ಚೆನ್ನೈ: ಡಿಎಂಕೆಯನ್ನು ರಾಜವಂಶದ ಪಕ್ಷ ಎಂದು ಕರೆದಿರುವ ಗೃಹ ಸಚಿವ ಅಮಿತ್ ಶಾಗೆ ತಮಿಳುನಾಡು ಕ್ರೀಡಾ ಸಚಿವ ಉಂಧಯನಿಧಿ ಸ್ಟಾಲಿನ್ ತಿರುಗೇಟು ನೀಡಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿಯಾಗಿ ತಮ್ಮ ಪುತ್ರ ಜಯ್ ಶಾ ಅವರ ಸ್ಥಾನದ ಆಧಾರದ ಮೇಲೆ ಸ್ಟಾಲಿನ್ ಪ್ರಶ್ನಿಸಿದ್ದಾರೆ.
ಶುಕ್ರವಾರ ರಾಮೇಶ್ವರಂನಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರ ಪಾದಯಾತ್ರೆಗೆ ಚಾಲನೆ ನೀಡಿದ ಅಮಿತ್ ಶಾ ಅವರು, ರಾಜವಂಶದ ರಾಜಕೀಯದ ಬಗ್ಗೆ ಹೇಳಿಕೆ ನೀಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಡಿಎಂಕೆ ಮಿತ್ರಪಕ್ಷಗಳು ರಾಜವಂಶದ ರಾಜಕೀಯವನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಡಿಎಂಕೆಯನ್ನು ರಾಜವಂಶದ ಪಕ್ಷ ಎಂದು ಅವರು ಆರೋಪಿಸಿದರು.
ಚೆನ್ನೈನಲ್ಲಿ ಡಿಎಂಕೆ ಯುವ ಘಟಕದ ನೂತನ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಉದಯನಿಧಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾದೆ, ಸಚಿವ ಸ್ಥಾನ ಪಡೆದೆ ಎಂದು ಹೇಳಿದರು.
ಇದನ್ನೂ ಓದಿ:”ಕದನ ವಿರಾಮಕ್ಕೆ ನಾವು ಸಿದ್ದ, ಆದರೆ ಅವರು…”: ಯದ್ಧ ನಿಲ್ಲಿಸುವ ಬಗ್ಗೆ ಪುಟಿನ್ ಮಾತು
“ನಮ್ಮ ಪಕ್ಷದ ನಾಯಕರು ನನ್ನನ್ನು ಮುಖ್ಯಮಂತ್ರಿ ಮಾಡುವ ಗುರಿ ಹೊಂದಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ನಾನು ಅಮಿತ್ ಶಾ ಅವರನ್ನು ಕೇಳಲು ಬಯಸುತ್ತೇನೆ, ನಿಮ್ಮ ಮಗ ಬಿಸಿಸಿಐ ಕಾರ್ಯದರ್ಶಿಯಾದದ್ದು ಹೇಗೆ?” ಎಂದು ಪ್ರಶ್ನಿಸಿದರು.
“ಅವರು ಎಷ್ಟು ಕ್ರಿಕೆಟ್ ಪಂದ್ಯ ಆಡಿದ್ದಾರೆ? ಅವರು ಎಷ್ಟು ರನ್ ಗಳಿಸಿದ್ದಾರೆ” ಎಂದು ಉದಯನಿಧಿ ಸ್ಟಾಲಿನ್ ಪ್ರಶ್ನಿಸಿದರು.