Advertisement

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

12:04 AM Jan 06, 2025 | Team Udayavani |

ಉಡುಪಿ: ರಾಜ್ಯ ಸರಕಾರದ ಯುವನಿಧಿಗೆ ಹೆಚ್ಚೆಚ್ಚು ನಿರುದ್ಯೋಗಿ ಪದವೀಧರರನ್ನು ನೋಂದಾಯಿಸಲು ಕಾಲೇಜುಗಳಲ್ಲಿ ಜ.6ರಿಂದ 20 ರವರೆಗೆ ನೋಂದಣಿ ಅಭಿಯಾನ ನಡೆಯಲಿದೆ.

Advertisement

ಪದವೀಧರ, ಸ್ನಾತಕೋತ್ತರ ಪದವೀಧರರರಿಗೆ ತಿಂಗಳಿಗೆ 3 ಸಾ. ರೂ. ಹಾಗೂ ಡಿಪ್ಲೊಮಾ ಮಾಡಿದವರಿಗೆ 1,500 ರೂ. ನಿರು ದ್ಯೋಗ ಭತ್ತೆ ನೀಡಲಾಗುವುದು. ಆದರೆ ಉದ್ಯೋಗ ಮಾಡುತ್ತಿಲ್ಲ ಎಂಬ ಸ್ವಯಂ ಘೋಷಣೆ ಪತ್ರವನ್ನು ಪ್ರತಿ ತಿಂಗಳು ನೀಡದ ಕಾರಣ ಫ‌ಲಾನುಭವಿಗಳ ಸಂಖ್ಯೆ ಕಡಿಮೆ ಎನ್ನುತ್ತಾರೆ ಅಧಿಕಾರಿಗಳು.

ರಾಜ್ಯದ ನಿವಾಸಿಗಳಾದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ತೇರ್ಗಡೆ ಹೊಂದಿ, 180 ದಿನಗಳ ಬಳಿಕವೂ ಉದ್ಯೋಗ ಸಿಗದಿರುವ ಹಾಗೂ ಉನ್ನತ ವ್ಯಾಸಂಗಕ್ಕೆ ದಾಖಲಾಗದವರು ನೋಂದಣಿ ಮಾಡಬಹುದು. ಪ್ರಾಂಶುಪಾಲರು 2023 ಮತ್ತು 2024ನೇ ಸಾಲಿ ನಲ್ಲಿ ತೇರ್ಗಡೆ ಹೊಂದಿದವರನ್ನು ನೋಂದಾಯಿಸಲು ನೋಂದಣಿ ಸಹಾಯ ಕೇಂದ್ರಗಳನ್ನು ಕಾಲೇಜು ಗಳಲ್ಲಿ ತೆರೆಯಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next