ಮುಂಬಯಿ: ಮಾಜಿ ಆಲ್‌ರೌಂಡರ್ ಅಜಿತ್ ಅಗರ್ಕರ್ ಹೆಸರಲ್ಲಿ ಅಮೋಘ ಬ್ಯಾಟಿಂಗ್ ದಾಖಲೆ ಯೊಂದಿದೆ. ಅದೆಂದರೆ, “ಕ್ರಿಕೆಟ್ ಕಾಶಿ’ ಎನಿಸಿದ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಟೆಸ್ಟ್ ಶತಕವೊಂದನ್ನು ಬಾರಿಸಿದ್ದು. ದಾಖಲೆಗಳ ಮೇಲೆ ದಾಖಲೆಯನ್ನು ಪೇರಿಸಿದ ತೆಂಡುಲ್ಕರ್‌ಅವರಿಗೂ ಇಲ್ಲಿ ಸೆಂಚುರಿಯೊಂದನ್ನು ಬಾರಿಸಲು ಸಾಧ್ಯವಾಗಿಲ್ಲ. ಈ ಸಾಲಿಗೆ ಸೇರುವ ಮತ್ತೋರ್ವ ಪ್ರಮುಖ ಕ್ರಿಕೆಟಿ ಗನೆಂದರೆ ಆಸ್ಟ್ರೇಲಿಯದ ರಿಕಿ ಪಾಂಟಿಂಗ್.
ಅಜಿತ್ ಅಗರ್ಕರ್ 2002ರ ಇಂಗ್ಲೆಂಡ್ ಪ್ರವಾಸದ ವೇಳೆ ಲಂಡನ್ನಿನ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 109 ರನ್ ಬಾರಿಸಿ ಮೆರೆದಾಡಿದ್ದರು. ಒಮ್ಮೆ ಐಪಿಎಲ್‌ನಲ್ಲಿ ಕೆಕೆಆರ್ ಪರ ಒಟ್ಟಿಗೇ ಆಡುತ್ತಿದ್ದಾಗ ಈ ಶತಕದ ಸ್ಫೂರ್ತಿಯಲ್ಲಿ ರಿಕಿ ಪಾಂಟಿಂಗ್ ಅವರಲ್ಲಿ ಅಗರ್ಕರ್ ತಮಾಷೆಯಾಗಿ, “ಲಾರ್ಡ್ಸ್‌ನಲ್ಲಿ ನಿಮ್ಮದೆಷ್ಟು ಶತಕ ದಾಖಲಾಗಿದೆ?’ (ಹೌ ಮಚ್ ಸೆಂಚುರಿ ಅಟ್ ಲಾರ್ಡ್ಸ್ ಯಾ?) ಎಂದು ಕೇಳಿದ್ದರಂತೆ.
ಗೌರವ್ ಕಪೂರ್ ನಡೆಸಿಕೊಡುವ “22 ಯಾರ್ಡ್ಸ್’ ಕಾರ್ಯಕ್ರಮದಲ್ಲಿ ಅಜಿತ್ ಅಗರ್ಕರ್ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
“ಪಾಂಟಿಂಗ್ ಅದೆಷ್ಟೋ ಸೆಂಚುರಿ ಹೊಡೆದವರು. ನನ್ನದೋ… ಅದೊಂದು ಲಾರ್ಡ್ಸ್ ಶತಕ. ಅವ ರನ್ನು ಹೀಗೆ ಕೇಳಿದ್ದು ಖಂಡಿತ ಅಗೌರವದಿಂದಲ್ಲ, ಕೇವಲ ತಮಾಷೆಗೆ. ಲಾರ್ಡ್ಸ್ ಅಂಗಳದಲ್ಲಿ ಶತಕ ಹೊಡೆ ದದ್ದು ನನ್ನ ಪಾಲಿನ ಅದೃಷ್ಟ. ಅದೊಂದು ಸವಿ ಸವಿ ನೆನಪು’ ಎಂದು ಅಗರ್ಕರ್ ಹೇಳಿದರು.