Advertisement

Siddaramaiah; ಕೊಳ್ಳೆ ಹೊಡೆಯುತ್ತಿದ್ದರೂ ನಿಮ್ಮನ್ನು ಮುಟ್ಟಬಾರದಾ: ಎಚ್‌ಡಿಕೆ

01:08 AM Nov 16, 2024 | Team Udayavani |

ಮೈಸೂರು: ದೇಶ ಲೂಟಿ ಆದರೂ ಪರವಾಗಿಲ್ಲ. ನಿಮ್ಮನ್ನು ಆರಾಧಿಸಬೇಕೆ? ಏನು ಮಾಡಿದ್ದೀರಿ ಎಂದು ಜನ ನಿಮ್ಮನ್ನು ಆರಾಧಿಸಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ನನ್ನನ್ನು ಮುಟ್ಟಿದರೆ ಜನ ದಂಗೆ ಏಳುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ವಾಲ್ಮೀಕಿ ನಿಗಮದಲ್ಲಿನ ಹಗರಣದ 87 ಕೋಟಿ ರೂ. ಲೂಟಿ ಮಾಡಿರುವುದಕ್ಕೆ ನಿಮ್ಮನ್ನು ಆರಾಧಿಸಬೇಕಾ? ದೇಶ ಕೊಳ್ಳೆ ಹೊಡೆಯುತ್ತಿದ್ದರೂ ನಿಮ್ಮನ್ನು ಮುಟ್ಟಬಾರದಾ? ಎಂದು ಆಕ್ರೋಶ ಹೊರಹಾಕಿದರು. ಕೋವಿಡ್‌ ಹಗರಣದ ತನಿಖೆ ಮಾಡಿದ್ದ ಕೆಂಪಣ್ಣ ವರದಿ ಇಟ್ಟುಕೊಂಡು ಪೂಜೆ ಮಾಡ್ತಿದ್ದೀರಾ? ನೈಸ್‌ ಅಕ್ರಮ ಸಂಬಂಧ ಸದನ ಸಮಿತಿಯ ವರದಿ ನೀಡಿ ಸಿಬಿಐಗೆ ವಹಿಸುವಂತೆ ಈಗಿನ ಕಾನೂನು ಸಚಿವರು ಹೇಳಿದ್ದರು. ಯಾಕೆ ಕ್ರಮ ಆಗಿಲ್ಲ? ನೀವೊಬ್ಬರೇ ರಾಜ್ಯ ಉಳಿಸುವವರಲ್ಲವೇ ಎಂದು ಹೇಳಿದ ಅವರು, ನ. 23ಕ್ಕೆ ಫ‌ಲಿತಾಂಶ ಬರಲಿ ನಂತರ ಚರ್ಚೆ ಮಾಡೋಣ ಎಂದರು.

ಮಾತೆತ್ತಿರೆ ಇ.ಡಿ., ಸಿಬಿಐ, ಐಟಿ ದುರಪಯೋಗ ಮಾಡಿಕೊಂಡು ವಿಪಕ್ಷಗಳನ್ನು ಹೆದರಿಸುತ್ತಿವೆ ಎಂದು ಆರೋಪ ಮಾಡುತ್ತೀರಾ. ಆದರೆ, ಈಗ ನೀವು ಪೊಲೀಸ್‌, ಎಸ್‌ಐಟಿ ಮೂಲಕ ಮಾಡುತ್ತಿರುವುದು ಏನು? ಯಾವ ವಿಷಯವನ್ನು ಡೈವರ್ಟ್‌ ಮಾಡಲು 50 ಕೋಟಿ ಆಫ‌ರ್‌ ವಿಚಾರ ಮುನ್ನೆಲೆಗೆ ತಂದಿದ್ದೀರಿ? 50 ಕೋಟಿ ಆಫ‌ರ್‌ ಎಂಬ ವಾತಾವರಣ ನಿರ್ಮಾಣ ಮಾಡಿದ್ದು ಯಾರು? ಅಂತಹವರನ್ನು ಸಿಎಂ ಜತೆಯಲ್ಲೇ ಇಟ್ಟುಕೊಂಡು ಚುನಾವಣೆಯನ್ನೂ ನಡೆಸಿದ್ದಾರೆ. 28 ಜನ ನನ್ನ ಜೇಬಲ್ಲಿ ಇದ್ದಾರೆ ಎನ್ನುವವರನ್ನೇ ಜತೆಗೆ ಇರಿಸಿಕೊಂಡಿದ್ದೀರಿ. ಅವರನ್ನು ಕೇಳಿದರೆ ಎಲ್ಲಾ ಮಾಹಿತಿ ಕೊಡಬಹುದು. ಈ ರೀತಿ ಮಾತನಾಡಿದರೆ ಜನ ತಲೆ ಕಟ್ಟಿದೆ ಎನ್ನುತ್ತಾರೆ ಎಂದರು.

50ಕ್ಕೂ ಹೆಚ್ಚು ಶಾಸಕರಿಗೆ 50 ಕೋಟಿ ರೂ. ಆಮೀಷ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು ಯಾತಕ್ಕಾಗಿ 50 ಕೋಟಿ ಆಫ‌ರ್‌ ವಿಚಾರ ಪ್ರಸ್ತಾಪಿಸಿದ್ದಾರೆ? ಇಷ್ಟು ದಿನ ಏನು ಮಾಡುತ್ತಿದ್ದರು. ಇದು ಯಾವಾಗ ಶುರು ಆಯ್ತು. ಮಂಡ್ಯ ಮತ್ತು ಚನ್ನಗಿರಿಯ ಶಾಸಕರು ವರ್ಷದ ಹಿಂದೆಯೇ ಲೋಕಸಭಾ ಚುನಾವಣೆಗೆ ಮುಂಚೆಯೇ ನಮಗೂ ಆಫ‌ರ್‌ ಬಂದಿತ್ತು ಎಂದು ಪ್ರಸ್ತಾಪಿಸಿದ್ದರು. ಆದರೆ, ಅವರಿಗೆ ಯಾರು ಆಫ‌ರ್‌ ಮಾಡಿದ್ದು ಅಂತ ಹೇಳಲಿಎಂದು ಸವಾಲು ಹಾಕಿದರು.

ಜಮೀರ್‌ಗೆ ದುಡ್ಡಿನ ಮದ
ಸಚಿವ ಜಮೀರ್‌ ಅಹಮದ್‌ ಅವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಖಾಂದಾನ್‌ನನ್ನೇ ಕೊಂಡುಕೊಳ್ಳುತ್ತೇವೆ ಎಂದು ದುಡ್ಡಿನ ಮದದಲ್ಲಿ ಮಾತನಾಡುತ್ತಿ¨ªಾರೆ.ಅವರು ಎಲ್ಲಿದ್ದರು, ಯಾವ ರಿತಿ ಬೆಳೆದರು ಎಂಬುದು ಗೊತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದರು. ಸುದ್ದಿಗಾರರ ಜತೆ ಮಾತನಾಡಿ, ದೇವೇಗೌಡರ ಖಾಂದಾನ್‌ನನ್ನೇ ಕೊಂಡುಕೊಳ್ಳುತ್ತೇವೆ ಎಂದು ಮಾತನಾಡಿರುವವರು ಯಾವ ಮಟ್ಟಕ್ಕೆ ಬೆಳೆದಿರಬಹುದು. ಅವರೇನು ಕಷ್ಟಪಟ್ಟು ಬಸ್‌ ಓಡಿಸಿ ಹಣ ಸಂಪಾದಿಸಿದ್ದರೆ? ಮುಸ್ಲಿಂ ಸಮುದಾಯದವರು ಚಂದಾ ಎತ್ತಿ ದೇವೇಗೌಡರ ಖಾಂದಾನ್‌ ಕೊಂಡುಕೊಳ್ತಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next