Advertisement

ಬಸ್‌ ಸಂಚಾರವಿಲ್ಲದೆ‌ ಪ್ರಯಾಣಿಕರಿಗೆ ಅಡಚಣೆ

12:27 AM Jun 08, 2020 | Sriram |

ಉಡುಪಿ: ಉಡುಪಿ ನಗರದಲ್ಲಿ ಜನಜೀವನ ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಇನ್ನೂ ಪೂರ್ಣ ಸಹಜ ಸ್ಥಿತಿಗೆ ತಲುಪಿಲ್ಲ. ರವಿವಾರ ಜನ ಸಂಚಾರ ವಿರಳ ಹಿನ್ನೆಲೆಯಲ್ಲಿ ನಗರದಲ್ಲಿ ಸಿಟಿ ಬಸ್‌ ಓಡಾಟ ನಡೆಸಿಲ್ಲ. ಇದರಿಂದ ಕೆಲವು ಸಾರ್ವಜನಿಕರು ತೊಂದರೆಗೆ ಒಳಗಾದರು.

Advertisement

ನಗರ ಸಹಜ ಸ್ಥಿತಿಗೆ ಬರುತ್ತಿದ್ದರೂ ನಿರೀಕ್ಷೆಯಂತೆ ಜನರು ಪೇಟೆಗೆ ಬರುತ್ತಿಲ್ಲ. ಕಳೆದ ಹಲವು ಸಮಯಗಳಿಂದ ಜನರು ಸಂಚಾರವನ್ನು ಕಡಿಮೆ ಮಾಡಿರು ವುದ ರಿಂದ ರವಿವಾರ ಪ್ರಯಾಣಿಕರ ಕೊರತೆ ಇದೆ ಎನ್ನುವ ಕಾರಣಕ್ಕೆ ಸಿಟಿ ಬಸ್‌ ಮಾಲಕರ ಸಂಘದವರು ನಗರದಲ್ಲಿ ಬಸ್‌ಗಳನ್ನು ಓಡಿಸದೆ ಇರಲು ನಿರ್ಧರಿ ಸಿದ್ದರು. ಇದರಿಂದ ನಗರದಲ್ಲಿ ಸಿಟಿ ಬಸ್‌ ಅನ್ನು ಅವಲಂಬಿಸಿದ ಪ್ರಯಾಣಿಕರು ಬಸ್‌ ಇಲ್ಲದೆ ವಿವಿಧೆಡೆಗೆ ತೆರಳಲು ತೊಂದರೆ ಅನುಭವಿಸಿದರು.

ಕೆಲವರು ಖಾಸಗಿ ಬಾಡಿಗೆ ವಾಹನಗಳನ್ನು ಹಿಡಿದು ಸಂಚಾರ ಬೆಳೆಸಿದ್ದು ಕಂಡುಬಂತು. ಕಳೆದ ಒಂದು ವಾರದಿಂದ ಉಡುಪಿ ನಗರ ವ್ಯಾಪ್ತಿಯಲ್ಲಿ 23 ಬಸ್‌ಗಳು ಓಟಾಟ ಆರಂಭಿಸಿದ್ದವು.

ಕುಂದಾಪುರವೂ ಬಿಕೋ…
ಕುಂದಾಪುರ: ಕೋವಿಡ್-19 ಮಹಾಮಾರಿಯಿಂದಾಗಿ ಕಳೆದ ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್‌ ಘೋಷಿಸಲ್ಪಟ್ಟ ಅನಂತರ ನೀರವವಾಗಿದ್ದ ಕುಂದಾಪುರದ ಹೊಸ ಬಸ್‌ ನಿಲ್ದಾಣ ಇದೀಗ ಲಾಕ್‌ಡೌನ್‌ ಕಟ್ಟುನಿಟ್ಟು ಹಿಂದೆಗೆಯಲ್ಪಟ್ಟು ಬೆರಳೆಣಿಕೆಯಷ್ಟು ಬಸ್ಸುಗಳ ಓಡಾಟ ಆರಂಭಗೊಂಡರೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ಇದರಿಂದಾಗಿ ಪುರಸಭೆಗೆ ಬಾಡಿಗೆ ಸಲ್ಲಿಸುವ ಬಸ್‌ ನಿಲ್ದಾಣದ ಒಳಗಿನ ಅಂಗಡಿ ವ್ಯಾಪಾರಸ್ಥರು ದಿಕ್ಕು ತೋಚದಂತಾಗಿ ಚಡ ಪಡಿಸುತ್ತಿದ್ದಾರೆ.

ಹೊಸ ಬಸ್‌ ನಿಲ್ದಾಣ ಹೊರತುಪಡಿಸಿ ನಗರದ ಇತರೆಡೆಗಳಲ್ಲಿ ಸಾರ್ವಜನಿಕರ ಸಂಚಾರ ಸಹಜವಾಗಿದ್ದು, ವ್ಯಾಪಾರ ವಹಿವಾಟುಗಳು ಕೂಡ ತಕ್ಕ ಮಟ್ಟಿಗೆ ಎಂಬಂತೆ
ನಡೆಯುತ್ತಲಿವೆ.

Advertisement

ಆದರೆ ಹೊಸ ಬಸ್ಸು ನಿಲ್ದಾಣ ಮಾತ್ರ ಈಗಿನ್ನೂ ಲಾಕ್‌ಡೌನ್‌ ಮನಸ್ಥಿತಿಯಿಂದ ಹೊರ ಬಂದಿಲ್ಲ. ಈ ಬಗ್ಗೆ ತಮ್ಮ ಆತಂಕ ವನ್ನು ತೋಡಿಕೊಂಡಿರುವ ವ್ಯಾಪಾರಸ್ಥರು ಕಡೇ ಪಕ್ಷ ಲಾಕ್‌ಡೌನ್‌ ಸಮಯದ ಅಂಗಡಿ ಬಾಡಿಗೆಯನ್ನಾದರೂ ಸರಕಾರ ಮನ್ನಾ ಮಾಡುವಂತೆ ಅಗ್ರಹಿಸಿದ್ದಾರೆ. ಇದು ಬಸ್‌ ನಿಲ್ದಾಣಕ್ಕೆ ಸೀಮಿತವಲ್ಲ. ಇಡಿಯ ಕುಂದಾಪುರ ನಗರವೇ ಇಂತಹ ಬಿಕ್ಕಟ್ಟು ಎದುರಿಸುತ್ತಿದೆ. ಬಹುತೇಕ ಅಂಗಡಿಗಳು ಖಾಲಿ ಹೊಡೆಯುತ್ತಿವೆ. ಜನಸಂಚಾರ ವಿರಳವಾಗಿದೆ.

ಸೋಮವಾರ ಎಂದಿನಂತೆ ಬಸ್‌ ಓಡಾಟ
ಜನ ವಿರಳ ಎನ್ನುವ ಕಾರಣಕ್ಕೆ ರವಿವಾರ ನಗರದೊಳಗೆ ಸಿಟಿ ಬಸ್‌ ಓಡಾಟ ಸ್ಥಗಿತಗೊಳಿಸಲಾಗಿತ್ತು. ಡೀಸೆಲ್‌ ಖರ್ಚು ಕೂಡಾ ಭರಿಸಲು ಆಗುವುದಿಲ್ಲ. ಈ ಕಾರಣ ಹೊರತು ಲಾಕ್‌ಡೌನ್‌ ಅಂತ ಬಸ್‌ ನಿಲ್ಲಿಸಿದ್ದಲ್ಲ. ಸೋಮವಾರ ಮತ್ತೆ ಎಂದಿನಂತೆ ಬಸ್‌ ಓಡಾಟವಿರುವುದು. ಸಾರ್ವಜನಿಕರು ಸಹಕರಿಸಬೇಕು.
– ಸುರೇಶ್‌ ನಾಯಕ್‌ ಕುಯಿಲಾಡಿ, ಜಿಲ್ಲಾಧ್ಯಕ್ಷರು, ಸಿಟಿ ಬಸ್‌ ಮಾಲಕರ ಸಂಘ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next