Advertisement

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

12:34 AM Nov 19, 2024 | Team Udayavani |

ರಾಜ್‌ಗಿರ್‌ (ಬಿಹಾರ): ತುಂಬು ಆತ್ಮವಿಶ್ವಾಸದಿಂದ ಕೂಡಿರುವ ಆತಿಥೇಯ ಹಾಗೂ ಹಾಲಿ ಚಾಂಪಿಯನ್‌ ಭಾರತ ತಂಡ ಮಂಗಳವಾರದ ವನಿತಾ ಏಷ್ಯನ್‌ ಹಾಕಿ ಸೆಮಿಫೈನಲ್‌ನಲ್ಲಿ ಜಪಾನ್‌ ವಿರುದ್ಧ ಸೆಣಸಲಿದೆ. ತನ್ನ ಕೊನೆಯ ಲೀಗ್‌ ಪಂದ್ಯ ದಲ್ಲಿ ಜಪಾನ್‌ಗೆ 3-0 ಅಂತರದ ಸೋಲುಣಿಸಿದ ಸಲೀಮಾ ಟೇಟೆ ನಾಯಕತ್ವದ ಭಾರತ ಇಲ್ಲಿಯೂ ಫೇವರಿಟ್‌ ಎಂಬು ದರಲ್ಲಿ ಎರಡು ಮಾತಿಲ್ಲ. ಇನ್ನೊಂದು ಸೆಮಿಫೈನಲ್‌ನಲ್ಲಿ ಚೀನ-ಮಲೇಷ್ಯಾ ಮುಖಾಮುಖಿ ಆಗಲಿವೆ.

Advertisement

ಕೂಟದುದ್ದಕ್ಕೂ ಭಾರತದ ವನಿತೆಯರು ಅಮೋಘ ಪ್ರದ ರ್ಶನ ಕಾಯ್ದುಕೊಂಡು ಬಂದಿ ದ್ದಾರೆ. ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ ಸರ್ವಾಂ ಗೀಣ ಪ್ರದರ್ಶನ ನೀಡಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಭಾರತ ಆಡಿದ ಐದೂ ಪಂದ್ಯಗಳಲ್ಲಿ ಅಧಿಕಾರ ಯುತ ಜಯ ಸಾಧಿಸಿದೆ. ಇದರಲ್ಲಿ ಮಹತ್ವದ ಗೆಲುವು ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಚೀನ ವಿರುದ್ಧ ದಾಖಲಾಗಿತ್ತು.

ನಿರ್ಲಕ್ಷ್ಯ ಸಲ್ಲದು…
“ನಮ್ಮವರು ಆಕ್ರಮಣಕಾರಿ ಹಾಗೂ ಅಷ್ಟೇ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದಿದ್ದಾರೆ. ಎದುರಾಳಿಯ ಸಾಮರ್ಥ್ಯ ಹಾಗೂ ದೌರ್ಬಲ್ಯವನ್ನು ಅರಿತಾಗ ಕಾರ್ಯತಂತ್ರದಲ್ಲಿ ದೊಡ್ಡ ಯಶಸ್ಸು ಸಾಧ್ಯ. ನಮ್ಮ ಹುಡುಗಿ ಯರ ಈವರೆಗಿನ ಸಾಧನೆ ಯನ್ನು ಪ್ರಶಂಸಿಸಲೇ ಬೇಕು. ಆದರೆ ಸೆಮಿಫೈನಲ್‌ ಎಂಬುದು ಬೇರೆಯೇ ಪಂದ್ಯ. ಇಲ್ಲಿ ಯಾವ ನಿರ್ಲಕ್ಷ್ಯವೂ ಸಲ್ಲದು. ಜಪಾನ್‌ನಿಂದ ಪ್ರಬಲ ಹೋರಾಟ ಕಂಡುಬರಬಹುದು’ ಎಂಬು ದಾಗಿ ಕೋಚ್‌ ಹರೇಂದ್ರ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.
ಯುವ ಡ್ರ್ಯಾಗ್‌ಫ್ಲಿಕರ್‌ ದೀಪಿಕಾ ಈ ಕೂಟದಲ್ಲಿ ಅಮೋಘ ನಿರ್ವಹಣೆ ನೀಡಿದ್ದು, ಕೂಟದಲ್ಲೇ ಸರ್ವಾಧಿಕ 10 ಗೋಲು ಬಾರಿಸಿದ್ದಾರೆ.

ಫಾರ್ವರ್ಡ್‌ ಆಟಗಾರ್ತಿ ಯರಾದ ಶರ್ಮಿಳಾದೇವಿ, ಸಂಗೀತಾ ಕುಮಾರಿ, ಪ್ರೀತಿ ದುಬೆ, ಲಾಲ್ರೆಮಿÕಯಾಮಿ ಅವರ ಆಟ ಅಮೋಘ ಮಟ್ಟದ ಲ್ಲಿದೆ. ಉದಿತಾ, ಸುಶೀಲಾ ಚಾನು ಮತ್ತು ವೈಷ್ಣವಿ ವಿಟಲ್‌ ಫಾಲ್ಕೆ, ನಾಯಕಿ ಸಲೀಮಾ ಟೇಟೆ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಸೆಮಿಫೈನಲ್‌ನಲ್ಲೂ ನಮ್ಮವರು ಇದೇ ಮಟ್ಟವನ್ನು ಕಾಯ್ದುಕೊಂಡು ಬರಬೇಕಿದೆ. ಜತೆಗೆ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸುವಲ್ಲಿ ಇನ್ನಷ್ಟು ಪರಿಪೂರ್ಣತೆ ಸಾಧಿಸಬೇಕಿದೆ ಎಂಬುದು ಕೋಚ್‌ ಹರೇಂದ್ರ ಸಿಂಗ್‌ ಅಭಿಪ್ರಾಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next