮರದಲ್ಲಿದ್ದು, ಶಿರಾಗೆ ಆನತಿ ದೂರದಲ್ಲಿದೆ. ಹಾಗಾಗಿ ಇಲ್ಲಿಯೇ ವಾಸ್ತವ್ಯ ಹೂಡಿರುವ ಗೌಡರು ಈ ಮೂವರು ಅತೃಪ್ತಜೆಡಿಎಸ್ ಮುಖಂಡರನ್ನು ಒಂದೆಡೆ ಸೇರಿಸಿದ್ದು, ಶಿರಾ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಿ ಅಸಮಾಧಾನ ಶಮನ ಮಾಡಿದ್ದಾರೆ. ಈ ಬಗ್ಗೆ ಉದಯವಾಣಿ ಜತೆ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಪಕ್ಷದಲ್ಲಿ ಅತೃಪ್ತರು ಯಾರೂ ಇಲ್ಲ. ಇವರೆಲ್ಲ ಪಕ್ಷದ ಆಸ್ತಿಯಂತಿದ್ದು, ಕೆಲವು ಕಹಿ ಘಟನೆಗಳಿಂದ ಚುನಾವಣೆಯ ಪ್ರಚಾರಕ್ಕೆ ಬಂದಿರಲಿಲ್ಲ. ಆದರೆ ಈಗ ಅಂತಹ ಯಾವುದೇ ಅಸಮಾಧಾನವೂ ಉಳಿದಿಲ್ಲ. ಹಾಗಾಗಿ ಎಲ್ಲರೂ ಒಟ್ಟಿಗೆ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದು, ಶಿರಾದಲ್ಲಿಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮನವರದ್ದೇ ಗೆಲುವು. ಈಗಾಗಲೇ ಪಕ್ಷದ ಎಲ್ಲ ನಾಯಕರು ಚುನಾವಣಾಪ್ರಚಾರಕ್ಕೆ ಆಗಮಿಸಿದ್ದು, ಶಿರಾದೆಲ್ಲೆಡೆ ಜೆಡಿಎಸ್ ಅಭ್ಯರ್ಥಿಗೆ ಅಭೂತಪೂರ್ವ ಗೆಲುವಿನ ಭರವಸೆ ಸಿಕ್ಕೆದೆ ಎಂದರು.