Advertisement

ಆಸ್ಟ್ರೇಲಿಯಾದಲ್ಲಿ ಭಾರತದ ಬಾಲಕಿಯರ ಹಾಕಿ ತಂಡ ಅತಂತ್ರ

07:30 AM Dec 10, 2017 | Team Udayavani |

ಅಡಿಲೇಡ್‌: ಆಸ್ಟ್ರೇಲಿಯಾದ ಅಡಿಲೇಡ್‌ನ‌ಲ್ಲಿ ನಡೆದ ಪೆಸಿಫಿಕ್‌ ಶಾಲಾ ಕೂಟಕ್ಕೆ ತೆರಳಿದ್ದ ಭಾರತದ ಬಾಲಕಿಯರ ಹಾಕಿ ತಂಡವೊಂದು ಅತಂತ್ರಕ್ಕೆ ಸಿಲುಕಿದೆ ಎಂಬ ಆರೋಪ ಕೇಳಿಬಂದಿದೆ. ಅಂತರ್ಜಾಲದಲ್ಲಿ ಇದು ದೊಡ್ಡ ಸುದ್ದಿಯಾಗಿದೆ. ಅಡಿಲೇಡ್‌ಗೆ ಬಂದಿಳಿದ ನಮಗೆ ಕ್ರೀಡಾಕೂಟದ ಸ್ಥಳಕ್ಕೆ ತೆರಳಲು ಯಾವುದೇ ವಾಹನ ಸೌಕರ್ಯವಿರಲಿಲ್ಲ. ಸ್ವಂತಕ್ಕೆ ಕ್ಯಾಬ್‌ ವ್ಯವಸ್ಥೆ ಮಾಡಿಕೊಂಡು ಸ್ಥಳಕ್ಕೆ ತೆರಳಬೇಕಾಯಿತು. ಜೊತೆಗೆ ಸಂಘಟಕರು ವೇಳಾಪಟ್ಟಿಯನ್ನು ಸರಿಯಾಗಿ ತಿಳಿಸದ ಕಾರಣ ಪಂದ್ಯವೊಂದನ್ನು ತಪ್ಪಿಸಿಕೊಂಡೆವು ಎಂದು ಬಾಲಕಿಯರು ದುಃಖ ತೋಡಿಕೊಂಡಿದ್ದಾರೆ.

Advertisement

ಇದಕ್ಕೆ ಸಾಯ್‌ (ಭಾರತ ಕ್ರೀಡಾ ಪ್ರಾಧಿಕಾರ) ಪ್ರತಿಕ್ರಿಯಿಸಿ, ಇದು ಸರ್ಕಾರ ಕಳುಹಿಸಿದ ತಂಡವಲ್ಲ, ಇದರಲ್ಲಿ ಸಾಯ್‌ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ಬಾಲಕಿಯರು ಪ್ರಕಟಿಸಿರುವ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಕೋಚ್‌ ಪ್ರದೀಪ್‌ ಕುಮಾರ್‌ ಸಾಯ್‌ನ ರಾಷ್ಟ್ರೀಯ ಯೋಜನೆಯಲ್ಲಿಲ್ಲ, ಹಾಗೆಯೇ ಆ ತಂಡ ರಾಷ್ಟ್ರೀಯ ತಂಡವೂ ಅಲ್ಲ ಎನ್ನುವುದು ಸಾಯ್‌ ಮಾಹಿತಿ. ಇದೇ ವೇಳೆ ಬಾಲಕಿಯರ ರಕ್ಷಣೆಗೆ ಆಸ್ಟ್ರೇಲಿಯಾದಲ್ಲಿರುವ ಆಸೀಸ್‌-ಇಂಡೋ ಸಮುದಾಯ ಸಂಘಟನೆ ಧಾವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್‌ ಸಿಂಗ್‌ ರಾಥೋಡ್‌ ತನಿಖೆಗೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next