Advertisement

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

11:38 PM Dec 28, 2024 | Team Udayavani |

ನವದೆಹಲಿ: ದೆಹಲಿಯಲ್ಲಿ ಚಳಿಗಾಲದ ಮಳೆ ಹೊಸ ದಾಖಲೆ ಬರೆದಿದೆ. ಶುಕ್ರವಾರದಿಂದೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಶನಿವಾರ ಬೆಳಗ್ಗೆ 8:30ರವರೆಗೆ 24 ಗಂಟೆಗಳಲ್ಲಿ 41.2 ಮಿ.ಮೀ.(4.1 ಸೆ.ಮೀ.) ಮಳೆಯಾಗಿದೆ.

Advertisement

ಈ ಮೂಲಕ ದೆಹಲಿ ಇತಿಹಾಸದಲ್ಲಿ 101 ವರ್ಷಗಳ ಬಳಿಕ ಡಿಸೆಂಬರ್‌ನ ದಿನವೊಂದರಲ್ಲಿ ಸುರಿದ ಅತ್ಯಧಿಕ ಮಳೆಯೆಂಬ ದಾಖಲೆ ಬರೆದಿದೆ.

1923ರ ಡಿ.3ರಂದು 75.7 ಮಿ.ಮೀ.(7.5 ಸೆ.ಮೀ.) ಮಳೆಯಾಗಿತ್ತು. ಏತನ್ಮಧ್ಯೆ ಭಾನುವಾರವೂ ಮಳೆ ಮುಂದುವರಿಯಲ್ಲಿದ್ದು, ಹವಾಮಾನ ಇಲಾಖೆ ಹಳದಿ ಅಲರ್ಟ್‌ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next