Advertisement
ಸೆ. 20 ಮತ್ತು 23 ಆರೆಂಜ್ ಅಲರ್ಟ್ಸೆ. 21 ಮತ್ತು 22 ರೆಡ್ ಆಲರ್ಟ್ ಘೋಷಿಸಲಾಗಿದ್ದು ಈ ವೇಳೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ ಬೋಟುಗಳು ವಾಪಸಾಗುತ್ತಿವೆ.
ಆಳಸಮುದ್ರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗುತ್ತಿದ್ದು, ಇದರಿಂದ ಮೀನುಗಾರಿಕೆ ನಡೆಸಲಾಗದೆ ಬಹುತೇಕ ಬೋಟುಗಳು ಸಮೀಪದ ಬಂದರನ್ನು ಪ್ರವೇಶಿಸುತ್ತಿವೆ. ಮಲ್ಪೆಯ ಹಲವಾರು ಬೋಟುಗಳು ಕಾರವಾರ, ಗೋವಾ ಬಂದರಿಗೆ ತೆರಳಿವೆ. ಬಲವಾದ ಗಾಳಿ ಬೀಸುತ್ತಿದ್ದು ಬೃಹತ್ ಗಾತ್ರದ ಅಲೆಗಳಿಂದಾಗಿ ಮೀನಿಗೆ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಮೈಕ್ ಮೂಲಕ ಸೂಚನೆ
ಮೀನುಗಾರಿಕೆ ಇಲಾಖೆ ಈಗಾಗಲೇ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರರ ಸಂಘವು ಬಂದರಿನಲ್ಲಿ ಮೈಕ್ ಮೂಲಕ ಆಗಾಗ ಮುನ್ನೆಚ್ಚರಿಕೆಯನ್ನು ನೀಡುತ್ತಿದೆ ಎಂದು ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ತಿಳಿಸಿದ್ದಾರೆ.
Related Articles
ಆರೆಂಜ್ ಮತ್ತು ರೆಡ್ ಆಲರ್ಟ್ ಘೋಷಿಸಲಾಗಿದ್ದು, ಮುಂದಿನ ಮೂರ್‍ನಾಲ್ಕು ದಿನಗಳವರೆಗೆ ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಲ್ಲ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಆಳಸಮುದ್ರದಲ್ಲಿರುವ ಬೋಟುಗಳನ್ನು ಸಮೀಪದ ಬಂದರಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
-ಶಿವ ಕುಮಾರ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ
Advertisement