Advertisement

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

02:26 PM Dec 25, 2024 | Team Udayavani |

ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡಿದ್ದ ಪ್ರಭಾಸ್‌ ನಟನೆಯ “ಸಲಾರ್‌’ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂ. ಗಳಿಕೆ ಕಂಡಿತ್ತು.

Advertisement

ಕಮರ್ಷಿಯಲ್‌ ಹಿಟ್‌ ಆಗಿ, ಪ್ರಭಾಸ್‌ಗೆ ಒಂದು ಬ್ರೇಕ್‌ ಕೊಟ್ಟ ಸಿನಿಮಾ ಇದಾಗಿದ್ದರೂ, ಅದರ ನಿರ್ದೇಶಕ ಪ್ರಶಾಂತ್‌ ನೀಲ್‌ “ಸಲಾರ್‌’ ಬಗ್ಗೆ ಅಸಮಾಧಾನ ಹೊರಹಾಕಿ ದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತ, “ಸಲಾರ್‌ ಚಿತ್ರದ ಬಗ್ಗೆ ನನಗೆ ಅಸಂತೃಪ್ತಿಯಿದೆ. ಕೆಜಿಎಫ್ 2 ನಂಥ ಸಿನಿಮಾ ಮಾಡಿದ ನಾನು, ಸಲಾರ್‌ಗೆ ಇನ್ನಷ್ಟು ಶ್ರಮ ಹಾಕಿ, ಚಿತ್ರದ ಗುಣಮಟ್ಟ ಹೆಚ್ಚಿಸಬಹುದಿತ್ತು. ಇದೇ ಕಾರಣಕ್ಕೆ ನಾನು ಸಲಾರ್‌ 2 ಚಿತ್ರಕ್ಕೆ ಹೆಚ್ಚಿನ ಪರಿಶ್ರಮ ಹಾಕುತ್ತಿದ್ದೇನೆ. ಇಷ್ಟು ವರ್ಷ ನಾನು ಬರೆದ ಕಥೆಗಳಲ್ಲಿ ಇದೇ ಅತ್ಯುತ್ತಮವೆನ್ನಬಹುದು. ಸಲಾರ್‌ 2 ಕೂಡ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಮೂಡಿಬರಲಿದೆ. ಸಲಾರ್‌ 2 ಬಗ್ಗೆ ನಾನು ಹೆಚ್ಚಿನ ಭರವಸೆ ಇಟ್ಟಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಸದ್ಯ “ರಾಜಾ ಸಾಬ್‌’ ಚಿತ್ರದಲ್ಲಿ ಬಿಝಿಯಾಗಿರುವ ನಟ ಪ್ರಭಾಸ್‌, ಈ ಚಿತ್ರದ ನಂತರ “ಸಲಾರ್‌ 2′ ನಲ್ಲಿ ತೊಡಗಿಕೊಳ್ಳಲಿದ್ದಾರೆ. ಹೊಂಬಾಳೆ ಫಿಲಂಸ್‌ ಅವರ ನಿರ್ಮಾಣ ಈ ಚಿತ್ರಕ್ಕೆ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next