Advertisement

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

03:00 AM Jan 07, 2025 | Team Udayavani |

ಬೆಂಗಳೂರು: ಕೌಟುಂಬಿಕ ಹಾಗೂ ಹಣಕಾಸಿನ ವಿಚಾರಕ್ಕೆ ತಮ್ಮ ಇಬ್ಬರು ಮಕ್ಕಳಿಗೆ ವಿಷವುಣಿಸಿ ಹತ್ಯೆಗೈದು ಬಳಿಕ ಡೆತ್‌ನೋಟ್‌ ಬರೆದಿಟ್ಟು ಟೆಕಿ ದಂಪತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸದಾಶಿವನಗರದಲ್ಲಿ ಸೋಮವಾರ ಸಂಭವಿಸಿದೆ.

Advertisement

ಉತ್ತರಪ್ರದೇಶ ಅಲಹಬಾದ್‌ ಮೂಲದ ಅನೂಪ್‌ (38) ಮತ್ತು ಪತ್ನಿ ರಾಖಿ (35) ತಮ್ಮ ಮಕ್ಕಳಾದ ಪುತ್ರಿ ಅನುಪ್ರಿಯಾ (5) ಮತ್ತು ಪ್ರಿಯಾಂಶ್‌ (2) ಅವರಿಗೆ ಊಟದಲ್ಲಿ ವಿಷ ಹಾಕಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಮುಂಜಾನೆ ಮನೆಕೆಲಸದಾಕೆ ಮನೆ ಬಳಿ ಬಂದಾಗ ದುರ್ಘ‌ಟನೆ ಬೆಳಕಿಗೆ ಬಂದಿದೆ. ಅನೂಪ್‌ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.

ಅನೂಪ್‌ ಮತ್ತು ರಾಖಿ  ಪ್ರೀತಿಸಿ ಮದುವೆಯಾಗಿದ್ದು, ಕುಟುಂಬ ಸದಸ್ಯರಿಂದ ದೂರವಾಗಿ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅನೂಪ್‌ ಸಾಫ್ಟ್ವೇರ್‌ ಕಂಪೆನಿಯಲ್ಲಿ ಕನ್ಸಲ್ಟೆಂಟ್‌ ಅಗಿ, ಪತ್ನಿ ಕೂಡ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಇಬ್ಬರು ವರ್ಕ್‌ಫ್ರಮ್‌ ಹೋಮ್‌ನಲ್ಲಿ ಇದ್ದರು. ಒಂದೂವರೆ ತಿಂಗಳ ಹಿಂದಷ್ಟೇ ದಂಪತಿ ಕೆಲಸ ಬಿಟ್ಟಿದ್ದು, ಪುಣೆಗೆ ತೆರಳಲು ತೀರ್ಮಾನಿಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಕುಟುಂಬದವರು ದೂರವಾಗಿದ್ದಕ್ಕೆ ನಮಗೆ ಬೇಸರ ಆಗಿದೆ: ಡೆತ್‌ನೋಟ್‌
ಅನೂಪ್‌ ಆತ್ಮಹತ್ಯೆಗೂ ಮೊದಲು ಒಂದು ಪುಟ ಡೆತ್‌ನೋಟ್‌ ಬರೆದು ಸಹೋದರ ಅಮಿತ್‌ಗೆ ಇ-ಮೇಲ್‌ ಮೂಲಕ ಕಳುಹಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ತಂದೆ ಸೇರಿ ಇಡೀ ಕುಟುಂಬ ಸದಸ್ಯರು ತನ್ನೊಂದಿಗೆ ಮಾತನಾಡುತ್ತಿಲ್ಲ. ಎಲ್ಲರೂ ದೂರವಾಗಿದ್ದೀರಿ. ಇದರಿಂದ ಬೇಸರವಾಗಿದೆ. ಇನ್ನು ಒಂದೂವರೆ ವರ್ಷದ ಹಿಂದೆ ರಾಕೇಶ್‌ ಎಂಬಾತ ಲಕ್ಷಾಂತರ ರೂ. ಪಡೆದು, ವಾಪಸ್‌ ಕೊಡದೆ ವಂಚಿಸಿದ್ದಾನೆ. ನನ್ನ ಮೊದಲನೆ ಮಗಳಿಗೆ ಬುದ್ಧಿಮಾಂಧ್ಯವಿದೆ. ಅದರಿಂದ ನಾವು ಖನ್ನತೆಗೊಳಗಾಗಿದ್ದೇವೆ. 2ನೇ ಮಗು ಆದರೂ ನೀವುಗಳು ಯಾರು ನನ್ನನ್ನು ಮಾತನಾಡಿಸುತ್ತಿಲ್ಲ. ಹೀಗಾಗಿ ಈ ನಿರ್ಧಾರ ಮಾಡುತ್ತಿದ್ದೇವೆ ಎಂದು ಉಲ್ಲೇ ಖಿಸಿದ್ದಾರೆ.

ಮನೆಗೆಲಸಕ್ಕೆ ಮೂವರ ನೇಮಕ
ಅನೂಪ್‌ ದಂಪತಿ ಮನೆಯ ಕೆಲಸಕ್ಕೆಂದೇ ಮೂವರನ್ನು ನೇಮಿಸಿಕೊಂಡಿದ್ದರು. ಸೋಮವಾರ ಬೆಳಗ್ಗೆ ಎಂದಿನಂತೆ ಮನೆಕೆಲಸದಾಕೆ ಮನೆಗೆ ಬಂದಾಗ ದುರ್ಘ‌ಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next