Advertisement
ನಗರದಲ್ಲಿ ಸದಾ ವಾಹನ ಓಡಾಟದಿಂದ ಕೂಡಿದ ಬೆಂದೂರುವೆಲ್, ಬಂಟ್ಸ್ ಹಾಸ್ಟೆಲ್, ಮಲ್ಲಿಕಟ್ಟೆ, ಬಿಜೈ, ಎಂಜಿ ರಸ್ತೆ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಮ್ಯಾನ್‌ಹೋಲ್ ಮುಚ್ಚಳಗಳು ಕೆಲವು ಅಡಿಗೆ ಕುಸಿದಿದೆ. ರಸ್ತೆಯ ವಾಹನ ಪಥದಲ್ಲೇ ಈ ಮ್ಯಾನ್‌ಹೋಲ್ ಇದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹಲವು ಕಡೆಗಳಲ್ಲಿ ವಾಹನ ದಟ್ಟಣೆಗೂ ಇದು ಕಾರಣವಾಗುತ್ತಿದೆ.
ಕದ್ರಿ ಮೈದಾನ ಬಳಿಯ ರಸ್ತೆಯಲ್ಲಿ ಮ್ಯಾನ್‌ಹೋಲ್ ಮುಚ್ಚಳ ಸಂಪೂರ್ಣ ಕುಸಿದಿದ್ದು, ಕಬ್ಬಿಣದ ಸಲಾಕೆಗಳು ಮಾತ್ರವೇ ಉಳಿದುಕೊಂಡಿವೆ. ಬಿಜೈ ಕೆಎಸ್‌ಆರ್‌ಟಿಸಿ ಸಮೀಪದಲ್ಲಿ ಎರಡೂ ಬಿದಿಯ ರಸ್ತೆಗಳಲ್ಲಿ ಮ್ಯಾನ್ ಹೋಲ್ ಮುಚ್ಚಳಗಳು ಕುಸಿದಿದ್ದು, ಅಪಾಯಕ್ಕೆ ಆಹ್ವಾನವಾಗಿದೆ. ಬಲ್ಮಠ ಸಮೀಪದ ಮುಖ್ಯ ರಸ್ತೆಯಲ್ಲೂ ಮ್ಯಾನ್‌ಹೋಲ್ ಮುಚ್ಚಳ ಅಪಾಯದಲ್ಲಿದೆ. ಹಲವು ಮುಖ್ಯ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ಇಂತಹ ಅವ್ಯವಸ್ಥೆ ಇದ್ದು, ವಾಹನ ಸವಾರರು ಪರದಾಡುವಂತಾಗಿದೆ.
Related Articles
ದ್ವಿಚಕ್ರವಾಹನಗಳಲ್ಲಿ ಸಂಚರಿಸುವಾಗ ಏಕಾಏಕಿ ಮ್ಯಾನ್‌ಹೋಲ್ ಮುಚ್ಚಳ ಕುಸಿದಿದ್ದು ಗೋಚರಕ್ಕೆ ಬಾರದೆ ಕೂದಳೆಲೆ ಅಂತರದಲ್ಲಿ ಅಪಾಯದಿಂದ ಪಾರಾದೆ. ನಗರದ ಅನೇಕ ರಸ್ತೆಗಳಲ್ಲಿ ಇಂತಹ ಸಮಸ್ಯೆಯಾಗುತ್ತಿದ್ದು ಪಾಲಿಕೆ ಕ್ರಮಕೈಗೊಳ್ಳಲಿ.
-ಹರೀಶ್ ಕೆ., ದ್ವಿಚಕ್ರವಾಹನ ಸವಾರ
Advertisement