Advertisement

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

05:29 PM Sep 07, 2024 | Team Udayavani |

ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಗಣಪನ  ಆಗಮನಕ್ಕಾಗಿ  ಹಲವು ದಿನಗಳಿಂದ  ಕಾಯುತ್ತಿರುವ ದಿನ ಕೊನೆಗೂ ಬಂದೇ ಬಿಟ್ಟಿದೆ.ಹಿಂದೂ ಧರ್ಮೀಯರು ಒಂದೆಡೆ ಸೇರಿ ತಮ್ಮೂರಿನ ವಿನಾಯಕನನ್ನು ಬರಮಾಡಿಕೊಂಡು ಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬವೆಂದರೆ ಅದು  ನಮ್ಮೆಲ್ಲರ ಊರಿನಲ್ಲಿ ನಡೆಯುವ ಹಬ್ಬ ಚೌತಿ.

Advertisement

ಆದರೆ ಹಬ್ಬದ ಪ್ರಾರಂಭದಲ್ಲಿ ಇರುವ ಹುಮ್ಮಸ್ಸು ಕೊನೆಯವರೆಗೆ ಇರುವಂತೆ ಕಾಣುವುದಿಲ್ಲ .ಆಚರಣೆಯ ಭರದಲ್ಲಿ ಅದೆಷ್ಟೋ ಪರಿಸರಕ್ಕೆ ಹಾನಿಯಾಗುವಂತಹ  ಕೆಲಸವನ್ನು ನಮಗೂ ಅರಿವಿಲ್ಲದಂತೆ ಮಾಡಿರುತ್ತೇವೆ.  ಅದರ ಜೊತೆಗೆ ಏನೂ ಕಮ್ಮಿ ಇಲ್ಲದಂತೆ ರಾಸಾಯನಿಕವನ್ನು ಬಳಸಿ ತಯಾರಿಸಿದ ಕಲಫ‌ುìಲ್‌ ಗಣಪತಿ ವಿಗ್ರಹಗಳು ಕೂಡಾ.

ಪರಿಸರ ಮಾಲಿನ್ಯವು ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದ್ದು, ಅದ್ರಲ್ಲಿ ಹಬ್ಬಗಳ ಸಾಲಿಗೆ ಬಂದಾಗ ಗಣೇಶ ಚತುರ್ಥಿ ಸಂದರ್ಭದಲ್ಲಿ ಅತೀ ಹೆಚ್ಚು ಮಾಲಿನ್ಯವಾಗುವುದನ್ನು ಕಾಣುತ್ತೇವೆ. ಆದರೆ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಹೀಗೂ ಆಚರಿಸಬಹುದು..ಮಾರುಕಟ್ಟೆಯಲ್ಲಿ ವಿಧವಿಧ ಬಣ್ಣದ ಗಣೇಶ ವಿಗ್ರಹಗಳು ಇರುತ್ತವೆ.ಅದರ ಬದಲಾಗಿ ಮಣ್ಣಿನಿಂದ ತಯಾರಿಸಿದ,ಬಣ್ಣ ಬಳಸದಿರುವ ವಿಗ್ರಹಗಳನ್ನು ಪೂಜಿಸುವುದರಿಂದ ವಿಸರ್ಜನೆಯ ಸಂದರ್ಭದಲ್ಲಿ ಯಾವುದೇ ಆರೋಗ್ಯ ಹಾನಿಯಾಗುವಂತಹ ಸನ್ನಿವೇಶ ಇರುವುದಿಲ್ಲ. ಅದರಲ್ಲಿ ಬಳಸಿರುವ ಬೀಜದಿಂದ ಗಿಡ ಬೆಳೆಯುತ್ತದೆ.ರಂಗೋಲಿಯನ್ನು ಮಾಡುವಾಗ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಬಣ್ಣಗಳನ್ನು ಬಳಸುವ ಬದಲಾಗಿ ಗೋರಂಟಿ,ಅಕ್ಕಿ ,ಮೆಹೆಂದಿ ಅರಿಶಿಣ ಪುಡಿ ಇಂತಹ ವಿಘಟನೆ ಆಗುವಂತಹ ಬಣ್ಣಗಳನ್ನು ಬಳಸಿ ಋಣಾತ್ಮಕ ತೊಂದರೆಗಳನ್ನು ತಡೆಯಬಹುದಾಗಿದೆ. ನ್ಯೆವೇದ್ಯ, ಪ್ರಸಾದವನ್ನು ಪ್ಲಾಸ್ಟಿಕ್‌ ಚೀಲ ಗಳಲ್ಲಿ ನೀಡುವ ಬದಲಾಗಿ ಬಟ್ಟೆ  ಚೀಲ ಬಳಸುವುದರಿಂದ ಮರುಬಳಕೆ ಸಹ ಮಾಡಬಹುದಾಗಿದೆ.ನದಿ, ಸರೋವರ ಹೀಗೆ ನೈಸರ್ಗಿಕ ನೀರಿನ ಮೂಲಗಳಲ್ಲಿ ವಿನಾಯಕನ ವಿಗ್ರಹ ವಿಸರ್ಜನೆ ಮಾಡುವುದರಿಂದ ಅದನ್ನೇ ಅವಲಂಬಿಸಿ ಜೀವನ ನಡೆಸುವ ಜನರಿಗೆ ಆರೋಗ್ಯ ತೊಂದರೆ ಉಂಟಾಗುತ್ತದೆ.ಆದ್ದರಿಂದ ಕೃತಕ ಟ್ಯಾಂಕYಳನ್ನು ತಯಾರಿಸಿ ಅದರಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದರೆ ನಕಾರಾತ್ಮಕ ಪರಿಣಾಮವನ್ನು ತಡೆಯಬಹುದು.

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಯಾವುದೇ ಆಚರಣೆ,ಹಬ್ಬಗಳು ಇನ್ನೊಂದು ಜೀವಕ್ಕೆ ಸಂತೋಷ ನೀಡುವಂತಿರಬೇಕೇ ಹೊರತು ತೊಂದರೆ ನೀಡುವಂತಿರಬಾರದು.

- ಶೈನಿತಾ

Advertisement

ಸುಬ್ರಹ್ಮಣ್ಯ

Advertisement

Udayavani is now on Telegram. Click here to join our channel and stay updated with the latest news.

Next