Advertisement
ಜ. 2ರಿಂದ ದಿಲ್ಲಿಯಲ್ಲಿ ವಿವಿಧ ಹಂತಗಳ ತರಬೇತಿ ನಡೆಯಲಿದ್ದು, ಇದಕ್ಕೆ ಪ್ರತಿ ಜಿಲ್ಲೆಯಿಂದ ಒಂದನೇ ತರಗತಿಯಿಂದ ಪಿಯುಸಿವರೆಗೆ ಬೋಧನೆ ಮಾಡುವ ಇಬ್ಬರು ಶಿಕ್ಷಕರನ್ನು ಈಗಾಗಲೇ ಆಯ್ಕೆ ಮಾಡಿ ಕಳುಹಿಸಲಾಗುತ್ತಿದೆ. ಒಟ್ಟು ಆರು ತಂಡಗಳನ್ನು ರಚಿಸಿದ್ದು, ಒಂದು ತಂಡದಲ್ಲಿ 10 ಶಿಕ್ಷಕರು ಇರಲಿದ್ದಾರೆ.
ಯಾಗಿ ಅರ್ಥವಾಗಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಹೀಗಾಗಿ ಶಿಕ್ಷಕರಿಗೆ ತರಬೇತಿಯ ಅಗತ್ಯವಿದ್ದು, ಸಿಸಿಆರ್‌ಟಿ ತರಬೇತಿ ಆಯೋಜನೆ ಮಾಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಸಕ್ತ ಸರಕಾರಿ-ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜಿನ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಈ ಬಾರಿ ಮುಖ್ಯವಾಗಿ ಕಲೆ ಮತ್ತು ಸಾಂಸ್ಕೃತಿಕ ಅಧ್ಯಯನದ ಕುರಿತು ತರಬೇತಿ ನೀಡಲಾಗುತ್ತಿದೆ. ಶಿಕ್ಷಕರು ಪಠ್ಯದಲ್ಲಿ ಕಲೆ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಹಾಗೂ ಮಕ್ಕಳಲ್ಲಿ ಕಲೆ-ಸಾಂಸ್ಕೃತಿಕ ಚಟುವಟಿಕೆಗಳು ವೃದ್ಧಿಯಾಗುವ ನಿಟ್ಟಿನಲ್ಲಿ ಹೇಗೆಲ್ಲ ಬೋಧನೆ ಮಾಡಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ಶಿಕ್ಷಕರು ತದನಂತರ ತಮ್ಮ ಜಿಲ್ಲೆಗೆ ಆಗಮಿಸಿ ಉಳಿದ ಶಿಕ್ಷಕರಿಗೆ ತರಬೇತಿ ನೀಡಬೇಕಿರುತ್ತದೆ.
Related Articles
ಮುಖ್ಯವಾಗಿ ಈ ತರಬೇತಿಯಲ್ಲಿ ಕೆಲ ಪ್ರಮುಖ ವಿಷಯಗಳನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣದಲ್ಲಿ ತೊಗಲುಗೊಂಬೆ ಪಾತ್ರದ ಕುರಿತು ಒಂದರಿಂದ ಐದನೇ ತರಗತಿ ಮಕ್ಕಳಿಗೆ ತಿಳಿ ಹೇಳುವುದು, ಆರರಿಂದ ಪಿಯುಸಿ ಮಕ್ಕಳಿಗೆ ಮುಖಾಮುಖೀ ಸಂವಹನ, ಒಂದರಿಂದ 10ನೇ ತರಗತಿ ಮಕ್ಕಳಿಗೆ ಕರಕುಶಲ ಕಲೆಗಳ ಬಗ್ಗೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಭೂ ಫಲವತ್ತತೆ ಹೆಚ್ಚಳ ಹಾಗೂ ನಮ್ಮ ಸಂಸ್ಕೃತಿ ಸಂರಕ್ಷಣೆ ಕುರಿತು ಕಲಿಕೆ ಮಾಡಲು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಅದರ ಜತೆಗೆ ಭೌಗೋಳಿಕ ಅಧ್ಯಯನ, ವಿಜ್ಞಾನ ಗಣಿತ, ಕಲೆ, ಸಂಗೀತ, ಯೋಗ, ದೈಹಿಕ ಶಿಕ್ಷಣ, ಚಿತ್ರಕಲೆ, ಕರಕುಶಲತೆ, ಆರ್ಥಿಕತೆ, ಇತಿಹಾಸ, ವಾಣಿಜ್ಯ ಶಾಸ್ತ್ರ ಸೇರಿದಂತೆ ಅನೇಕ ವಿಷಯಗಳ ತರಬೇತಿ ಕೂಡ ಇರಲಿದೆ.
Advertisement
ಸಿಸಿಆರ್‌ಟಿ ಈ ಬಾರಿ ಎನ್‌ಇಪಿ ಕುರಿತು ತರಬೇತಿ ನೀಡಲು ರಾಜ್ಯದ ಎಲ್ಲ ಜಿಲ್ಲೆಗಳಿಂದ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಈ ತರಬೇತಿ ಬಹಳ ಮಹತ್ವದ್ದಾಗಿದ್ದು, ಶಿಕ್ಷಕರ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ. ಅಲ್ಲಿ ಕಲಿತು ಬಂದ ಸಂಗತಿಗಳನ್ನು ಇಲ್ಲಿನ ಶಿಕ್ಷಕರಿಗೆ ವಿವರಿಸಬೇಕು. ಎನ್‌ಇಪಿಯಡಿ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಅಳವಡಿಕೆ ಕುರಿತು ಈ ಬಾರಿ ತರಬೇತಿ ನಡೆಯಲಿದೆ.-ಆರ್. ಇಂದಿರಾ, ಉಪನಿರ್ದೇಶಕರು, ಯರಮರಸ್ ಡಯಟ್-ರಾಯಚೂರು