Advertisement

Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

12:40 PM Nov 10, 2024 | Team Udayavani |

ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ‌ಪಾಪದ ಕೊಡ ತುಂಬಿದ್ದು, ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.

Advertisement

ಜಿಂದಾಲ್ ವಿದ್ಯಾನಗರದಲ್ಲಿ ಭಾನುವಾರ (ನ.10) ಸುದ್ದಿಗೋಷ್ಠಿಯಲ್ಲಿ ‌ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳು ಗೆದ್ದಾಗ ಸಿಎಂ ನಿರಾಳವಾಗಿದ್ದರು. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಹಗರಣಗಳನ್ನು ಬಿಜೆಪಿ ಒಂದೊಂದು ಬಯಲಿಗೆ ಎಳೆಯುತ್ತಿದ್ದಂತೆ ಸಿದ್ದರಾಮಯ್ಯ ಆತಂಕದಲ್ಲಿ ಇದ್ದಾರೆ ಎಂದು ವಾಗ್ದಳಿ ನಡೆಸಿದರು.

ರಾಜ್ಯದಲ್ಲಿ ಅಸಮರ್ಥ ಸಿಎಂಯೊಬ್ಬರು ಆಡಳಿತ‌ ನಡೆಸುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ ಮುಕ್ತ ಮಾಡುತ್ತವೆ ಎಂದು ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ, ಸಾಲು ಸಾಲು ಹಗರಣಗಳಿಂದ ಒಂದೂವರೆ ವರ್ಷದಲ್ಲಿಯೇ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ. ಹದಿನೈದು ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಎ1 ಆರೋಪಿಯಾಗಿ ಅಪರಾಧಿ ಸ್ಥಾನದಲ್ಲಿ‌ ನಿಂತಿದ್ದಾರೆ. ಮುಡಾ ಕಮಿಷನರ್ ದಿನೇಶ್ ಎಂಬ ಅಧಿಕಾರಿಯನ್ನು ಸ್ವತಃ ಸಿಎಂ ಬಚ್ಚಿಟ್ಟಿದ್ದಾರೆ ಎಂದರು.

ಕೋವಿಡ್ ಅಕ್ರಮದ ಬಗ್ಗೆ ನ್ಯಾ. ಮೈಕಲ್ ಕುನ್ಹಾ ಮಧ್ಯಂತರ 14 ಪುಟದ ವರದಿಯಲ್ಲಿ ಹದಿನಾಲ್ಕು ಕೋಟಿ ರೂ. ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ವರದಿಯಿಂದ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಶ್ರೀರಾಮುಲು ಅವರನ್ನು ಬೆದರಿಸಲು ಹೊರಟಿದ್ದಾರೆ. ಆದರೆ, ಯಡಿಯೂರಪ್ಪ ಅವರ ತಾಕತ್ತು ಕಾಂಗ್ರೆಸ್ ‌ನಾಯಕರಿಗಿಂತ ಸಿದ್ದರಾಮಯ್ಯ ಅವರಿಗೆ ಹೆಚ್ಚು ಗೊತ್ತು ಎಂದರು. ನಾನಿನ್ನು ಅಂಬೆಗಾಲು ಇಡುತ್ತಿರುವದಕ್ಕೆ ಸಿದ್ದರಾಮಯ್ಯ ಭಯ ಬೀತರಾಗಿದ್ದಾರೆ. ಆದರೆ, ಇನ್ನೂ ಆನೆಗಾಲು ಇಟ್ಟರೆ ಸಿದ್ದರಾಮಯ್ಯ ಪರಿಸ್ಥಿತಿ ಏನು ಎಂದು ವ್ಯಂಗ್ಯವಾಡಿದರು. ಗ್ಯಾರಂಟಿ ಯೋಜನೆಗಳು ಕೇವಲ ತಾತ್ಕಾಲಿಕ ಕೆಲವೇ ದಿನಗಳಲ್ಲಿ ಸ್ಥಗಿತವಾಗಲಿವೆ ಎಂದರು.

Advertisement

ಶಾಸಕರಾದ‌ ಜಿ. ಜನಾರ್ದನರೆಡ್ಡಿ, ಹರೀಶ್‌ ಪೂಂಜಾ, ಕೃಷ್ಣಾ ನಾಯ್ಕ್, ದೀರಜ್ ಗುಂಡೂರಾವ್, ಮಾಜಿ ಶಾಸಕರಾದ‌ ರೇಣುಕಾಚಾರ್ಯ, ಅರಗ ಜ್ಞಾನೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next