ದುಬೈ: ಮಾಜಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಸಿಸಿಯ ಅಧ್ಯಕ್ಷರಾಗಿ ಐಸಿಸಿ ಪ್ರಧಾನ ಕಚೇರಿಗೆ ಗುರುವಾರ(ಡಿ5) ಮೊದಲ ಬಾರಿಗೆ ಭೇಟಿ ನೀಡಿದರು. ಮತ್ತೊಂದು ಕುತೂಹಲಕಾರಿ ನಡೆಯಲ್ಲಿ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಲೋನ್ ಸೈಕಿಯಾ ಭಾರತವನ್ನು ಪ್ರತಿನಿಧಿಸಿದರು.
ಜಯ್ ಶಾ ಅವರ ಸಭೆಯಲ್ಲಿ ಬಾಂಗ್ಲಾದೇಶದ ಫಾರುಕ್ ಅಹ್ಮದ್, ನ್ಯೂಜಿ ಲ್ಯಾಂಡ್ ನ ರೋಜರ್ ಟ್ವೆಸೆ, ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಯೋಫ್ ಅಲ್ಲಾರ್ಡಿಸ್, ಉಪಾಧ್ಯಕ್ಷ ಇಮ್ರಾನ್ ಖ್ವಾಜಾ, ಜಿಂಬಾಬ್ವೆಯ ತವೆಂಗ್ವಾ ಮುಕುಹ್ಲಾನಿ, ಯುಎಇಯ ಮುಬಾಶ್ಶಿರ್ ಉಸ್ಮಾನಿ, ಶ್ರೀಲಂಕಾದ ಶಮ್ಮಿ ಸಿಲ್ವಾ, ದಕ್ಷಿಣ ಆಫ್ರಿಕಾದ ಸಮಾದ್ ಮೊಹಮ್ಮದ್ ಸೌತ್ ಮೊಸಮ್ಮದ್ ಅಬ್ದುಲ್, ಮಲೇಷ್ಯಾದ ಮಹಿಂದ ವಲ್ಲಿಪುರಂ ಸೇರಿದಂತೆ ನಿರ್ದೇಶಕರ ಮಂಡಳಿ ಸದಸ್ಯರೆಲ್ಲರೂ ಹಾಜರಿದ್ದರು.
ಮೀಟ್ ಅಂಡ್ ಗ್ರೀಟ್ ಸೆಷನ್ ವಾಸ್ತವವಾಗಿ ಎಲ್ಲಾ ಸಮಾನ ಮನಸ್ಕ ಕ್ರಿಕೆಟ್ ಮಂಡಳಿಗಳಿಗೆ ‘ಹೈಬ್ರಿಡ್ ಮಾದರಿ’ಗೆ ತಮ್ಮ ಬೆಂಬಲವನ್ನು ಹೊಸ ಐಸಿಸಿ ಅಧ್ಯಕ್ಷರಿಗೆ ಪ್ರತಿಜ್ಞೆ ಮಾಡಲು ವೇದಿಕೆಯಾಗಿತ್ತು.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್, ಕ್ರಿಕೆಟ್ ಆಸ್ಟ್ರೇಲಿಯ ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಪ್ರತಿನಿಧಿಗಳು ವೈಯಕ್ತಿಕವಾಗಿ ಹಾಜರಾಗದಿದ್ದರೂ, ಪಾಕಿಸ್ಥಾನ ಕ್ರಿಕೆಟ್ ಮಂಡಳಿಯಿಂದ ಯಾರೂ ಬಂದಿರದಿದ್ದುದು ನಿರ್ಣಾಯಕ ಸಮಯದಲ್ಲಿ ಎದ್ದು ಕಂಡಿತು.
ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿ ಮತ್ತು ನಿರೀಕ್ಷಿತ ವೇಳಾಪಟ್ಟಿಯಲ್ಲೆ ಪಂದ್ಯಾವಳಿಯನ್ನು ಆಯೋಜಿಸುವ ಕುರಿತು ಚರ್ಚಿಸಲು ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಐಸಿಸಿಯ ಮಂಡಳಿಯ ಸಭೆಯನ್ನು ಶನಿವಾರಕ್ಕೆ(ಡಿ7) ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐಸಿಸಿ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ fusion Model ಬೇಡಿಕೆಗಳನ್ನು ತಿರಸ್ಕರಿಸಲಿದ್ದಾರೆ ಮತ್ತು ಭಾರತದಲ್ಲಿ ಭವಿಷ್ಯದ ಐಸಿಸಿ ಈವೆಂಟ್‌ಗಳನ್ನು ‘ಹೈಬ್ರಿಡ್ ಮಾಡೆಲ್’ ನಲ್ಲಿ ಆಯೋಜಿಸುವ ಬಗ್ಗೆ ಪಾಕಿಸ್ಥಾನಕ್ಕೆ ಯಾವುದೇ ಭರವಸೆ ನೀಡಲಾಗುವುದಿಲ್ಲ ಎಂದು ತಿಳಿದುಬಂದಿದೆ.