Advertisement

ವ್ಯಾಟಿಕನ್‌ ಸಿಟಿ ಸಮ್ಮೇಳನದಲ್ಲಿ ಖಾದರ್‌ ಭಾಗಿ

01:05 AM Dec 02, 2024 | Team Udayavani |

ಬೆಂಗಳೂರು: ರೋಮ್‌ನ ವ್ಯಾಟಿಕನ್‌ ಸಿಟಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್‌ ಫ‌ರೀದ್‌ ಅತಿಥಿಯಾಗಿ ಭಾಗವಹಿಸಿ, ಧರ್ಮದ ಕುರಿತು ತಮ್ಮ ನಿಲುವು ಮಂಡಿಸಿದರು.

Advertisement

ಅದಕ್ಕೂ ಮುಂಚೆ ವಿಶ್ವ ಕೆಥೋಲಿಕ್‌ ಸಮುದಾಯದ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರನ್ನು ವ್ಯಾಟಿಕನ್‌ ಸಿಟಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ ದರು. ನಾರಾಯಣ ಗುರುಗಳು ಮೊದಲ ಅಂತಾರಾಷ್ಟ್ರೀಯ ಸರ್ವ ಧರ್ಮ ಸಮ್ಮೇಳನವನ್ನು ಆಯೋ ಜಿಸಿ ಶತಮಾನೋತ್ಸವ ಸಂದ ಸ್ಮರಣಾರ್ಥ ಈ ಸಮ್ಮೇಳನವನ್ನು ವ್ಯಾಟಿಕನ್‌ ಸಿಟಿಯ ಆಗಸ್ತಿನ್ಯೆàನಮ್‌ನಲ್ಲಿ ಆಯೋಜಿಸಲಾಗಿದೆ.

ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು ಎಂಬ ವಿಷಯದಲ್ಲಿ ನಡೆ ಯುವ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿದರು.

ವಿಶ್ವದ ವಿವಿಧ ಧರ್ಮಗಳ ಗಣ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next