Advertisement

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

02:31 PM Dec 26, 2024 | Team Udayavani |

ಹೈದರಾಬಾದ್‌: ಇತ್ತೀಚೆಗಷ್ಟೇ ವಿವಾಹವಾಗಿರುವ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು, ಪೊಸಿಡೆಕ್ಸ್‌ ಟೆಕ್ನಾಲಜೀಸ್‌ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟ ಸಾಯಿದತ್ತಾ ನಡುವಿನ ಪ್ರೇಮ ಹತ್ತು ವರ್ಷಗಳಷ್ಟು ಹಳತು! ಇಬ್ಬರೂ ಈ ಬಗ್ಗೆ ಕಿಂಚಿತ್ತೂ ಸುಳಿವು ನೀಡದೆ ನಿಭಾಯಿಸಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

Advertisement

2013ರಲ್ಲಿ ಇಬ್ಬರೂ ಹೈದರಾಬಾದ್‌ನಿಂದ ದೆಹಲಿಗೆ ಹೋಗುವ ವಿಸ್ತಾರದ ವಿಮಾನದಲ್ಲಿ ಇಬ್ಬರೂ ಪರಸ್ಪರ ಭೇಟಿಯಾದೆವು. ಅಲ್ಲಿಂದ ಶುರುವಾದ ಮಾತುಕತೆ ನಿಧಾನಕ್ಕೆ ಪ್ರೀತಿಗೆ ತಿರುಗಿತು. ಈ ಬಾರಿ ಪ್ಯಾರಿಸ್‌ ಒಲಿಂಪಿಕ್ಸ್‌ ಮುಗಿದ ಕೂಡಲೇ ಮದುವೆಯಾಗಲು ತೀರ್ಮಾನಿಸಿದೆವು ಎಂದು ಸಿಂಧು ಮತ್ತು ದತ್ತಾ ಹೇಳಿದ್ದಾರೆ.

2013ಕ್ಕೂ ಮುನ್ನ ಸುಮ್ಮನೆ ಒಂದು ಪರಿಚಯವಿತ್ತು. ಬೇರೆ ಏನೂ ಇರಲಿಲ್ಲ ಎಂದಿರುವ ಸಿಂಧು, ದತ್ತಾ ಎಲ್ಲದ್ದಕ್ಕೂ ಬೆಂಬಲ ನೀಡುತ್ತಾರೆ. ಏನೇ ಅಗತ್ಯ ಬಂದರೂ ಜೊತೆಗಿರುತ್ತಾರೆ. ಈ ರೀತಿಯ ಸಂಗಾತಿ ಅತ್ಯಗತ್ಯ ಎಂದು ಹೇಳಿದ್ದಾರೆ. ಮೊದಲು ಸಂದೇಶ ಕಳಿಸಿದ್ದು, ಕರೆ ಮಾಡಿದ್ದು ಸಿಂಧು ಎಂದು ವೆಂಕಟ ಸಾಯಿದತ್ತಾ ತಮಾಷೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next