Advertisement

Jimmy Carter: ಅಮೆರಿಕದ ಮಾಜಿ ಅಧ್ಯಕ್ಷ, ನೊಬೆಲ್ ಪ್ರಶಸ್ತಿ ವಿಜೇತ ಜಿಮ್ಮಿ ಕಾರ್ಟರ್ ನಿಧನ

09:30 AM Dec 30, 2024 | Team Udayavani |

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಜಿಮ್ಮಿ ಕಾರ್ಟರ್ ಅವರು ತಮ್ಮ 100 ನೇ ವಯಸ್ಸಿನಲ್ಲಿ ಜಾರ್ಜಿಯಾದ ತಮ್ಮ ಮನೆಯಲ್ಲಿ ಭಾನುವಾರ ನಿಧನರಾದರು ಎಂದು ಯುಎಸ್ ಮಾಧ್ಯಮವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

Advertisement

ಅಕ್ಟೋಬರ್ 1, 1924 ರಂದು ಜಾರ್ಜಿಯಾದಲ್ಲಿ ಜನಿಸಿದ್ದ ಜಿಮ್ಮಿ ಕಾರ್ಟರ್ ಅವರು 1977 ರಿಂದ 1981 ರವರೆಗೆ ಯುನೈಟೆಡ್ ಸ್ಟೇಟ್ಸ್ ನ 39 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ತನ್ನ ಆಡಳಿತದ ಅವಧಿಯಲ್ಲಿ ಮಾಡಿರುವ ಅನೇಕ ಮಾನವೀಯ ಕೆಲಸಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಕಾರ್ಟರ್, ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಶಾಂತಿ ನೆಲೆಸಲು ಮಧ್ಯಸ್ಥಿಕೆ ವಹಿಸಿದ ಕೀರ್ತಿಗೂ ಕಾರ್ಟರ್ ಪಾತ್ರರಾಗಿದ್ದಾರೆ.

ಅಧ್ಯಕ್ಷರಾಗುವ ಮೊದಲು, ಕಾರ್ಟರ್ ಅವರು ಯುನೈಟೆಡ್ ಸ್ಟೇಟ್ಸ್ ನ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದರು, ಬಳಿಕ ಜಾರ್ಜಿಯಾದ ಗವರ್ನರ್ ಆಗಿ ಸೇವೆಯನ್ನು ಸಲ್ಲಿಸಿದ್ದರು.

Advertisement

1977 ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಾವಿರಾರು ಸಾವಲುಗಳು ಕಾರ್ಟರ್ ಎದುರಿಸಬೇಕಾಯಿತು ಇದೆಲ್ಲವನ್ನೂ ಧೈರ್ಯದಿಂದಲೇ ಎದುರಿಸಿದ ಅವರು ಅಚ್ಚುಕಟ್ಟಾಗಿ ಆಡಳಿತ ನಡೆಸಿದ್ದರು.

ಜಿಮ್ಮಿ ಕಾರ್ಟರ್ ಅವರು ಮೆಲನೋಮಾ ಎಂಬ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಅವರ ನಿಧನಕ್ಕೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹರಿಯಾಣದ ಗ್ರಾಮಕ್ಕೆ ಕಾರ್ಟರ್ ಹೆಸರು
ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ಭಾರತಕ್ಕೆ ಭೇಟಿ ನೀಡಿದ ಸವಿ ನೆನಪಿಗಾಗಿ ಹರಿಯಾಣದ ಗ್ರಾಮವೊಂದಕ್ಕೆ ಕಾರ್ಟರ್ ಪುರಿ ಎಂದು ಹೆಸರಿಡಲಾಗಿದ್ದು ಇಂದಿಗೂ ಈ ಹೆಸರು ಚಾಲ್ತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next