Advertisement

IPL : ಹೈದ್ರಾಬಾದ್ ಆಟಗಾರನಿಗೆ ಕೋವಿಡ್ ದೃಢ : 6 ಮಂದಿ ಐಸೋಲೇಶನ್

03:35 PM Sep 22, 2021 | Team Udayavani |

ನವದೆಹಲಿ : ಸನ್ ರೈಸರ್ಸ್ ಹೈದ್ರಾಬಾದ್ ಆಟಗಾರನಿಗೆ ಕೋವಿಡ್ ದೃಢ ಪಟ್ಟ ಹಿನ್ನೆಲೆಯಲ್ಲಿ ಡೆಲ್ಲಿ ಮತ್ತು ಹೈದ್ರಾಬಾದ್ ನಡುವಿನ ಇಂದಿನ ಪಂದ್ಯ ರದ್ದಾಗುವ ಸಾಧ್ಯತೆ ಇದೆ.  SRH ತಂಡದ ಬೌಲರ್ ನಟರಾಜನ್ ಅವರಿಗೆ ಕೋವಿಡ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಅವರನ್ನು ಮತ್ತು ಅವರ ಸಂಪರ್ಕದಲ್ಲಿದ್ದ ಆರು ಮಂದಿಯನ್ನು ಐಸೋಲೇಟ್ ಮಾಡಲಾಗಿದೆ.

Advertisement

ದುಬೈನಲ್ಲಿ ಇಂದು ಡೆಲ್ಲಿಕ್ಯಾಪಿಟಲ್ಸ್ (DC)  ವಿರುದ್ಧ ಹೈದ್ರಾಬಾದ್(SRH) ತಂಡ ಸೆಣೆಸಾಡಲು ಸಿದ್ಧವಾಗಿತ್ತು. ಇದರ ಮಧ್ಯೆ ಆಟಗಾರನಿಗೆ ಕೋವಿಡ್ ದೃಢವಾಗಿದ್ದು, ಪಂದ್ಯವನ್ನು ನಡೆಸುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ವಿಜಯ್ ಶಂಕರ್ (ಆಟಗಾರ), ವಿಜಯ್ ಕುಮಾರ್ (ತಂಡದ ಮ್ಯಾನೇಜರ್), ಶ್ಯಾಮ್ ಸುಂದರ್ (ಚಿಕಿತ್ಸಕ), ಅಂಜನ ವನ್ನನ್ (ವೈದ್ಯ), ತುಶಾರ್, ಪೆರಿಯಾಸಾಮಿ, ಈ ಆರು ಮಂದಿ ಬೌಲರ್ ನಟರಾಜನ್ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.  ಇಂದು ಸಂಜೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಎಸ್ ಆರ್ ಎಚ್ ಪಂದ್ಯದ ಭವಿಷ್ಯವು ಉಳಿದ ತಂಡದ ಆಟಗಾರರ ಕೊರೋನಾ ಪರೀಕ್ಷೆಯ ವರದಿಗಳ ಆಧಾರದ ಮೇಲೆ ಅವಲಂಬಿತವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next