Advertisement
ಹೀಗೆಂದು ವಿಪಕ್ಷ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ. ರಾಜ್ಯಸಭೆಯಲ್ಲಿ ತಾವು ನೀಡಿದ “ಅಂಬೇಡ್ಕರ್ ಜಪ’ ಹೇಳಿಕೆಯು ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಬುಧವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿಪಕ್ಷಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
Related Articles
Advertisement
ನನ್ನ ರಾಜೀನಾಮೆಯಿಂದ ಖರ್ಗೆಗೆ ಸಹಾಯ ಆಗಲ್ಲ!ಖರ್ಗೆ ನಿಮ್ಮ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, “ಖರ್ಗೆ ಅವರಿಗೆ ಖುಷಿ ಆಗುವುದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ. ಆದರೆ ನನ್ನ ರಾಜೀನಾಮೆಯಿಂದ ಅವರ ಸಮಸ್ಯೆ ಪರಿಹಾರವಾಗದು. ಏಕೆಂದರೆ ಅವರಿಗೆ ಇನ್ನೂ 15 ವರ್ಷವಿಪಕ್ಷ ನಾಯಕನ ಸ್ಥಾನವೇ ಖಾಯಂ’ ಎಂದು ವ್ಯಂಗ್ಯವಾಡಿದರು. ಜತೆಗೆ, ರಾಹುಲ್ ಅವರ “ಒತ್ತಡ’ಕ್ಕೆ ಮಣಿದು ಖರ್ಗೆ ಅವರು ನನ್ನ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದೂ ಹೇಳಿದರು. ಸುಳ್ಳು ಹೇಳಿ ಸತ್ಯ ಮುಚ್ಚಿಇಡಲು ಸಾಧ್ಯವಿಲ್ಲ: ಮೋದಿ
ವಿವಾದದ ಬೆನ್ನಲ್ಲೇ ಅಮಿತ್ ಶಾರನ್ನು ಸಮರ್ಥಿಸಿಕೊಂಡು ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಕಾಂಗ್ರೆಸ್ ಪಕ್ಷದ ಸುಳ್ಳುಗಳು ಅವರ ತಪ್ಪುಗಳನ್ನು ಮುಚ್ಚಿಡಲಾರವು’ ಎಂದಿದ್ದಾರೆ. ಅಮಿತ್ ಶಾ ವಾಸ್ತವದಲ್ಲಿ ಅಂಬೇಡ್ಕರ್‌ರನ್ನು ಅವಮಾನಿಸುತ್ತಾ ಬಂದಿರುವ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್‌ನ ಸುಳ್ಳುಗಳು ಅವರ ಹಲವು ವರ್ಷಗಳ ತಪ್ಪುಗಳನ್ನು ಮುಚ್ಚಿಹಾಕುತ್ತವೆ ಎಂದು ಆ ಪಕ್ಷದ ನಾಯಕರು ಭಾವಿಸಿದ್ದರೆ ಅದು ಅವರ ಮೂರ್ಖತನ. ಅಮಿತ್ ಶಾ ಅವರು ಬಹಿರಂಗಪಡಿಸಿದ ಸತ್ಯವನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಕೀಳುಮಟ್ಟದ ನಾಟಕ ಮಾಡುತ್ತಿದೆ. ಆದರೆ ಜನರಿಗೆ ಸತ್ಯ ಗೊತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ಜೆ.ಪಿ.ನಡ್ಡಾ, ಅಶ್ವಿನಿ ವೈಷ್ಣವ್, ಗೋಯಲ್, ರವನೀತ್ ಬಿಟ್ಟು ಸೇರಿದಂತೆ ಕೇಂದ್ರದ ಹಲವು ಸಚಿವರೂ ಅಮಿತ್ ಶಾ ಪರ ನಿಂತಿದ್ದು, ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ ಶಾರನ್ನು ವಜಾ ಮಾಡಿ: ಖರ್ಗೆ
ಪ್ರಧಾನಿ ಮೋದಿಯವರಿಗೆ ಬಾಬಾ ಸಾಹೇಬ್ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ, ಕೂಡಲೇ ಅಮಿತ್ ಶಾ ರನ್ನು ಸಂಪುಟದಿಂದ ಹೊರಹಾಕಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ದೇಶದ ಸಂವಿಧಾನ ಶಿಲ್ಪಿಯನ್ನು ಅವಮಾನ ಮಾಡಿದವರನ್ನು ಮೋದಿ ಸಮರ್ಥಿಸಿಕೊಳ್ಳುತ್ತಿದ್ದಾರೆಂದರೆ ಏನರ್ಥ? ಅಂಬೇಡ್ಕರ್‌ಗಾಗಿ ಪ್ರಾಣತ್ಯಾಗಕ್ಕೂ ಜನ ಸಿದ್ಧರಿದ್ದಾರೆ. ಮಧ್ಯರಾತ್ರಿಯೊಳಗೆ ಅಮಿತ್ ಶಾರನ್ನು ಸಂಪುಟ ದಿಂದ ಕೈಬಿಟ್ಟರಷ್ಟೇ ಜನ ಸುಮ್ಮನಾಗುತ್ತಾರೆ. ಇಲ್ಲದಿದ್ದರೆ ದೇಶಾದ್ಯಂತ ಬೀದಿಗಿಳಿಯುತ್ತಾರೆ ಎಂದೂ ಎಚ್ಚರಿಸಿದ್ದಾರೆ. ಸಂವಿಧಾನದ ಜಾಗದಲ್ಲಿ ಮನುಸ್ಮತಿ ತರಬೇಕೆಂದು ಬಿಜೆಪಿ, ಆರೆಸ್ಸೆಸ್ ಬಯಸಿತ್ತು. ಆದರೆ ಅದಕ್ಕೆ ಅಂಬೇಡ್ಕರ್ ಅವಕಾಶ ನೀಡಲಿಲ್ಲ. ಇದೇ ಕಾರಣಕ್ಕೆ ಅವರಿಗೆ ಅಂಬೇಡ್ಕರ್ ಎಂದರೆ ಅಷ್ಟು ದ್ವೇಷ. ಎಂದೂ ಖರ್ಗೆ ಆರೋಪಿಸಿದ್ದಾರೆ.