Advertisement
ಒಂದೊಮ್ಮೆ ಕೋವಿಡ್-19 ಲಾಕ್‌ಡೌನ್ ಮುಂದುವರಿದರೆ ಆಗಬಹುದಾದ ಶೈಕ್ಷಣಿಕ ನಷ್ಟ, ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಆನ್‌ಲೈನ್ ಶಿಕ್ಷಣದ ಕುರಿತು ಪರಿಶೀಲನೆ ನಡೆಸಲು ಯುಜಿಸಿಯು ಎರಡು ಸಮಿತಿಗಳನ್ನು ನೇಮಿಸಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಇರುವ ಪರ್ಯಾಯ ಸಾಧ್ಯತೆಗಳನ್ನು ಶೋಧಿಸುವ ಮತ್ತು ಬದಲಿ ಶೈಕ್ಷಣಿಕ ಕ್ಯಾಲೆಂಡರ್ ಸಿದ್ಧಪಡಿಸುವ ಹೊಣೆಯನ್ನು ಹರಿಯಾ ಣ ವಿ.ವಿ. ಉಪಕುಲಪತಿ ಆರ್.ಸಿ. ಕುಹದ್ ಅವರ ನೇತೃತ್ವದ ಸಮಿತಿಗೆ ವಹಿಸಲಾಗಿತ್ತು. ಆನ್‌ಲೈನ್ ಶಿಕ್ಷಣವನ್ನು ಮತ್ತಷ್ಟು ಉತ್ತಮಪಡಿಸಲು ಕೈಗೊಳ್ಳಬೇಕಿರುವ ಕ್ರಮಗಳನ್ನು ಸೂಚಿಸುವ ಜವಾಬ್ದಾರಿಯನ್ನು ಇಂದಿರಾ ಗಾಂಧಿ ಮುಕ್ತ ವಿ.ವಿ. ಉಪಕುಲಪತಿ ನಾಗೇಶ್ವರ ರಾವ್ ನೇತೃತ್ವದ ಸಮಿತಿಗೆ ವಹಿಸಲಾಗಿತ್ತು. ಈ ಎರಡೂ ಸಮಿತಿಗಳು ಶುಕ್ರವಾರ ಯುಜಿಸಿಗೆ ವರದಿ ಸಲ್ಲಿಸಿವೆ.
Advertisement
ಉನ್ನತ ಶಿಕ್ಷಣ ವರ್ಷ ಸೆಪ್ಟಂಬರ್‌ನಿಂದ?
12:42 PM Apr 26, 2020 | Sriram |
Advertisement
Udayavani is now on Telegram. Click here to join our channel and stay updated with the latest news.