Advertisement

ಪ್ರೌಢಶಾಲಾ ಶಿಕ್ಷಕರಿಗೂ ಎಸೆಸೆಲ್ಸಿ ಪರೀಕ್ಷೆ ಮೇಲ್ವಿಚಾರಣೆ ಹೊಣೆ

12:44 AM Mar 14, 2024 | Team Udayavani |

ಬೆಂಗಳೂರು: ಮಾ. 25ರಿಂದ ಎ.6ರ ವರೆಗೆ ನಡೆಯ ಲಿರುವ ಎಸೆಸೆಲ್ಸಿ ಪರೀಕ್ಷೆ-1ಕ್ಕೆ ಪರೀಕ್ಷಾ ಕೊಠಡಿ ಮೇಲ್ವಿಚಾರಕ ರನ್ನಾಗಿ ಪ್ರೌಢಶಾಲಾ ಸಹಶಿಕ್ಷಕರನ್ನು ನೇಮಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಒಪ್ಪಿಕೊಂಡಿದೆ.

Advertisement

ಪರೀಕ್ಷೆಯಲ್ಲಿ ನಕಲು ತಡೆಗಟ್ಟಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕೆಂಬ ಉದ್ದೇಶದಿಂದ ಎಸೆಸೆಲ್ಸಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಳ್ಳಲು ಈ ಮೊದಲು ಪರೀಕ್ಷಾ ಮಂಡಳಿ ತೀರ್ಮಾನಿಸಿತ್ತು.

ಪರೀಕ್ಷಾ ಮಂಡಳಿಯ ಈ ಕ್ರಮವನ್ನು ಪ್ರೌಢ ಶಾಲಾ ಶಿಕ್ಷಕರು ಸಹಿತ ವಿಧಾನ ಪರಿಷತ್‌ನಲ್ಲಿರುವ ಶಿಕ್ಷಕ ಕ್ಷೇತ್ರದ ಕೆಲವು ಪ್ರತಿನಿಧಿಗಳು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಹಿಂದಿನ ಆದೇಶವನ್ನು ಹಿಂಪಡೆದು ಕಳೆದ ಸಾಲಿನಲ್ಲಿದ್ದಂತೆ ಪ್ರೌಢಶಾಲೆಯ ಸಹ ಶಿಕ್ಷಕರಿಗೂ ಮೇಲ್ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ. ವೀಡಿಯೋ ಕಾನ್ಫರೆನ್ಸ್‌ ಮೂಲಕ ಆಯ್ದ ಮುಖ್ಯ ಅಧೀಕ್ಷಕರು ಮತ್ತು ತಾಲೂಕು ನೋಡಲ್‌ ಅಧಿಕಾರಿಗಳಿಗೆ ತರಬೇತಿ ನೀಡಲಾ ಗಿತ್ತು. ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ತಾಲೂಕು ಕೇಂದ್ರದಲ್ಲಿ ಮಾ.15ರಿಂದ 20ರ ವರೆಗೆ ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next