Advertisement
ಈ ಮೂಲಕ ಜಾಗತಿಕ ಕ್ರಿಕೆಟ್ ಮಂಡಳಿಯಲ್ಲಿ ಮುಖ್ಯಸ್ಥರಾದ ಭಾರತದ 5ನೆಯ ಮತ್ತು ಅತೀ ಕಿರಿಯ ಅಧಿಕಾರಿಯಾಗಿ ಜಯ್ ಶಾ ಗುರುತಿಸಿಕೊಂಡಿದ್ದಾರೆ. ಅವರಿಗೀಗ ಕೇವಲ 36 ವರ್ಷ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರರಾಗಿರುವ ಜಯ್ ಶಾ ಕಳೆದ 5 ವರ್ಷಗಳ ಕಾಲ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
ಬಿಸಿಸಿಐ ಇನ್ನು ನೂತನ ಕಾರ್ಯದರ್ಶಿ ಒಬ್ಬರನ್ನು ಕಾಣಬೇಕಿದೆ. ಒಲಿಂಪಿಕ್ಸ್‌ಗೆ ಕ್ರಿಕೆಟ್….
ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಬೆನ್ನಲ್ಲೇ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯ ಜತೆಗೆ ಜಗದ ಗಲದ ಅಭಿಮಾನಿಗಳಿಗೆ ಕ್ರಿಕೆಟ್ ಹೆಚ್ಚು ತಲುಪುವಂತೆ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದು ಜಯ್ ಶಾ ಹೇಳಿದ್ದಾರೆ.