ಪುಣ್ಯವನ್ನು ಒಪ್ಪದವರಿಗೆ ಉಳಿದ ಶೇ.99ರಷ್ಟೂ ಜನರು ವಿರೋಧವಿದ್ದಾರೆ. ಪಾಪ ಉಂಟೆನ್ನುವುದನ್ನು ಏಕೆ ಒಪ್ಪಬೇಕು ಎಂದು ಪ್ರಶ್ನಿಸುತ್ತಾರೆ. ಶೇ.99ರಷ್ಟು ಜನರು ಅಪ್ರಾಮಾಣಿಕರು ಎಂದು ಶೇ.1ರಷ್ಟು ಜನರು ಹೇಳಿದಂತಾಯಿತು. ಬಹುಮತ ಸಿಕ್ಕಿದೆಯಲ್ಲ? ಕಲಿಯುಗದಲ್ಲಿ ಬಹುಮತ ಹೀಗೆಯೇ. ಲೋಕನಿಯಮದ ಪ್ರಕಾರ ಪುಣ್ಯಪಾಪ ಒಪ್ಪುವುದಾದರೆ ಒಪ್ಪದವ ನೀನೋಬ್ಬನೇ. ಎಲ್ಲರೂ ಬಟೆೆr ಹಾಕಿಕೊಂಡು ಒಬ್ಬ ಬೆತ್ತಲೆ ಬಂದರೆ ಆತ ಹುಚ್ಚನಾಗುತ್ತಾನೆ, ಎಲ್ಲರೂ ಬೆತ್ತಲೆ ಬಂದು ಒಬ್ಬ ಬಟ್ಟೆ ಉಟ್ಟುಕೊಂಡು ಬಂದರೆ ಆತನೂ ಹುಚ್ಚನಾಗುತ್ತಾನೆನ್ನುವ ಸ್ಥಿತಿ ಇದು. “ನನಗೆ ಈ ಆಗಮವೂ ಬೇಡ, ಅನುಮಾನವೂ ಬೇಡ. ನನಗಾವ ಮತವೂ ಬೇಡ, ಧರ್ಮಾತೀತ’ ಎನ್ನುತ್ತಾರಾದರೆ, ಇವರಿಗೆ ಪ್ರತ್ಯಕ್ಷ ಮಾತ್ರ ಸಾಕು. ಎಲ್ಲವನ್ನೂ ಪ್ರತ್ಯಕ್ಷದಿಂದ ಸಿದ್ಧಪಡಿಸಲು ಆಗುತ್ತದೋ? ಪ್ರತಿಯೊಂದು ಕ್ಷಣದಲ್ಲಿಯೂ ಪ್ರತ್ಯಕ್ಷ ಪ್ರಾಮಾಣ್ಯದಿಂದ ಕೆಲಸ ನಿರ್ವಹಿಸಲಾಗದು. ಪಂಚಾಂಗ, ಗಡಿಯಾರ, ಕಾರು ಯಾವುದನ್ನೂ ಪ್ರತ್ಯಕ್ಷ ಪ್ರಮಾಣವಿಲ್ಲದೆ ಒಪ್ಪಲಾಗದ ಸ್ಥಿತಿ ಬರುತ್ತದೆ. ಇವೆಲ್ಲವೂ ಹೇಗೆ ನಡೆಯುತ್ತದೆಂದು ತಿಳಿದೇ ಒಪ್ಪಬೇಕಾಗುತ್ತದೆ. ಹೀಗಾಗಬೇಕೆಂದರೆ ಒಂದು ಕ್ಷಣವೂ ಪ್ರಪಂಚದ ವ್ಯವಹಾರ ನಡೆಯುವುದಿಲ್ಲ. ಮಾತೂ, ವಾಕ್ಯಗಳೂ ಅಸಿಂಧುವಾಗುತ್ತದೆ. ಆದ್ದರಿಂದ ಇದು ಅವ್ಯಾವಹಾರಿಕವಾಗುತ್ತದೆ. ಕೊನೆಗೂ ವಾಕ್ಯ, ಆಗಮ, ಅನುಮಾನವನ್ನು ಒಪ್ಪಲೇಬೇಕು. ಇದು ಮುಗಿಯದ ಚರ್ಚೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811