Advertisement

World Test Championship: ದಕ್ಷಿಣ ಆಫ್ರಿಕಾ ಫೈನಲ್‌ ಪ್ರವೇಶ

11:27 PM Dec 29, 2024 | Team Udayavani |

ಸೆಂಚುರಿಯನ್‌: ಅತ್ಯಂತ ರೋಚಕ ಹಣಾಹಣಿಯಲ್ಲಿ ಪ್ರವಾಸಿ ಪಾಕಿಸ್ಥಾನವನ್ನು 2 ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ 3ನೇ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆ ಹಾಕಿದ ಮೊದಲ ತಂಡವಾಗಿ ಹೊರಹೊಮ್ಮಿದೆ.

Advertisement

ದಕ್ಷಿಣ ಆಫ್ರಿಕಾ ತನ್ನ ಗೆಲುವಿನ ಪ್ರತಿಶತ ಸಾಧನೆಯ ಅಂಕವನ್ನು (ಪಿಸಿಟಿ) 66.67ಕ್ಕೆ ಏರಿಸಿಕೊಂಡಿದೆ. ಆಸ್ಟ್ರೇಲಿಯ ದ್ವಿತೀಯ (58.89), ಭಾರತ ತೃತೀಯ ಸ್ಥಾನದಲ್ಲಿದೆ (55.88).ಗೆಲುವಿಗೆ 148 ರನ್ನುಗಳ ಸುಲಭ ಸವಾಲು ಪಡೆದಿದ್ದ ದಕ್ಷಿಣ ಆಫ್ರಿಕಾ, 3ನೇ ದಿನದಾಟದ ಅಂತ್ಯಕ್ಕೆ 27 ರನ್ನಿಗೆ 3 ವಿಕೆಟ್‌ ಉದುರಿಸಿಕೊಂಡಿತ್ತು.

ರವಿವಾರ ವೇಗಿ ಮೊಹಮ್ಮದ್‌ ಅಬ್ಟಾಸ್‌ ಬಿಡುವಿಲ್ಲದೆ ಬೌಲಿಂಗ್‌ ದಾಳಿ ನಡೆಸಿ ಆತಿಥೇಯರನ್ನು ಸಂಕಟಕ್ಕೆ ತಳ್ಳಿದರು. 99ಕ್ಕೆ 8 ವಿಕೆಟ್‌ ಉದುರಿ ಹೋಯಿತು. ಆದರೆ ಕೊನೆಯ 2 ವಿಕೆಟ್‌ ಉರುಳಿಸಲು ಪಾಕಿಸ್ಥಾನದಿಂದ ಸಾಧ್ಯವಾಗಲಿಲ್ಲ. 10ನೇ ಕ್ರಮಾಂಕದ ಆಟಗಾರ ಕಾಗಿಸೊ ರಬಾಡ (ಔಟಾಗದೆ 31) ಮತ್ತು ಮಾರ್ಕೊ ಜಾನ್ಸೆನ್‌ (ಔಟಾಗದೆ 16) ಸೇರಿಕೊಂಡು ಮುರಿಯ 9ನೇ ವಿಕೆಟಿಗೆ 51 ರನ್‌ ಒಟ್ಟುಗೂಡಿಸಿ ತಂಡವನ್ನು ದಡ ಸೇರಿಸಿಯೇ ಬಿಟ್ಟರು. 3 ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟಿಗೆ ಮರಳಿದ ಮೊಹಮ್ಮದ್‌ ಅಬ್ಟಾಸ್‌ 54 ರನ್ನಿತ್ತು 6 ವಿಕೆಟ್‌ ಹಾರಿಸಿದರು.

ಮೊದಲ ಫೈನಲ್‌
ದಕ್ಷಿಣ ಆಫ್ರಿಕಾ ಐಸಿಸಿ ಟೆಸ್ಟ್‌ ಚಾಂಪಿ ಯನ್‌ಶಿಪ್‌ ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು. ಅದು ತನ್ನ 3ನೇ ಆವೃತ್ತಿಯನ್ನು ನ್ಯೂಜಿಲ್ಯಾಂಡ್‌ ವಿರುದ್ಧ ಸೋಲಿನೊಂದಿಗೆ ಆರಂಭಿಸಿತ್ತು. ಬಳಿಕ ಭಾರತದ ವಿರುದ್ಧ 1-1 ಸಮಬಲ ಸಾಧಿಸಿತು. ಅನಂತರ ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶ, ಶ್ರೀಲಂಕಾವನ್ನು ಮಣಿಸಿ ಅಗ್ರಸ್ಥಾನಕ್ಕೆ ನೆಗೆಯಿತು. ಇದೀಗ ಪಾಕಿಸ್ಥಾನವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.

ಸರಣಿಯ ದ್ವಿತೀಯ ಹಾಗೂ ಅಂತಿಮ ಪಂದ್ಯ ಜ. 7ರಂದು ಕೇಪ್‌ಟೌನ್‌ನಲ್ಲಿ ಆರಂಭವಾಗಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-211 ಮತ್ತು 237. ದಕ್ಷಿಣ ಆಫ್ರಿಕಾ-301 ಮತ್ತು 8 ವಿಕೆಟಿಗೆ 150.

Advertisement

Udayavani is now on Telegram. Click here to join our channel and stay updated with the latest news.

Next