ಮುಂಬೈ: ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ವೈಟ್ ವಾಶ್ ಸೋಲನುಭವಿಸಿದ ಭಾರತೀಯ ವನಿತಾ ತಂಡವು ಇದೀಗ ವೆಸ್ಟ್ ಇಂಡೀಸ್ ಚಾಲೆಂಜ್ ಗೆ ಸಿದ್ದವಾಗಿದೆ. ವೆಸ್ಟ್ ಇಂಡೀಸ್ ವನಿತಾ ತಂಡವು ಭಾರತೀಯ ಪ್ರವಾಸಕ್ಕೆ ಆಗಮಿಸಿದ್ದು, ಏಕದಿನ ಮತ್ತು ಟಿ20 ಸರಣಿ ಆಡಲಿದೆ.
ಮೊದಲು ಮೂರು ಟಿ20 ಪಂದ್ಯಗಳು ನಡೆಯಲಿದ್ದು, ಡಿ.15, 17, 19ರಂದು ನವೀ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ. ಮೂರು ಏಕದಿನ ಪಂದ್ಯಗಳು ಡಿ.22, 24, 27ರಂದು ವಡೋದರದ ರಿಲಯನ್ಸ್ ಮೈದಾನದಲ್ಲಿ ನಡೆಯಲಿದೆ.
ಯಾಸ್ತಿಕಾ ಭಾಟಿಯಾ, ಶ್ರೇಯಾಂಕಾ ಪಾಟೀಲ್ ಮತ್ತು ಪ್ರಿಯಾ ಪೂನಿಯಾ ಗಾಯದಿಂದಾಗಿ ಎರಡೂ ಸರಣಿಗಳಿಗೆ ಆಯ್ಕೆಯಾಗಿಲ್ಲ. ನಂದಿನಿ ಕಶ್ಯಪ್ ಮತ್ತು ರಘ್ವಿ ಬಿಸ್ಟ್ ಅವರು ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಮತ್ತೆ ಕೈಬಿಡಲಾಗಿದೆ. ಆಸೀಸ್ ವಿರುದ್ದದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅರುಂಧತಿ ರೆಡ್ಡಿ ಅವರನ್ನು ಕಡೆಗಣೆಸಲಾಗಿದೆ.
ಟಿ20 ಸರಣಿಗೆ ತಂಡ
ಹರ್ಮನ್‌ಪ್ರೀತ್ ಕೌರ್ (ನಾ), ಸ್ಮೃತಿ ಮಂಧಾನ (ಉ.ನಾ), ನಂದಿನಿ ಕಶ್ಯಪ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿ.ಕೀ), ಉಮಾ ಚೆಟ್ರಿ (ವಿ.ಕೀ), ದೀಪ್ತಿ ಶರ್ಮಾ, ಸಜನಾ ಸಜೀವನ್, ರಘ್ವಿ ಬಿಸ್ಟ್, ರೇಣುಕಾ ಸಿಂಗ್ ಠಾಕೂರ್, ಪ್ರಿಯಾ ಮಿಶ್ರಾ, ಟಿಟಾಸ್ ಸಧು, ಸೈಮಾ ಠಾಕೂರ್, ಮಿನ್ನು ಮಣಿ, ರಾಧಾ ಯಾದವ್
ಏಕದಿನ ಸರಣಿಗೆ ತಂಡ
ಹರ್ಮನ್‌ಪ್ರೀತ್ ಕೌರ್ (ನಾ), ಸ್ಮೃತಿ ಮಂಧಾನ (ಉ.ನಾ), ಪ್ರತೀಕಾ ರಾವಲ್, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ರಿಚಾ ಘೋಷ್ (ವಿ.ಕೀ), ಉಮಾ ಚೆಟ್ರಿ (ವಿ.ಕೀ), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವೆರ್, ಟಿಟಾಸ್ ಸಧು , ಸೈಮಾ ಠಾಕೂರ್, ರೇಣುಕಾ ಸಿಂಗ್ ಠಾಕೂರ್.