Advertisement
ಕುಷ್ಟಗಿ ತಾಲೂಕಿನ ಎಂ.ರಾಂಪುರ ಗ್ರಾಮದ ಮನು ದೇವಪ್ಪ, ಗುಮಗೇರಾ ಗ್ರಾಮದ ನೀಲಕಮಠಪ್ಪ ನಿಂಗಪ್ಪ ಹೊಸಮನಿ, ಯಲಬುರ್ಗಾ ತಾಲೂಕಿನ ಚಿಕ್ಕ ವಂಕಲಕುಂಟ ಗ್ರಾಮದ ಗುರುರಾಜ್ ಹನಮಂತಪ್ಪ ಪರಿಯವರ. ಯಲಬುರ್ಗಾ ಪಟ್ಟಣದ ವಿಶ್ವ ಮಾರುತೆಪ್ಪ ಕಳೆದ ಸೋಮವಾರ ರಾತ್ರಿ 10ಕ್ಕೆ ನಾಪತ್ತೆಯಾದ ವಿದ್ಯಾರ್ಥಿಗಳು. ಈ ಪ್ರಕರಣದ ಹಿನ್ನೆಲೆಯಲ್ಲಿ ಪ್ರಾಚಾರ್ಯ ಕೊಟ್ರೇಶ ತಳವಾರ ತಾವರಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾ.20ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿಯಾದ ಹಿನ್ನೆಲೆಯಲ್ಲಿ ಓದಿನ ಕಡೆಗೆ ಆಸಕ್ತಿ ಕಡಿಮೆ ಇದ್ದ ಈ ವಿದ್ಯಾರ್ಥಿಗಳು, ಪರೀಕ್ಷೆ ಎದುರಿಸಲಾಗದೇ, ಅನುತ್ತೀರ್ಣರಾಗುವ ಭೀತಿಗೆ ವಸತಿ ನಿಲಯದಿಂದ ಕಾಲ್ಕಿತ್ತಿದ್ದಾರೆ. ಈ ನಾಲ್ವರು ತಮ್ಮ ಬ್ಯಾಗಿನಲ್ಲಿ ಬಟ್ಟೆಗಳೊಂದಿಗೆ ಕಾಲ್ಕಿತ್ತರೆ ಅನುಮಾನ ಮರೆ ಮಾಚಲು ಒಂದೇ ಬ್ಯಾಗಿನಲ್ಲಿ ಬಟ್ಟೆಗಳ ಇಟ್ಟುಕೊಂಡು ನಾಪತ್ತೆಯಾಗಿದ್ದಾರೆ. ವಸತಿ ನಿಲಯದ ಆವರಣದ ಗೋಡೆ ಜಿಗಿದು, ನಾಪತ್ತೆಯಾಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಓದಿನಲ್ಲಿ ಹಿಂದೆ ಇದ್ದ ಈ ನಾಲ್ವರು ವಿದ್ಯಾರ್ಥಿಗಳು ದುಡಿಯುವ ಬಗ್ಗೆ ಮಾತಾಡಿಕೊಳ್ಳುತ್ತಿದ್ದರೆಂದು ಗೊತ್ತಾಗಿದೆ. ಈ ನಾಲ್ವರು ವಿದ್ಯಾರ್ಥಿಗಳು ವಸತಿ ನಿಲಯದ ಪಕ್ಕದ ತೋಟದ ಪೇರಲ ಹಣ್ಣುಗಳ ಕಿತ್ತುಕೊಂಡು ಬರಲು ಆಗಾಗ್ಗೆ ಆವರಣ ಗೋಡೆ ಹಾರಿದ್ದರು. ಅದೇ ರೀತಿ ಹೋಗಿದ್ದಾರೆಂದು ಊಹಿಸಲಾಗಿತ್ತು.
Related Articles
Advertisement