Advertisement

ಭಾರತ ಪ್ರವಾಸಕ್ಕೆ ನೀಶಮ್‌, ಬ್ರೂಮ್‌ ಇಲ್ಲ

06:40 AM Sep 26, 2017 | |

ವೆಲ್ಲಿಂಗ್ಟನ್‌: ಏಕದಿನ ಹಾಗೂ ಟಿ-20 ಸರಣಿಗಾಗಿ ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲ್ಯಾಂಡ್‌ ತಂಡದಲ್ಲಿ ಆಲ್‌ರೌಂಡರ್‌ ಜೇಮ್ಸ್‌ ನೀಶಮ್‌ ಮತ್ತು ಬ್ಯಾಟ್ಸ್‌ಮನ್‌ ನೀಲ್‌ ಬ್ರೂಮ್‌ ಇರುವುದಿಲ್ಲ. ಇವರಿಬ್ಬರನ್ನು 9 ಸದಸ್ಯರ ಪ್ರಾಥಮಿಕ ತಂಡದಿಂದ ಹೊರಗಿರಿಸಲಾಗಿದೆ.

Advertisement

ಉಳಿದ 6 ಆಟಗಾರರನ್ನು ಸದ್ಯ ಭಾರತ ಪ್ರವಾಸದಲ್ಲಿರುವ ನ್ಯೂಜಿಲ್ಯಾಂಡ್‌ “ಎ’ ತಂಡದಿಂದ ಆರಿಸಿಕೊಳ್ಳಲಾಗುವುದು ಎಂದು ಕಿವೀಸ್‌ ಕೋಚ್‌ ಮೈಕ್‌ ಹೆಸನ್‌ ಹೇಳಿದ್ದಾರೆ.

ನ್ಯೂಜಿಲ್ಯಾಂಡಿನ ಪ್ರಾಥಮಿಕ ತಂಡದಲ್ಲಿ ಕಾಣಿಸಿಕೊಂಡವರೆಂದರೆ ಕೇನ್‌ ವಿಲಿಯಮ್ಸನ್‌ (ನಾಯಕ), ಟ್ರೆಂಟ್‌ ಬೌಲ್ಟ್, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಾರ್ಟಿನ್‌ ಗಪ್ಟಿಲ್‌, ಟಾಮ್‌ ಲ್ಯಾಥಂ, ಆ್ಯಡಂ ಮಿಲೆ°, ಮಿಚೆಲ್‌ ಸ್ಯಾಂಟ್ನರ್‌, ಟಿಮ್‌ ಸೌಥಿ ಮತ್ತು ರಾಸ್‌ ಟಯ್ಲರ್‌.

ಏಕದಿನ ಸರಣಿ ಅ. 22ರಿಂದ, ಟಿ-20 ಸರಣಿ ನ. ಒಂದರಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next