Advertisement

Team India: ಎಂಸಿಜಿಯಲ್ಲಿ ಟೀಮ್‌ ಇಂಡಿಯಾ ಅಭ್ಯಾಸ

10:40 PM Dec 21, 2024 | Team Udayavani |

ಮೆಲ್ಬರ್ನ್: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯಕ್ಕಾಗಿ ಭಾರತದ ಆಟಗಾರರು ಶನಿವಾರ “ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌’ ನಲ್ಲಿ ಅಭ್ಯಾಸ ಆರಂಭಿಸಿದರು.

Advertisement

ತೀವ್ರ ರನ್‌ ಬರಗಾಲದಲ್ಲಿರುವ ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಯಶಸ್ವಿ ಜೈಸ್ವಾಲ್‌, ಕೆ.ಎಲ್‌. ರಾಹುಲ್‌ ಸುದೀರ್ಘ‌ ಅಭ್ಯಾಸ ನಡೆಸಿ ದರು. ಇವರಿಗೆ ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ವಾಷಿಂಗ್ಟನ್‌ ಸುಂದರ್‌ ಮತ್ತು ತ್ರೋಡೌನ್‌ ಸ್ಪೆಷಲಿಸ್ಟ್‌ಗಳು ಬೌಲಿಂಗ್‌ ನಡೆಸಿದರು.

ಆದರೆ ಆರ್‌. ಅಶ್ವಿ‌ನ್‌ ದಿಢೀರ್‌ ನಿವೃತ್ತಿ ಘೋಷಿಸಿ ತವರಿಗೆ ವಾಪಸಾದ್ದರಿಂದ ಆಫ್ಸ್ಪಿನ್ನರ್‌ ಕೊರತೆ ಎದುರಾಯಿತು. ಆಗ ದೇವದತ್ತ ಪಡಿಕ್ಕಲ್‌ ಈ ಪಾತ್ರ ವಹಿಸಿದರು. ಬಳಿಕ ಅವರು ಸಫ‌ì ರಾಜ್‌ ಖಾನ್‌ ಜತೆ ಬ್ಯಾಟಿಂಗ್‌ ಅಭ್ಯಾಸವನ್ನೂ ನಡೆಸಿದರು. ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ ಶಾರ್ಟ್‌ ರನ್‌ಅಪ್‌ ಮೂಲಕ ಬೌಲಿಂಗ್‌ ಮಾಡಿದರು. ಆಯ್ಕೆ ಮಂಡಳಿ ಅಧ್ಯಕ್ಷ ಅಜಿತ್‌ ಅಗರ್ಕರ್‌ ಕೂಡ ಚೆಂಡನ್ನು ಕೈಗೆತ್ತಿಕೊಂಡರು.

ಈ ಸಂದರ್ಭದಲ್ಲಿ ವಾಷಿಂಗ್ಟನ್‌ ಸುಂದರ್‌ ಬಳಿ “ನಿಮ್ಮ ಫೀಲ್ಡ್‌ ಪ್ಲೇಸ್‌ಮೆಂಟ್‌ ಹೇಗಿರುತ್ತದೆ’ ಎಂದು ಕೇಳಿದ ರೋಹಿತ್‌, ಇದಕ್ಕೆ ತಕ್ಕಂತೆ ಹೊಡೆತ ಗಳನ್ನು ಬಾರಿಸಿದರು. ಪೇಸ್‌ ಬೌಲರ್‌ಗಳ ಎಸೆತಗಳಿಗೆ ರಿವರ್ಸ್‌ ಸ್ವೀಪ್‌ಗ್ೂ ಪ್ರಯತ್ನಿಸಿದರು. ಇದೇ ವೇಳೆ ಕ್ರಿಕೆಟ್‌ ಅಭಿಮಾನಿಯೋರ್ವ, “ರೋಹಿತ್‌, ನಾನು ನಿಮ್ಮನ್ನು ಕಾಣಲು ಬಹಳ ದೂರ ದಿಂದ ಬಂದಿದ್ದೇನೆ’ ಎಂದು ಕೂಗಿ ಹೇಳಿದ ವಿದ್ಯಮಾನವೂ ಸಂಭವಿಸಿತು. ಆತನಿಗೆ ರೋಹಿತ್‌ ಮೌನವಾಗಿರುವಂತೆ ಸೂಚಿಸಿದರು.

ರಿಷಭ್‌ ಪಂತ್‌ ಕೋಚ್‌ ಗೌತಮ್‌ ಗಂಭೀರ್‌ ಜತೆ ಸುದೀರ್ಘ‌ ಸಮಾ ಲೋಚನೆ ನಡೆಸಿ ಬಳಿಕ ಬ್ಯಾಟಿಂಗ್‌ ಅಭ್ಯಾಸದಲ್ಲಿ ತೊಡಗಿದರು. ಟೀಮ್‌ ಇಂಡಿಯಾ ಆಟಗಾರರು 3 ಗಂಟೆಗಳ ಕಾಲ ನೆಟ್ಸ್‌ನಲ್ಲಿ ಕಳೆದರು.

Advertisement

ರಾಹುಲ್‌ ಬೆರಳಿಗೆ ಗಾಯ

ಈ ವೇಳೆ ಕೆ.ಎಲ್‌. ರಾಹುಲ್‌ ಅವರ ಕೈ ಬೆರಳಿಗೆ ಏಟು ಬಿದ್ದ ಘಟನೆ ಸಂಭವಿಸಿದೆ. ಕೂಡಲೇ ಚಿಕಿತ್ಸೆ ನೀಡಲಾ ಯಿತು. ಇದೇನೂ ಗಂಭೀರ ಸ್ವರೂಪದ ಗಾಯವಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next