Advertisement
ಜ.15ರೊಳಗೆ ಕಾಮಗಾರಿ ಪೂರ್ಣ ಗೊಳಿಸುವುದಾಗಿ ಗುತ್ತಿಗೆಪಡೆದವರು ನಗರ ಠಾಣೆಯಲ್ಲಿ ಜನಪ್ರತಿನಿಧಿಗಳ ಎದುರು ಮುಚ್ಚಳಿಕೆ ಬರೆದುಕೊಟ್ಟಿರುವುದರಿಂದ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುವ ಸಾಧ್ಯತೆಯೂ ಹೆಚ್ಚಿದೆ. ಅಲ್ಲದೆ ಜಿಲ್ಲಾಧಿಕಾರಿಗಳು ಕೂಡ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕಾಮಗಾರಿ ಮಾತ್ರ ಆಮೆ ಗತಿಯಲ್ಲೇ ಸಾಗುತ್ತಿದೆ.
ಸದ್ಯ ಗರ್ಡರ್ ಜೋಡಣೆಯ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸೇತುವೆಯ ಒಂದು ರೂಪ ನಿರ್ಮಾಣವಾಗಿದೆ. ಒಂದು ಬದಿಯ ಮೇಲ್ಭಾಗದ ಹೊದಿಕೆಯನ್ನು ಅಳವಡಿಸುವುದು ಬಾಕಿಯಿದೆ. ಹಾಗೆಯೇ ಸೇತುವೆಯ ಮಧ್ಯದಲ್ಲಿ ಕಾಂಕ್ರೀಟ್ ರಸ್ತೆಗೆ ಬೇಕಾದ ಗರ್ಡರ್ ನಿರ್ಮಾಣ ಅರ್ಧದಷ್ಟು ಪೂರ್ಣಗೊಂಡಿದೆ. ಇನ್ನರ್ಧ ಬಾಕಿಯಿದೆ. ವೆಲ್ಡಿಂಗ್ ಕಾರ್ಯ ಸಾಕಷ್ಟು ಇದೆ. ಇಲಾಖೆಗಳ ಸಮನ್ವಯ ಇಲ್ಲ
ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೇ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯ ಮೊದಲಿನಿಂದಲೂ ಕೊರತೆಯಿದೆ. ಇಂದ್ರಾಳಿಯಲ್ಲಿ ಗರ್ಡರ್ ಬಂದು ತಿಂಗಳಾಗಿದ್ದರೂ ಕಾಮಗಾರಿ ಶುರುವಾಗಿರಲಿಲ್ಲ. ಅಪಘಾತ ಹೆಚ್ಚಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೇಲಿಂದ ಮೇಲೆ ಸಭೆ ಮಾಡಿ ಕಾಮಗಾರಿಗೆ ವೇಗ ನೀಡಿ ಗಡುವು ನಿಗದಿ ಪಡಿಸಿದ್ದರೂ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಕಾಮಗಾರಿ ನಿಗದಿತ ವೇಗದಲ್ಲಿ ನಡೆದೇ ಇಲ್ಲ. ರೈಲ್ವೇ ಇಲಾಖೆಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲೇ ಕಾಮಗಾರಿ ನಡೆಯುತ್ತಿರುವುದರಿಂದ ಎಲ್ಲದಕ್ಕೂ ಅನುಮತಿ ಕಡ್ಡಾಯವಾಗಿರುತ್ತದೆ. ಹೀಗಾಗಿ ಕಾಮಗಾರಿ ನಿರ್ದಿಷ್ಟ ಕಾಲಮಿತಿಯಲ್ಲಿ ಮುಗಿಸುವುದೇ ಸವಾಲು.
Related Articles
58 ಮೀಟರ್ ಉದ್ದದ ಸೇತುವೆ
12.50 ಮೀಟರ್ ಅಗಲ ಇರಲಿದೆ.
1.50 ಮೀಟರ್ ಪಾದಚಾರಿ ಮಾರ್ಗ ಸೇತುವೆಯ ಎರಡೂ ಭಾಗದಲ್ಲಿ ಇರಲಿದೆ.
Advertisement
ಸದ್ಯ ಇಂದ್ರಾಳಿ ಸೇತುವೆ ನಿರ್ಮಾಣ ಸಂಬಂಧ ಏಳೆಂಟು ಕಾರ್ಮಿಕರಿಂದ ನಿರಂತರ ವೆಲ್ಡಿಂಗ್ ಕಾರ್ಯ ನಡೆಯುತ್ತಿದೆ. ಹಾಗೆಯೇ ಸೇತುವೆ ಕೂರಿಸಲು ಅನುಕೂಲ ಆಗುವಂತೆ ಎರಡು ಭಾಗದಲ್ಲಿ ಕಾಂಕ್ರೀಟ್ ನಿಂದ ಸ್ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಹಾಗೆಯೇ ಈ ಹಿಂದೆ ನಿರ್ಮಿಸಿದ್ದ ಅಡ್ಡ ಪಟ್ಟಿಗಳನ್ನು ಇದೀಗ ಸ್ವತ್ಛಗೊಳಿಸಲಾಗಿದೆ. ಬ್ರಿಡ್ಜ್ ಎಳೆಯಲು ಬೇಕಾದ ಉಪಕರಣ ಮತ್ತು ಕಾಂಕ್ರೀಟ್ ಕಟ್ಟೆ ನಿರ್ಮಾಣವೂ ಪೂರ್ಣಗೊಂಡಿದೆ. ವೆಲ್ಡಿಂಗ್ ಹಾಗೂ ಗರ್ಡರ್ ಜೋಡಣೆ ಕಾರ್ಯ ಇನ್ನು ನಡೆಯುತ್ತಲೇ ಇದೆ. ಪ್ರಗತಿ ಪರಿಶೀಲನ ಸಭೆ
ಜ.15ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದೇವೆ. ಕಾಮಗಾರಿ ವೇಗವಾಗಿ ಸಾಗುತ್ತಿದೆ. ಹೀಗಾಗಿಯೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದ್ರಾಳಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯು ಜ.6ರಂದು ನಡೆಯಲಿದೆ.
-ಡಾ| ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ ಶೀಘ್ರ ಕಾಮಗಾರಿ
ನಿರ್ದಿಷ್ಟ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಸೂಚನೆ ನೀಡಿದ್ದೇವೆ ಮತ್ತು ಗುತ್ತಿಗೆದಾರರಿಂದ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗಿದೆ. ಹೀಗಾಗಿ ಕಾಮಗಾರಿ ಆದಷ್ಟು ಶೀಘ್ರ ಮುಗಿಯಲಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಂಸದ