Advertisement

Blitz Chess: ಜೀನ್ಸ್‌ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್‌ ಆಡಲು ಕಾರ್ಲ್ಸನ್‌ ಸಿದ್ಧ

10:15 PM Dec 30, 2024 | Team Udayavani |

ನ್ಯೂಯಾರ್ಕ್‌: ಜೀನ್ಸ್‌ ಬದಲಿಸಲು ಒಪ್ಪದ ಕಾರಣ ನ್ಯೂಯಾರ್ಕ್‌ನ ವಿಶ್ವ ರ್ಯಾಪಿಡ್‌ ಚೆಸ್‌ ಸ್ಪರ್ಧೆಯಿಂದ ಅನರ್ಹಗೊಂಡಿದ್ದ ನಾರ್ವೆಯ ಚೆಸ್‌ ಆಟಗಾರ ಮ್ಯಾಗ್ನಸ್‌ ಕಾರ್ಲ್ಸನ್‌, ಇದೇ ಪಂದ್ಯಾವಳಿಯ ಬ್ಲಿಟ್ಜ್ ವಿಭಾಗದ ಸ್ಪರ್ಧೆಯಲ್ಲಿ ಆಡಲು ಸಿದ್ಧರಾಗಿದ್ದಾರೆ.

Advertisement

ಜೀನ್ಸ್‌ ಧರಿಸಿ ಆಡಲು ಫಿಡೆ ಅನುಮತಿ ನೀಡಿರುವುದೇ ಇದಕ್ಕೆ ಕಾರಣ.ರ್ಯಾಪಿಡ್‌ ಚೆಸ್‌ ವೇಳೆ 9ನೇ ಸುತ್ತಿನಲ್ಲಿ ವಸ್ತ್ರಸಂಹಿತೆ ವಿವಾದದಿಂದಾಗಿ ಕಾರ್ಲ್ಸನ್‌ ಸ್ಪರ್ಧೆಯಿಂದ ಹೊರಬಿದ್ದಿದ್ದರು. ಜೀನ್ಸ್‌ ಧರಿಸಿ ಆಡಿದ್ದ ಕಾರ್ಲ್ಸನ್‌ಗೆ ನಿಯಮ ಉಲ್ಲಂ ಸಿದ ಕಾರಣ ನೀಡಿ ಆರಂಭದಲ್ಲಿ 17,000 ರೂ. ದಂಡ ವಿಧಿಸಲಾಯಿತು. ಬಳಿಕ ಕೂಟದಿಂದಲೇ ಅನರ್ಹಗೊಳಿಸಲಾಗಿತ್ತು.

ಈ ಕುರಿತು ಟ್ವೀಟ್‌ ಮಾಡಿರುವ ಫಿಡೆ ಅಧ್ಯಕ್ಷ ಅರ್ಕಾಡಿ ಡ್ವಾರ್ಕೋವಿಕ್‌, ಪಂದ್ಯಾವಳಿಯ ವೇಳೆ ಅಧಿಕೃತ ವಸ್ತ್ರಸಂಹಿತೆ ಪಾಲಿಸುವ ಅಗತ್ಯವಿದೆ. ಆದರೆ ಸಣ್ಣ ಪುಟ್ಟ ಬದಲಾವಣೆಗೆ (ಅಂದರೆ ಸರಿಯಾದ ಜೀನ್ಸ್‌ಗೆ ಒಪ್ಪುವ ಜಾಕೆಟ್‌ ಇತ್ಯಾದಿ)ಅವಕಾಶವಿದೆ ಎಂದು ಬರೆದುಕೊಂಡಿದ್ದಾರೆ.

ಆನಂದ್‌ ಕಾರ್ಲ್ಸನ್‌ ಕಿಡಿ
ಫಿಡೆಯ ಉಪಾಧ್ಯಕ್ಷ, ಭಾರತದ ದಿಗ್ಗಜ ವಿಶ್ವನಾಥನ್‌ ಆನಂದ್‌ ವಿರುದ್ಧ ಕಾರ್ಲ್ಸನ್‌ ಕಿಡಿ ಕಾರಿದ್ದಾರೆ. ತನ್ನ ಎಲ್ಲ ಒಳ್ಳೆಯ ಗುಣಗಳ ಕಾರಣ, ಆನಂದ್‌ ತಮ್ಮ ಹುದ್ದೆಗೆ ಸಲ್ಲದವರಾಗಿದ್ದಾರೆ ಎಂದು ನನಗನ್ನಿಸುತ್ತಿದೆ ಎಂದು ಕಾರ್ಲ್ಸನ್‌ ಹೇಳಿದ್ದಾರೆ. ಆನಂದ್‌, ತೊಂದರೆ ತೆಗೆದುಕೊಳ್ಳಲು ಸಿದ್ಧರಿಲ್ಲದ ವ್ಯಕ್ತಿ ಎಂಬರ್ಥದಲ್ಲಿ ಕಾರ್ಲ್ಸನ್‌ ಹೀಗೆ ಹೇಳಿದ್ದಾರೆ. ಜೀನ್ಸ್‌ ವಿವಾದವಾದಾಗ, ಸಾಮಾನ್ಯವಾಗಿ ಚೆಸ್‌ ಕೂಟಗಳಲ್ಲಿ ಜೀನ್ಸ್‌ ಧರಿಸುವುದಿಲ್ಲ ಎಂದು ಆನಂದ್‌ ಹೇಳಿದರು. ಅದರರ್ಥ, ಕೆಲವು ಸಂದರ್ಭದಲ್ಲಿ ಧರಿಸಬಹುದು ಎಂದಾಗುತ್ತದೆ ಅಲ್ಲವೇ ಎಂದು ಕಾರ್ಲ್ಸನ್‌ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next