Advertisement
ಮುಂಬರುವ ಐದು ಟೆಸ್ಟ್ಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಚಾಂಪಿಯನ್ ಕ್ರಿಕೆಟಿಗ ಪ್ರಬಲ ಹೋರಾಟ ನೀಡಬಹುದು ಎಂದು ಹೇಳಿದರು.
Related Articles
Advertisement
“ಕೊಹ್ಲಿ ಅವರು ಅಭಿಪ್ರಾಯ ಬದಲಾಯಿಸಲು ಈ ಸರಣಿ ಸಾಧ್ಯವಾಗಿಸುತ್ತದೆ. ಹಾಗಾಗಿ, ಮೊದಲ ಪಂದ್ಯದಲ್ಲಿ ವಿರಾಟ್ ರನ್ ಗಳಿಸುವುದನ್ನು ನೋಡಿ ನನಗೆ ಆಶ್ಚರ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ.
“ನಾನು ವಿರಾಟ್ ಕುರಿತು ಒಂದು ಅಂಕಿಅಂಶವನ್ನು ನೋಡಿದೆ. ಕಳೆದ ಐದು ವರ್ಷಗಳಲ್ಲಿ ಅವರು ಕೇವಲ ಎರಡು-ಮೂರು ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಐದು ವರ್ಷಗಳಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಬೇರೆ ಯಾರೂ ಬಹುಶಃ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಉಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.
“ವೈಟ್ವಾಶ್ ಆಗಿದ್ದು ನಿಜವಾಗಿಯೂ ಉತ್ತಮ ಗುಣಮಟ್ಟದ ಸ್ಪಿನ್ ಬೌಲಿಂಗ್ ವಿರುದ್ಧ ಭಾರತದ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ. ಆಧುನಿಕ ಭಾರತೀಯ ಬ್ಯಾಟರ್ ಗಳ ಸ್ಪಿನ್ ಆಡುವ ಕೌಶಲ್ಯ ಬಹುಶಃ ಮೊದಲಿನಂತಿಲ್ಲ ಎಂದು ತೋರುತ್ತದೆ” ಎಂದು ಪಾಂಟಿಂಗ್ ಹೇಳಿದ್ದಾರೆ.