Advertisement

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

05:12 PM Nov 15, 2024 | keerthan |

ಶಿವಮೊಗ್ಗ: ಕೋವಿಡ್ ಸಂದರ್ಭದಲ್ಲಿ ಹಗರಣ ಆಗಿದೆ ಎಂದು ಹೇಳಿ ಎಸ್ಐಟಿ ರಚನೆ ಮಾಡಿ ಹಗೆ ತೀರಿಸಿಕೊಳ್ಳುತ್ತಿದ್ದಾರೆ. ಸದಾ ಅವರೇ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ರಾಜಕೀಯ ಜಿದ್ದು ಹತಾಶೆಯಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಶುಕ್ರವಾರ (ನ.15) ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ‌ಇರಲಿಲ್ಲ. ಮಾಸ್ಕ್ ಪಿಪಿಇ‌ ಕಿಟ್ ಇರಲಿಲ್ಲ. ರಾತ್ರಿ ಮಲಗಿದರೆ ಬೆಡ್ ಸಿಗುತ್ತಿರಲಿಲ್ಲ. ಜನರನ್ನು ಬದುಕಿಸುವುದು ಮುಖ್ಯವಾಗಿತ್ತು. ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಜನರ ಸಾವು ಬದುಕಿಸುವ ಕೆಲಸ ಮಾಡಿದೆ ಎಂದರು.

ಕಾಂಗ್ರೆಸ್‌ ಆರೋಪವನ್ನು ಜನ ನೋಡುತ್ತಿದ್ದಾರೆ. ಇದು ಯಾವುದನ್ನೂ ನಡೆಯುವುದಿಲ್ಲ. ಮುಡಾ ಹಗರಣದ ನಂತರ ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಗ್ಯಾರೆಂಟಿ ಘೋಷಣೆ ಮಾಡಿದ್ದರು. ಈಗ ಅದನ್ನು ಕೊಡಲಾಗುತ್ತಿಲ್ಲ. ಗ್ಯಾರೆಂಟಿ ಯೋಜನೆ ಜಾರಿ ಮಾಡಿ ಬೆಲೆ ಏರಿಕೆ ಮಾಡಿದರು. ಅಬಕಾರಿ ಹಗರಣ ನಡೆದಿದೆ. ಅಬಕಾರಿ ಸಚಿವರು ತೀರ್ಥಹಳ್ಳಿಗೆ ಬಂದಿದ್ದರು. ಸಚಿವರು ತೀರ್ಥಹಳ್ಳಿಗೆ ಬಂದಿದ್ದರೆಂದು ಪ್ರತಿ ಬ್ರಾಂಡಿ ಅಂಗಡಿಯಿಂದ ಹಣ ಎತ್ತಿದ್ದಾರೆ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಕ್ಯಾಬಿನೆಟ್ ನಲ್ಲಿ ಇದ್ದಾರೆ ಎಂದು ಟೀಕೆ ಮಾಡಿದರು.

ಉಪ ಚುನಾವಣೆಯಲ್ಲಿ ಮೂರು ಸ್ಥಾನ ಎನ್ ಡಿಎ ಗೆಲ್ಲುತ್ತದೆ. ಎಲ್ಲಾ ಸಚಿವರು ವಿಧಾನಸೌಧಕ್ಕೆ ಬೀಗ ಹಾಕಿಕೊಂಡು ಪ್ರಚಾರಕ್ಕೆ ಹೋಗಿದ್ದರು. ಪ್ರಿಯಾಂಕ ಖರ್ಗೆ ಅವರು ರಜಾಕಾರರು ಮುಸ್ಲಿಂರಲ್ಲ ಅಂದಿದ್ದಾರೆ. ನನಗೆ ಬಹಳ ಆಶ್ಚರ್ಯವಾಯ್ತು. ಖರ್ಗೆ ಅವರ ಕುಟುಂಬ ಸಹ ಅವರಿಂದ ತೊಂದರೆಗೆ ಒಳಪಟ್ಟ ಕುಟುಂಬ ಎಂದು ಆರಗ ಜ್ಞಾನೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next