Advertisement

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

03:42 PM Jan 01, 2025 | Team Udayavani |

ಹುಬ್ಬಳ್ಳಿ: ಸುಲಿಗೆಕೋರನೊಬ್ಬ ತನ್ನ ಸಹಚರರೊಂದಿಗೆ ಕ್ಷುಲ್ಲಕ ವಿಚಾರವಾಗಿ ಚಾಕುವಿನಿಂದ ಇರಿದ ಪರಿಣಾಮ ತೀವ್ರ ಗಾಯಗೊಂಡಿದ್ದ ವ್ಯಕ್ತಿಯು ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

Advertisement

ಘಟನೆಯಲ್ಲಿ ಹಳೇ ಹುಬ್ಬಳ್ಳಿ ಆನಂದನಗರ ಘೋಡ್ಕೆ ಫ್ಲಾಟ್‌ ನಿವಾಸಿ ಸಮೀರ ಶೇಖ್ (19) ಮೃತಪಟ್ಟಿದ್ದಾರೆ. ಮಕ್ಕಳ ಜಗಳದ ವಿಷಯವಾಗಿ ಹಾಗೂ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಮುಜಾಮಿಲ್ ಎಂಬಾತನೇ ತನ್ನ ಸಹಚರರೊಂದಿಗೆ ಸೇರಿ‌ ಸೋಮವಾರ ರಾತ್ರಿ ಘೋಡ್ಕೆ ಫ್ಲಾಟ್‌ನ ತಬ್ಲಿಕ್ ಮಸೀದಿ ಬಳಿ ಸಮೀರ ಶೇಖ್ (19) ಹಾಗೂ ಈತನ ಚಿಕ್ಕಪ್ಪ ಜಾವೀದ್ ಶೇಖ್ (32) ಇವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ. ಈ ವೇಳೆ ಸಮೀರನ ಹೊಟ್ಟೆಗೆ ಚಾಕು ಇರಿದಿದ್ದರಿಂದ ಕಿಡ್ನಿಗೆ ಹೊಡೆತ ಬಿದ್ದು ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡಿದ್ದರು.

ಕೆಎಂಸಿಆರ್‌ಐ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ‌‌ ಸಮೀರ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈತನ ಚಿಕ್ಕಪ್ಪ ಜಾವೀದ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next