Advertisement

NZ vs ENG Test: ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್‌ ಜಯಭೇರಿ

12:14 AM Dec 18, 2024 | Team Udayavani |

ಹ್ಯಾಮಿಲ್ಟನ್‌: ಇಂಗ್ಲೆಂಡ್‌ ವಿರುದ್ಧ ಅನುಭವಿಸಿದ ಮೊದಲೆರಡು ಟೆಸ್ಟ್‌ ಪಂದ್ಯಗಳ ಸೋಲಿಗೆ ನ್ಯೂಜಿಲೆಂಡ್‌ ಭರ್ಜರಿಯಾಗಿಯೇ ಸೇಡು ತೀರಿಸಿಕೊಂಡಿದೆ.

Advertisement

ಹ್ಯಾಮಿಲ್ಟನ್‌ನಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯವನ್ನು ಬರೋಬ್ಬರಿ 423 ರನ್ನುಗಳ ಅಗಾಧ ಅಂತರದಿಂದ ಗೆದ್ದಿರುವ ಕಿವೀಸ್‌, ವೇಗಿ ಟಿಮ್‌ ಸೌಥಿಗೆ ಶುಭ ವಿದಾಯವೊಂದನ್ನು ಹೇಳಿತು. ಜತೆಗೆ ವೈಟ್‌ವಾಶ್‌ ಸಂಕಟದಿಂದಲೂ ಪಾರಾಯಿತು. ಆದರೆ ಇಂಗ್ಲೆಂಡ್‌ 2-1 ಅಂತರದಿಂದ ಸರಣಿ ಗೆದ್ದು “ಕ್ರೋವ್‌-ಥೋರ್ಪ್‌ ಟ್ರೋಫಿ’ಯನ್ನು ತನ್ನದಾಗಿಸಿಕೊಂಡಿತು.

ಇದು ನ್ಯೂಜಿಲೆಂಡ್‌ ಟೆಸ್ಟ್‌ ಚರಿತ್ರೆಯ, ರನ್‌ ಅಂತರದ ಅತೀ ದೊಡ್ಡ ಗೆಲುವಿನ ಜಂಟಿ ದಾಖಲೆ. 2018ರಲ್ಲಿ ಶ್ರೀಲಂಕಾವನ್ನು ಇಷ್ಟೇ ರನ್ನುಗಳ ಅಂತರದಿಂದ ಮಣಿಸಿ ದಾಖಲೆ ಸ್ಥಾಪಿಸಿತ್ತು. ಗೆಲುವಿಗೆ 658 ರನ್ನುಗಳ ಅಸಾಧ್ಯ ಗುರಿಯನ್ನೇ ಪಡೆದಿದ್ದ ಇಂಗ್ಲೆಂಡ್‌, ಮಂಗಳವಾರದ ಆಟದಲ್ಲಿ 234ಕ್ಕೆ ಆಲೌಟ್‌ ಆಯಿತು. ಗಾಯಾಳಾದ ಕಾರಣ ನಾಯಕ ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ಗೆ ಬರಲಿಲ್ಲ.

ಇಂಗ್ಲೆಂಡ್‌ 2ಕ್ಕೆ 18 ರನ್‌ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಜೇಕಬ್‌ ಬೆಥೆಲ್‌ (76) ಮತ್ತು ಜೋ ರೂಟ್‌ (54) 3ನೇ ವಿಕೆಟಿಗೆ 104 ರನ್‌ ಜತೆಯಾಟ ನಡೆಸಿದ್ದೊಂದೇ ಇಂಗ್ಲೆಂಡ್‌ ಪಾಲಿನ ಸಮಾಧಾನಕರ ಸಂಗತಿ. ಕೊನೆಯಲ್ಲಿ ಗಸ್‌ ಅಟಿRನ್ಸನ್‌ 43 ರನ್‌ ಹೊಡೆದರು. ಹ್ಯಾರಿ ಬ್ರೂಕ್‌ (1), ಓಲೀ ಪೋಪ್‌ (17) ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾದರು.

ಕ್ರಿಕೆಟ್‌ ವೃತ್ತಿ ಬದುಕಿಗೆ ಸೌಥಿ ಗುಡ್‌ಬೈ
ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನೊಂದಿಗೆ ನ್ಯೂಜಿಲೆಂಡ್‌ನ‌ 36 ವರ್ಷದ ಬೌಲರ್‌ ಟಿಮ್‌ ಸೌಥಿ, ತಮ್ಮ 17 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ಅಂತ್ಯ ಹಾಡಿದರು. ಕಿವೀಸ್‌ ಪರ 107 ಟೆಸ್ಟ್‌ ಪಂದ್ಯಗಳಲ್ಲಿ 391 ವಿಕೆಟ್‌, 161 ಏಕದಿನ ಪಂದ್ಯಗಳಲ್ಲಿ 221 ವಿಕೆಟ್‌ ಮತ್ತು 125 ಅಂತಾರಾಷ್ಟ್ರೀಯ ಟಿ20ಯಲ್ಲಿ 164 ವಿಕೆಟ್‌ ಸಾಧನೆ ಸೌಥಿ ಹೆಸರಿನಲ್ಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌:
ನ್ಯೂಜಿಲೆಂಡ್‌-347 ಮತ್ತು 453.

ಇಂಗ್ಲೆಂಡ್‌-143 ಮತ್ತು 234  (ಬೆಥೆಲ್‌ 76, ರೂಟ್‌ 54, ಸ್ಯಾಂಟ್ನರ್‌ 85ಕ್ಕೆ 4, ಸೌಥಿ 34ಕ್ಕೆ 2).

ಪಂದ್ಯಶ್ರೇಷ್ಠ: ಮಿಚೆಲ್‌ ಸ್ಯಾಂಟ್ನರ್‌

ಸರಣಿಶ್ರೇಷ್ಠ: ಹ್ಯಾರಿ ಬ್ರೂಕ್‌

Advertisement

Udayavani is now on Telegram. Click here to join our channel and stay updated with the latest news.

Next